ಮಡಿಕೇರಿ: ಇಲ್ಲಿನ ಐತಿಹಾಸಿಕ ಮುತ್ತಪ್ಪ ದೇಗುಲದಲ್ಲಿ ಏ. 1ರಿಂದ 4ರವರೆಗೆ ಪುನರ್ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಹಾಗೂ ಜಾತ್ರಾ ಮಹೋತ್ಸವ ನಡೆಯಲಿದೆ.

‘ಕ್ಷೇತ್ರದ ತಂತ್ರಿ ಕೇರಳದ ಪಯ್ಯನ್ಯೂರಿನ ಕುನ್ನತ್ತಿಲ್ಲತ್ ಮುರಳಿ ಕೃಷ್ಣ ನಂಬೂದರಿ ಹಾಗೂ ಪರಿಶಿನಿಕಡವು ಮುತ್ತಪ್ಪ ಕ್ಷೇತ್ರದ ಬ್ಲಾತೂರ್ ಚಂದ್ರನ್ ಮಡೆಯಚ್ಚನ್ ನೇತೃತ್ವದಲ್ಲಿ ಈ ಮಹೋತ್ಸವ ನಡೆಯಲಿದೆ‘ ಎಂದು ಮುತ್ತಪ್ಪ ದೇವಾಲಯ ಸಮಿತಿ ಅಧ್ಯಕ್ಷ ಟಿ.ಕೆ.ಸುಧೀರ್ ಇಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪುನರ್ ಪ್ರತಿಷ್ಠಾಪನಾ ವಾರ್ಷಿಕೋತ್ಸವವು ಏಪ್ರಿಲ್ 1ರಂದು ಸಂಜೆ 6.30ರಿಂದ ಆರಂಭವಾಗಲಿದೆ. 2ರಂದು ಬೆಳಿಗ್ಗೆ 7 ಗಂಟೆಗೆ ಗಣಪತಿ ಹೋಮ, 9ಕ್ಕೆ ಸುಬ್ರಹ್ಮಣ್ಯಸ್ವಾಮಿಗೆ ಅಷ್ಟಾಭಿಷೇಕ, 10ಕ್ಕೆ ಅಯ್ಯಪ್ಪಸ್ವಾಮಿಗೆ ತುಪ್ಪಾಭಿಷೇಕ, 11ಕ್ಕೆ ನಾಗದೇವರಿಗೆ ತಂಬೀಲ ಸಮರ್ಪಣೆ, 11.30ಕ್ಕೆ ಕಲಶಾಭಿಷೇಷಕ, ಮಧ್ಯಾಹ್ಮ 12ಕ್ಕೆ ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯಲಿದೆ ಎಂದು ಹೇಳಿದರು.

ಉತ್ಸವ ಸಮಿತಿ ಅಧ್ಯಕ್ಷ ಬಿ.ಕೆ.ರವೀಂದ್ರ ರೈ ಮಾತನಾಡಿ, ’ಏಪ್ರಿಲ್ 2ರಂದು ಸಂಜೆ 4 ಗಂಟೆಗೆ ಧ್ವಜಾರೋಹಣ ಮಾಡುವುದರ ಮೂಲಕ ಮುತ್ತಪ್ಪ ದೇವರ ಜಾತ್ರಾ ಮಹೋತ್ಸವ ಆರಂಭವಾಗಲಿದೆ. 4.30ಕ್ಕೆ ಮುತ್ತಪ್ಪ ದೇವರ ಮಲೆ ಇಳಿಸುವುದು, 5.30ಕ್ಕೆ ಮುತ್ತಪ್ಪ ದೇವರ ವೆಳ್ಳಾಟಂ (ತೆರೆ) ನಡೆಯಲಿದೆ. 6.30ಕ್ಕೆ ಭಗವತಿ ದೇವಿಗೆ ದೀಪಾರಾಧನೆ ಮತ್ತು ಪುಷ್ಪಾರ್ಚನೆ ನಡೆಯಲಿದೆ. ನಂತರ 7 ಕ್ಕೆ ಹರಕೆ ಕೋಲಗಳು ನಡೆಯಲಿವೆ. ಏಪ್ರಿಲ್ 3ರಂದು ಸಂಜೆ 5.30ಕ್ಕೆ ಮುತ್ತಪ್ಪ ದೇವರ ಕಲಶ ಮೆರವಣಿಗೆಯು ಗಾಂಧಿ ಮೈದಾನದಿಂದ ಹೊರಡಲಿದೆ. ನಗರದ ನಾಲ್ಕೂ ದಿಕ್ಕಿನಿಂದ ಹೊರಡುವ ಈ ಮೆರವಣಿಗೆಯಲ್ಲಿ ಕಲಾತಂಡಗಳು, ಚಂಡೆ ವಾದ್ಯಗಳ ಸಹಿತ ಆಕರ್ಷಕ ವಿದ್ಯುತ್ ಅಲಂಕೃತ ಮಂಟಪಗಳು ಇರಲಿವೆ ಎಂದು ಹೇಳಿದರು.

ಬಳಿಕ ಸಂಜೆ 4ಕ್ಕೆ ಮುತ್ತಪ್ಪ ದೇವರ ಮಲೆ ಇಳಿಸುವುದು, 4.30ಕ್ಕೆ ಶಾಸ್ತಪ್ಪ ದೇವರ ವೆಳ್ಳಾಟಂ, 5.30ಕ್ಕೆ ಮುತ್ತಪ್ಪ ದೇವರ ವೆಳ್ಳಾಟಂ, 7 ಗಂಟೆಗೆ ವಿಷ್ಣುಮೂರ್ತಿ ಮೇಲೇರಿಗೆ ಅಗ್ನಿ ಸ್ಪರ್ಶ, ರಾತ್ರಿ 8.40ರಿಂದ 10.30ರವರೆಗೆ ಅನ್ನಸಂತರ್ಪಣೆ ಇರಲಿದೆ ಎಂದರು.

ರಾತ್ರಿ 9.30ಕ್ಕೆ ಪೊವದಿ ವೆಳ್ಳಾಟಂ, 10.30ಕ್ಕೆ ವಿಷ್ಣುಮೂರ್ತಿ ವೆಳ್ಳಾಟಂ, ರಾತ್ರಿ 12ಕ್ಕೆ ಶಿವಭೂತ ತೆರೆ, 1 ಗಂಟೆಗೆ ಗುಳಿಗ ದೇವರ ತೆರೆ, 2 ಗಂಟೆಗೆ ಕಳಗ ಪಾಟ್, ಸಂದ್ಯಾವೇಲೆ, 2.30ಕ್ಕೆ ಕುಟ್ಟಿಚಾತನ್ ದೇವರ ತೆರೆ ನಡೆಯಲಿದೆ ಎಂದು ತಿಳಿಸಿದರು.

ಮರುದಿನ ಏಪ್ರಿಲ್ 4ರಂದು ಬೆಳಿಗ್ಗೆ 4 ಗಂಟೆಗೆ ಶ್ರೀ ಮುತ್ತಪ್ಪ ಮತ್ತು ಶ್ರೀ ತಿರುವಪ್ಪ ದೇವರ ತೆರೆ, 5ಕ್ಕೆ ವಿಷ್ಣುಮೂರ್ತಿ ದೇವರ ಮೇಲೇರಿ, 8 ಗಂಟೆಗೆ ಪೋದಿ ತೆರೆ, 9.30ಕ್ಕೆ ವಿಷ್ಣುಮೂರ್ತಿ ದೇವರ ಬಾರಣೆ, ಮಧ್ಯಾಹ್ಯ 11.30 ಕ್ಕೆ ಧ್ವಜ ಅವರೋಹಣ ನಡೆಯಲಿದೆ ಎಂದು ಹೇಳಿದರು.

ದೇಗುಲದ ಪ್ರಮುಖರಾದ ಕೆ.ಎಸ್.ರಮೇಶ್, ಕಾಳಚಂಡ ರಾಣಿ ಗಣಪತಿ, ಉನ್ನಿಕೃಷ್ಣ, ವಾಸುದೇವ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260401-51-1210804998

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.