ಮಡಿಕೇರಿ: ನಗರದ ಕಲಾ ಕಾವ್ಯ ನಾಟ್ಯ ಶಾಲೆಯ ವತಿಯಿಂದ ಏಪ್ರಿಲ್ 8ರಂದು ಇಲ್ಲಿನ ಮೈತ್ರಿ ಸಭಾಂಗಣದಲ್ಲಿ ವಿದ್ಯಾರ್ಥಿಗಳಿಂದ ಎರಡು ಯಕ್ಷಗಾನ ಪ್ರಸಂಗಗಳ ಪ್ರದರ್ಶನಗಳು ನಡೆಯಲಿವೆ.

ಈ ವಿದ್ಯಾರ್ಥಿಗಳು 6 ತಿಂಗಳ ಕಾಲ ತರಬೇತಿ ಪಡೆದಿದ್ದಾರೆ ಎಂದು ನಾಟ್ಯ ಶಾಲೆಯ ವಿದುಷಿ ಕಾವ್ಯಶ್ರೀ ಕಪಿಲ್ ದುಗ್ಗಳ ಇಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

8ರಂದು ಮಧ್ಯಾಹ್ನ 1 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಬಳಿಕ 8 ವಿದ್ಯಾರ್ಥಿಗಳು ಗಣಪತಿ ಸ್ತುತಿಯನ್ನು ಪ್ರಸ್ತುತಪಡಿಸಲಿದ್ದಾರೆ. ನಂತರ 2.30 ಗಂಟೆ ಅವಧಿಯ ’ಶ್ರೀ ದೇವಿ ಮಹಾತ್ಮೆ‘ ಕಥಾ ಪ್ರಸಂಗವನ್ನು 20 ಮಕ್ಕಳು ಪ್ರಸ್ತುತ ಪಡಿಸಲಿದ್ದಾರೆ. ಮಧ್ಯಾಹ್ನ 1.30 ಗಂಟೆ ಅವಧಿಯ ’ವೀರ ಅಭಿಮನ್ಯು‘ ಪ್ರಸಂಗವನ್ನು 12 ಮಕ್ಕಳು ಪ್ರಸ್ತುತಪಡಿಸಲಿದ್ದಾರೆ ಎಂದರು.

ಈ ಯಕ್ಷಗಾನ ಪ್ರಸಂಗಗಳ ಭಾಗವತಿಕೆಯನ್ನು ರಾಮಪಡ್ರೆ ಅವರು ನಡೆಸಿಕೊಡಲಿದ್ದು, ಚಂಡೆ ಮದ್ದಳೆಯಲ್ಲಿ ಬಾಲಸುಬ್ರಹ್ಮಣ್ಯ ಭಟ್ ಗುತ್ತಿಗಾರು, ಬಾಲಕೃಷ್ಣ ಬೊಮ್ಮಾರ್, ಅಭವ್ ಸೋಣಂಗೇರಿ, ಚಕ್ರತಾಳದಲ್ಲಿ ಗಿರೀಶ್ ಕಕ್ಕೆಬೆಟ್ಟು ಸಾಥ್ ನೀಡಲಿದ್ದಾರೆ. ಯಕ್ಷಗಾನ ಪಾತ್ರಧಾರಿಗಳ ವೇಷಭೂಷಣವನ್ನು ಕಲ್ಮಡ್ಕದ ರಂಗ ಸೌರಭದವರು ನಿರ್ವಹಿಸಲಿದ್ದಾ ಎಂದು ತಿಳಿಸಿದರು.

ಸಾಹಿತಿ ಸುಬ್ರಾಯ ಸಂಪಾಜೆ, ಸವಣೂರಿನ ಶ್ರವಣರಂಗ ಪ್ರತಿಷ್ಠಾನದ ಯಕ್ಷಗಾನ ಗುರು ತಾರಾನಾಥ್ ಸವಣೂರು, ಶಿಶು ಕಲ್ಯಾಣ ಸಂಸ್ಥೆಯ ಅಧ್ಯಕ್ಷ ರವೀಂದ್ರ ರೈ ಪಾಲ್ಗೊಳ್ಳಲಿದ್ದಾರೆ ಎಂದರು.

ಒಟ್ಟು 38 ಮಂದಿ ಹೆಣ್ಣು ಮಕ್ಕಳು ಮತ್ತು ಇಬ್ಬರು ಬಾಲಕರನ್ನು ಒಳಗೊಂಡಂತೆ 40 ಮಂದಿಗೆ ಯಕ್ಷಗಾನದ ಹಿರಿಯ ಕಲಾವಿದರಾದ ಬಾಲಕೃಷ್ಣ ನಾಯರ್ ಅವರ ಮೂಲಕ 6 ತಿಂಗಳ ಕಾಲ ಯಕ್ಷಗಾನದ ಪ್ರಾಥಮಿಕ ಪಾಠದೊಂದಿಗೆ, ಎರಡು ಯಕ್ಷಗಾನ ಪ್ರಸಂಗಗಳನ್ನು ಕಲಿಸಲಾಗಿದೆ ಎಂದರು.

ನಾಟ್ಯ ಶಾಲೆಯ ವಿದ್ಯಾರ್ಥಿ ಹಾಗೂ ಪೋಷಕರಾದ ಡಾ.ಶೈಲಾಶ್ರೀ, ಪೋಷಕರಾದ ಪ್ರೀತು ಗಯಾ, ಗಾನಶ್ರೀ ನಿಡ್ಯಮಲೆ, ವಿದ್ಯಾರ್ಥಿಗಳಾದ ಚಂದ್ರಾವತಿ, ಎ.ಇಂಚರ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260407-51-788351146

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.