ಮಡಿಕೇರಿ: ಒಬ್ಬ ಮಹಿಳೆ ಮತ್ತು ಸಾಕಾನೆಯೊಂದರ ಸಾವಿಗೆ ಕಾರಣವಾಗಿದೆ ಎಂಬ ಆರೋಪ ಹೊತ್ತಿರುವ ಕಂಜನ್ (26) ಯುವ ಆನೆ. ಹುಡುಗುಬುದ್ದಿ ಸ್ವಭಾವದ ಈತನ ಮೇಲೆ ಎಲ್ಲರೂ ವಕ್ರದೃಷ್ಟಿ ಬೀರತೊಡಗಿದ್ದಾರೆ. ಅರಣ್ಯ ಖಾತೆ ಸಚಿವ ಈಶ್ವರ ಬಿ ಖಂಡ್ರೆ ಅವರು ಮೈಸೂರು ದಸರೆಯಲ್ಲಿ ಕರೆತರಲೇಬೇಡಿ ಎಂದು ಆದೇಶವನ್ನೂ ನೀಡಿದ್ದಾರೆ. ಆದರೆ, ವಾಸ್ತವದಲ್ಲಿ ಈತ ಶಾಂತ ಸ್ವರೂಪದ ಆನೆ ಎಂದು ಮಾವುತರು ಹೇಳುತ್ತಾರೆ.

ಎಲ್ಲೋ ಕೆಲವು ನಿಮಿಷಗಳ ಕಾಲ ಮಾತ್ರ ವ್ಯಗ್ರನಾಗುವ ಈತನ ಸ್ವಭಾವವನ್ನು ಇದೀಗ ಅರ್ಥ ಮಾಡಿಕೊಳ್ಳುವುದೇ ಸವಾಲಾಗಿ ಪರಿಣಮಿಸಿದೆ.

2014ರಲ್ಲಿ ಹಾಸನ ಜಿಲ್ಲೆಯಲ್ಲಿ ಸೆರೆ ಹಿಡಿದ ಒಟ್ಟು 22 ಕಾಡಾನೆಗಳ ಪೈಕಿ ಈ ಆನೆಯೂ ಒಂದು. ನೋಡುವುದಕ್ಕೆ ಬಲಶಾಲಿಯಂತೆ ಉದ್ದನೆಯ ದಂತಗಳನ್ನು ಹೊಂದಿರುವ ಈ ಆನೆ ದಸರೆಗಿಂತ ಹೆಚ್ಚಾಗಿ ಕಾಡಾನೆ ಸೆರೆ ಕಾರ್ಯಾಚರಣೆಗೆ ಅತಿ ಅಗತ್ಯವಾಗಿ ಬೇಕಾದ ಅನೆ ಎನಿಸಿದೆ.

ತನ್ನ ದಂತಗಳಿಂದ ಎಂತಹುದೇ ಕಾಡಾನೆಯನ್ನಾದರೂ ಇದು ಕ್ಷಣಮಾತ್ರದಲ್ಲಿ ದೂಡಿಕೊಂಡು ಬರುತ್ತದೆ. ಹಾಗಾಗಿ, ಕಾಡಾನೆ ಸೆರೆಯ ತಂಡದಲ್ಲಿ ಈ ಆನೆಗೆ ಮೊದಲಿನಿಂದಲೂ ಸ್ಥಾನ ನೀಡಲಾಗಿದೆ.

ಒಟ್ಟು 12 ವರ್ಷಗಳ ಕಾಲ ಇಲ್ಲಿನ ದುಬಾರೆಯಲ್ಲಿರುವ ಈ ಆನೆ ಸೌಮ್ಯ ಸ್ವಭಾವದ ಆನೆ ಎಂದೇ ಹೆಸರಾಗಿದೆ. ಹಾಗಾಗಿಯೇ, ಇದನ್ನು 2023ರಿಂದಲೂ ದಸರೆಯಲ್ಲಿ ಬಳಸಿಕೊಳ್ಳಲಾಗುತ್ತಿತ್ತು. ಆದರೆ, 2024ರಲ್ಲಿ ಧನಂಜಯ ಆನೆ ಜೊತೆಗೆ ಜಗಳ ಮಾಡಿಕೊಂಡಿದ್ದ ಈತ ಅರಮನೆ ಮುಂದಿನ ರಸ್ತೆಗೂ ಬಂದು ಆತಂಕ ಸೃಷ್ಟಿಸಿದ್ದ. ಇಷ್ಟು ಮಾತ್ರವಲ್ಲ, ವಾಪಸ್ ಬಂದ ಬಳಿಕ ಕುಶಾಲನಗರದ ದುಬಾರೆಯ ಶಿಬಿರದಲ್ಲಿ ಧನಂಜಯನ ಮೇಲೆ ಆಕ್ರಮಣ ಮಾಡಿದ್ದ.

ಇಷ್ಟೆಲ್ಲ ಘಟನೆಗಳ ತರುವಾಯ ಈ ಆನೆ ಮತ್ತೆ ಸೌಮ್ಯವಾಗುತ್ತಿತ್ತು. ಇಷ್ಟು ಸೌಮ್ಯ ಸ್ವಭಾವದ ಆನೆ ಮತ್ತೊಂದಿಲ್ಲ ಎಂದು ಎನಿಸುತ್ತಿತ್ತು. ಹಾಗಾಗಿಯೇ, ಮರು ವರ್ಷ ಅಂದರೆ 2025ರಲ್ಲೂ ಈ ಆನೆಯನ್ನು ದಸರೆಗೆ ಆಯ್ಕೆ ಮಾಡಲಾಗಿತ್ತು ಎಂದು ಹೆಸರು ಬಹಿರಂಗಪಡಿಸಲು ಬಯಸದ ಅರಣ್ಯಾಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಹಲವು ಹತ್ತು ಕಾಡಾನೆ ಸೆರೆ ಕಾರ್ಯಾಚರಯಲ್ಲಿ ಭಾಗಿಯಾಗಿರುವ ಈ ಕಂಜನ್ ಮುಂದೆಯೂ ಕಾಡಾನೆ ಸೆರೆ ಕಾರ್ಯಾಚರಣೆಗೆ ಅನಿವಾರ್ಯ ಮಾತ್ರವಲ್ಲ ಅಗತ್ಯವೂ ಹೌದು. ಹಾಗಾಗಿ, ಆತನ ಸೇವೆ ದಸರೆಗೆ ಸಿಗದೇ ಹೋದರೂ ಕಾಡಾನೆ ಸೆರೆಯಂತಹ ಕಾರ್ಯಾಚರಣೆಗೆ ಲಭ್ಯವಾಗಲಿದೆ.

26 ವರ್ಷದ ಕಂಜನ್ ಕಿರಿಯ ಆನೆಯು 56 ವರ್ಷದ ಹಿರಿಯ ಆನೆ ಮಾರ್ತಾಂಡನ ಮೇಲೆ ದಾಳಿ ನಡೆಸಿರುವುದಕ್ಕೆ ಬಗೆಬಗೆಯ ವಿಶ್ಲೇಷಣೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ನಡೆಯುತ್ತಿವೆ. ವಯಸ್ಸಿನಲ್ಲಿ ಕಂಜನ್ ಕಿರಿಯನಾದರೂ ದುಬಾರೆ ಶಿಬಿರಕ್ಕೆ ಹಿರಿಯ ಆನೆ. 2014ರಲ್ಲೇ ಶಿಬಿರ ಪ್ರವೇಶಿಸಿದ್ದ ಕಂಜನ್ ಬರೋಬರಿ 12 ವರ್ಷಗಳ ಕಾಲ ಶಿಬಿರದಲ್ಲಿದ್ದಾನೆ. ಆದರೆ, ಮಾರ್ತಾಂಡ ಆನೆಯನ್ನು 2023ರಲ್ಲಿ ಸೆರೆ ಹಿಡಿದು ತರಲಾಗಿತ್ತು. ಹಾಗಾಗಿ, ಹೊಸದಾಗಿ ಬಂದ ಮಾರ್ತಾಂಡನೊಂದಿಗೆ ಹೊಂದಿಕೊಳ್ಳಲು ಆಗದ ಕಾರಣಕ್ಕೆ ದಾಳಿ ಎಸಗಿರಬಹುದೇ ಎಂಬ ಪ್ರಶ್ನೆಯೂ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಕ್ತವಾಗುತ್ತಿದೆ.

ಆದರೆ, ಈ ಎಲ್ಲ ವಿಶ್ಲೇಷಣೆಗಳನ್ನೂ ತಳ್ಳಿ ಹಾಕಿರುವ ವನ್ಯಜೀವಿ ಪ್ರಿಯರು, ಪ್ರಾಣಿ ವೈದ್ಯರು ವನ್ಯಜೀವಿಗಳ ಸ್ವಭಾವವನ್ನು ಅಷ್ಟು ಸುಲಭದಲ್ಲಿ ಅರ್ಥೈಸಿಕೊಳ್ಳಲಾಗದು. ಈ ಘಟನೆ ಕೆಲವೆ ನಿಮಿಷಗಳಲ್ಲಿ ನಡೆದಿದ್ದು, ಒಂದು ಬಗೆಯ ಅನಿರೀಕ್ಷಿತ, ಆಕಸ್ಮಿಕ ಘಟನೆ ಎಂದು ಪ್ರತಿಪಾದಿಸುತ್ತಿದ್ದಾರೆ.

ಮಾರ್ಗಸೂಚಿ ಪಾಲನೆ ಉಸ್ತುವಾರಿ ಸಚಿವ ಸೂಚನೆ

ದುಬಾರೆ ಸಾಕಾನೆ ಶಿಬಿರದಲ್ಲಿ ಸೋಮವಾರ ನಡೆದ 2 ಸಾಕಾನೆಗಳ ನಡುವೆ ಉಂಟಾದ ಘರ್ಷಣೆ, ಅದರಿಂದ ಆನೆ ಮತ್ತು ಮಹಿಳೆ ಸಾವನ್ನಪ್ಪಿದಂತಹ ಘಟನೆಗಳು ಮತ್ತೆ ಉಂಟಾಗದಂತೆ ತಡೆಯಲು ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಪಾಲನೆ ಮಾಡಬೇಕು ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಬೋಸರಾಜು ಸೂಚಿಸಿದ್ದಾರೆ.

ಮೃತಪಟ್ಟ ಮಹಿಳೆಯ ಕುಟುಂಬಕ್ಕೆ ಅರಣ್ಯ ಇಲಾಖೆ ವತಿಯಿಂದ ತಕ್ಷಣವೇ ₹20 ಲಕ್ಷ ಪರಿಹಾರ ನೀಡಲಾಗುವುದು ಎಂದು ಅವರು ಹೇಳಿದ್ದಾರೆ.

ಘಟನೆಗೆ ಕುರಿತು ಕೊಡಗು ಜಿಲ್ಲಾಧಿಕಾರಿಗಳು, ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಿರುವೆ. ಘಟನೆಗೆ ನಿಖರ ಕಾರಣಗಳೇನು ಮತ್ತು ಪ್ರವಾಸಿ ಮಾರ್ಗಸೂಚಿ ನಿರ್ವಹಣೆಯಲ್ಲಿ ಏನಾದರೂ ಲೋಪವಾಗಿದೆಯೇ ಎಂಬ ಬಗ್ಗೆ ಸಮಗ್ರ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಅವರು ತಿಳಿಸಿದ್ದಾರೆ.

ಅಧಿಕಾರಿಗಳು ಮತ್ತು ಸಿಬ್ಬಂದಿ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ನಿಗಾವಹಿಸಬೇಕು. ಜಿಲ್ಲಾಡಳಿತವು ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. ಅರಣ್ಯ ಪ್ರದೇಶಗಳು ಹಾಗೂ ಆನೆ ಶಿಬಿರಗಳಿಗೆ ಭೇಟಿ ನೀಡುವ ಪ್ರವಾಸಿಗರು ಅರಣ್ಯ ಇಲಾಖೆಯ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಪ್ರಾಣಿಗಳನ್ನು ವೀಕ್ಷಿಸುವಾಗ ಅಂತರ ಕಾಯ್ದುಕೊಳ್ಳಬೇಕು ಎಂದು ಅವರು ಸಾರ್ವಜನಿಕರಿಗೆ ಸಲಹೆ ನೀಡಿದ್ದಾರೆ.

ಪಟ್ಟದಾನೆಯ ಗೌರವ

ಮೈಸೂರು ಅರಮನೆಯ ಖಾಸಗಿ ದರ್ಬಾರ್ ಹಾಗೂ ಸಾಂಪ್ರದಾಯಿಕ ಕಾರ್ಯಕ್ರಮಗಳಿಗೆ ‘ಪಟ್ಟದ ಆನೆ’ಯಾಗಿ ‘ಕಂಜನ್’ 2024ರಲ್ಲಿ ಆಯ್ಕೆಯಾಗಿತ್ತು. ಆಗ ತನ್ನ ‘ಪಟ್ಟದ ಆನೆ’ ಜವಾಬ್ದಾರಿಯನ್ನು ಯಾವುದೇ ಬೇಸರ ಇಲ್ಲದೇ ನಿಭಾಯಿಸಿದ್ದ.

ಮಾರ್ತಾಂಡ ನಿಧನ; ಈಶ್ವರ ಖಂಡ್ರೆ ಸಂತಾಪ

ದುಬಾರೆ ಆನೆ ಶಿಬಿರದಲ್ಲಿ ಮಾರ್ತಾಂಡ ಆನೆ ಮೃತಪಟ್ಟಿರುವುದಕ್ಕೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಸಂತಾಪ ವ್ಯಕ್ತಪಡಿಸಿದ್ದಾರೆ.

ಅನಿರೀಕ್ಷಿತವಾದ ಮತ್ತು ಊಹಿಸಲೂ ಆಗದ ದುರ್ಘಟನೆಯಲ್ಲಿ ಒಬ್ಬ ಪ್ರವಾಸಿ ಮಹಿಳೆ ಮತ್ತು ಒಂದು ಆನೆ ಮೃತಪಟ್ಟಿರುವುದು ಅತ್ಯಂತ ದುಃಖದ ಸಂಗತಿ ಎಂದು ತಿಳಿಸಿದ್ದಾರೆ.

ಕಂಜನ್ ಆನೆಯನ್ನು ಇನ್ನು ಮುಂದೆ ದಸರಾ ಮಹೋತ್ಸವಕ್ಕೆ ಈ ಆನೆಯನ್ನು ಬಳಸದಂತೆ ಸೂಚಿಸಿರುವುದಾಗಿಯೂ ಅವರು ಹೇಳಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260520-51-1036918946

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.