ವಿರಾಜಪೇಟೆ: ಮಲೆತಿರಿಕೆ ಬೆಟ್ಟದ ಮಲೆಮಹಾದೇಶ್ವರ ದೇವಾಲಯದ ವಾರ್ಷಿಕ ಉತ್ಸವ ಭಾನುವಾರ ಶ್ರದ್ಧಾಭಕ್ತಿ ಹಾಗೂ ವಿಜೃಂಭಣೆಯಿಂದ ನಡೆಯಿತು.
ಉತ್ಸವದ ಅಂಗವಾಗಿ ಸಂಜೆ 6ಕ್ಕೆ ಅವಭೃತ ಸ್ನಾನ ಹಾಗೂ ಬಳಿಕ ದೇವರ ನೃತ್ಯ ನಡೆಯಿತು. ಶನಿವಾರ ದೊಡ್ಡಹಬ್ಬ ಅಂಗವಾಗಿ ದೇವಾಲಯದಲ್ಲಿ ಬೆಳಿಗ್ಗೆಯಿಂದಲೇ ವಿಶೇಷ ಪೂಜೆಗಳು ನಡೆದು ಮಧ್ಯಾಹ್ನ ನೆರಪು, ಎತ್ತು ಪೋರಾಟ್, ನಂತರ ತೆಂಗಿನಕಾಯಿಗೆ ಗುಂಡು ಹೊಡೆಯುವ ಕಾರ್ಯಕ್ರಮ ನಡೆಯಿತು. ನಂತರ ಮಹಾಪೂಜೆ, ಪ್ರಸಾಧ ವಿನಿಯೋಗ ಬಳಿಕ ಅನ್ನಸಂತರ್ಪಣೆ ನಡೆಯಿತು. ಸಂಜೆ 6ಕ್ಕೆ ವಾದ್ಯಮೇಳದೊಂದಿಗೆ ಪಟ್ಟಣದ ಮುಖ್ಯಬೀದಿಗಳಲ್ಲಿ ಉತ್ಸವ ಮೂರ್ತಿಯು ಮೆರವಣಿಗೆ ನಡೆಯಿತು.
ಪಟ್ಟಣದ ಸುಂಕದಕಟ್ಟೆ, ತೆಲುಗರ ಬೀದಿಯ ಮಾರಿಯಮ್ಮ ದೇವಸ್ಥಾನದಲ್ಲಿ ಪೂಜೆ, ನಂತರ ಜೈನರ ಬೀದಿಯಲ್ಲಿರುವ ಬಸವೇಶ್ವರ ದೇವಾಲಯದ ಬಳಿ ಸಿಡಿಮದ್ದು ಪ್ರದರ್ಶನ, ವಿಶೇಷ ಪೂಜೆ ನಡೆಯಿತು.
ಪಟ್ಟಣದ ಮುಖ್ಯ ರಸ್ತೆಯಲ್ಲಿರುವ ಮಹಾಗಣಪತಿ ದೇವಾಲಯದ ಬಳಿಯಿರುವ ಕೃಷ್ಣ ಸ್ಟೋರ್ ಪಕ್ಕದಲ್ಲಿ ಪೂಜೆ, ದೇವಾಂಗ ಬೀದಿಯಲ್ಲಿರುವ ಪಾರ್ವತಿ ದೇವಸ್ಥಾನದಲ್ಲಿ ವಿಶೇಷ ಪೂಜೆ, ನಂತರ ಉತ್ಸವ ಮೂರ್ತಿಯ ಮೆರವಣಿಗೆ ಮರಳಿ ಮಲೆ ಮಹಾದೇಶ್ವರ ದೇವಾಲಯಕ್ಕೆ ತಲುಪಿ ಪೂಜೆ ಸಲ್ಲಿಸಲಾಯಿತು.
ಮಾರ್ಚ್ 20 ಬೆಳಿಗ್ಗೆ
ಕೊಡಿಮರ ಇಳಿಸುವುದು, ಮಧ್ಯಾಹ್ನ ಮಹಾಪೂಜೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.