ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಪಿಎಲ್‌: ಧಾರ್ಮಿಕ್‌ ತಂಡ ಚಾಂಪಿಯನ್‌

ಮಡಿಕೇರಿಯ ಸ್ಪೋರ್ಟ್ಸ್‌ ವರ್ಲ್ಡ್‌ ದ್ವಿತೀಯ, ಮೂರು ದಿನಗಳ ಕಾಲ ನಡೆದ ಟೂರ್ನಿಗೆ ತೆರೆ
Last Updated 20 ಜನವರಿ 2022, 12:20 IST
ಅಕ್ಷರ ಗಾತ್ರ

ಮಡಿಕೇರಿ: ವೆಸ್ಟನ್ ಹಾಗೂ ಬ್ಯಾರಿ ವಾರಿಯರ್ಸ್ ಸ್ಪೋರ್ಟ್ಸ್‌ ಕ್ಲಬ್‌ ಆಶ್ರಯದಲ್ಲಿ ನಗರದ ಜನರಲ್‌ ತಿಮ್ಮಯ್ಯ ಮೈದಾನದಲ್ಲಿ ಆಯೋಜಿಸಿದ್ದ 4ನೇ ಆವೃತ್ತಿಯ ಮಡಿಕೇರಿ ಪ್ರೀಮಿಯರ್ ಲೀಗ್ (ಎಂಪಿಎಲ್‌) ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಡಿವೈಸಿಸಿ (ಧಾರ್ಮಿಕ್ ಯೂತ್ ಕ್ರಿಕೆಟ್ ಕ್ಲಬ್) ತಂಡವು ಚಾಂಪಿಯನ್‌ ಆಯಿತು.

ಫೈನಲ್‌ ಪಂದ್ಯದಲ್ಲಿ ಟಾಸ್ ಗೆದ್ದ ಡಿವೈಸಿಸಿ, ನಿಗದಿತ 6 ಓವರ್‌ನಲ್ಲಿ 53 ರನ್ ದಾಖಲಿಸಿತು. ತಂಡದ ಪರ ಅಜ್ರಾರ್ 39 ರನ್ ಬಾರಿಸಿದರು. ಗುರಿ ಬೆನ್ನಟ್ಟಿದ ಸ್ಪೋರ್ಟ್ಸ್‌ ವರ್ಲ್ಡ್‌ 6 ವಿಕೆಟ್ ಕಳೆದುಕೊಂಡು 49 ರನ್ ದಾಖಲಿಸಿತು. 4 ರನ್‍ಗಳ ಅಂತರದಲ್ಲಿ ಸೋಲು ಕಂಡಿತು.

ಡಿವೈಸಿಸಿ ಪರ ಬಬಿತ್ 3 ವಿಕೆಟ್ ಗಳಿಸಿದರು. ಪ್ರಥಮ ಬಾರಿಗೆ ಫೈನಲ್ ಪ್ರದೇಶ ಪಡೆದ ಸ್ಪೋರ್ಟ್ಸ್‌ ವರ್ಲ್ಡ್‌ ತಂಡವು ರನ್ನರ್ ಅಪ್ ಪ್ರಶಸ್ತಿ ಪಡೆದುಕೊಂಡಿತ್ತು. ಡಿವೈಸಿಸಿ ತಂಡ 2ನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿತು.

ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಟಾಸ್ ಸೋತ ಡಿಸಿ ತಂಡವು ನಿಗದಿತ 6 ಓವರ್‌ನಲ್ಲಿ 5 ವಿಕೆಟ್ ಕಳೆದುಕೊಂಡು, 49 ರನ್ ಕಲೆ ಹಾಕಿತು. ಗುರಿಬೆನ್ನಟ್ಟಿದ ಸ್ಪೋರ್ಟ್ಸ್‌ ವರ್ಲ್ಡ್‌ ತಂಡ 5 ವಿಕೆಟ್ ಕಳೆದುಕೊಂಡು ಗೆಲುವು ಸಾಧಿಸಿತು.

ಎಲಿಮಿನೇಟರ್ ಪಂದ್ಯದಲ್ಲಿ ಟಾಸ್ ಸೋತ ಧಾರ್ಮಿಕ್ ಯೂತ್ ಕ್ರಿಕೆಟ್ ಕ್ಲಬ್ ತಂಡ ನಿಗದಿತ ಓವರ್‌ನಲ್ಲಿ 3 ವಿಕೆಟ್ ಕಳೆದುಕೊಂಡು 53 ರನ್ ಕಲೆ ಹಾಕಿತ್ತು. ಗುರಿ ಬೆನ್ನಟ್ಟಿದ್ದ ಸುಪ್ರತೀಕ್ ತಂಡವು 8 ವಿಕೆಟ್ ಕಳೆದುಕೊಂಡು 35 ರನ್ ದಾಖಲಿಸಿ ಸೋಲುಂಡಿತ್ತು.

ಸೆಮಿಫೈನಲ್‌ ಪಂದ್ಯದಲ್ಲಿ ಟಾಸ್ ಸೋತ ಡಿವೈಸಿಸಿ ತಂಡ ನಿಗದಿತ ಓವರ್‌ನಲ್ಲಿ 4 ವಿಕೆಟ್ ಕಳೆದುಕೊಂಡು ಬೃಹತ್ 80 ರನ್ ದಾಖಲಿಸಿತು. ಗುರಿ ಬೆನ್ನಟ್ಟಿದ ಡಿ.ಸಿ ತಂಡ 7 ವಿಕೆಟ್ ಕಳೆದುಕೊಂಡು 51 ರನ್ ಗಳಿಸಲಷ್ಟೆ ಶಕ್ತವಾಯಿತು. ಡಿವೈಸಿಸಿ ಪರ ಬಬಿತ್ ಕೊನೆ ಓವರ್‌ನಲ್ಲಿ 4 ವಿಕೆಟ್ ಪಡೆದು ತಂಡದ ಗೆಲುವಿಗೆ ಕಾರಣರಾದರು.

ಪಂದ್ಯಾಟದ ಹೈಲೈಟ್ಸ್
ಟೂರ್ನಿಯಲ್ಲಿ ಡಿವೈಸಿಸಿ ತಂಡದ ಅಜ್ರಾರ್ 7 ಪಂದ್ಯದಲ್ಲಿ 146 ರನ್ ದಾಖಲಿಸಿದರು. ಡಿವೈಸಿಸಿ ತಂಡದ ಬಬಿತ್, ಸುನಿಲ್ ಮತ್ತು ಸ್ಪೋರ್ಟ್ಸ್‌ ವರ್ಲ್ಡ್‌ ತಂಡದ ಮೂರ್ತಿ ತಲಾ 10 ವಿಕೆಟ್ ಸಾಧನೆ ಮಾಡಿದರು. ಡಿವೈಸಿಸಿ ತಂಡದ ಅಜ್ರಾರ್ 7 ಪಂದ್ಯದಲ್ಲಿ 14 ಸಿಕ್ಸರ್ ದಾಖಲಿಸಿದರೆ, ರೆಡ್ ಬ್ಯಾಕ್ ಸ್ಪೈಡರ್ ತಂಡದ ರೇಣುಕಾ 4 ಪಂದ್ಯದಲ್ಲಿ 11 ಸಿಕ್ಸರ್ ಸಿಡಿಸಿದರು. ಮೊಸ್ಟ್ ವ್ಯಾಲ್ಯೂವೇಬಲ್ ಆಟಗಾರರಾಗಿ ರೇಣುಕಾ 269 ಅಂಕ, ಅಜ್ರಾರ್ 177 ಅಂಕ, ಮೂರ್ತಿ 176 ಅಂಕ ಪಡೆದರು.

ಸಮಾರೋಪದಲ್ಲಿ ವೆಸ್ಟನ್ ಹಾಗೂ ಬ್ಯಾರಿ ವಾರಿಯರ್ಸ್ ಸ್ಪೋರ್ಟ್ಸ್‌ ಕ್ಲಬ್‌ ಅಧ್ಯಕ್ಷ ಕಬೀರ್, ಕ್ಲಬ್‍ನ ಕಾರ್ಯದರ್ಶಿ ಇದ್ರೀಸ್, ಖಜಾಂಚಿ ಸಂಮ್ನನ್, ಸದಸ್ಯ ಹನೀಫ್, ಕ್ರಿಯೇಟಿವ್ ಸಮೀರ್ ಹಾಗೂ 10 ತಂಡದ ಪ್ರಾಂಚೈಸಿ ಮಾಲೀಕರು ಹಾಗೂ ಅಂಪೈರ್‌ ಮದನ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT