ನಾಪೋಕ್ಲು: ಇಲ್ಲಿಗೆ ಸಮೀಪದ ಬಲ್ಲಮಾವಟಿ ಗ್ರಾಮದ ಭಗವತಿ ದೇವಾಲಯ ಗ್ರಾಮೀಣ ಜನರ ಶ್ರದ್ಧಾಭಕ್ತಿಯ ತಾಣವಾಗಿದೆ. ದೇವಾಲಯವನ್ನು ಈಚೆಗೆ ನವೀಕರಿಸಲಾಗಿದ್ದು, ಸುಂದರವಾಗಿ ಕಂಗೊಳಿಸುತ್ತಿದೆ. ದೇವಾಲಯದ ಗರ್ಭಗುಡಿಯನ್ನು ಸುಂದರವಾಗಿ ವಿನ್ಯಾಸಗೊಳಿಸಲಾಗಿದೆ. ದೇವಾಲಯದ ಸುತ್ತ ವಿಶೇಷ ಪ್ರಾಂಗಣವಿದೆ. ಆಕರ್ಷಕ ದೇವಾಲಯ, ನಾಗ ಸನ್ನಿಧಿ, ಸಮಾರಂಭಗಳನ್ನು ನಡೆಸಲು ವಿಶಾಲವಾದ ಸಭಾಂಗಣ ಸೇರಿದಂತೆ ಹಲವು ವೈಶಿಷ್ಟ್ಯಗಳೊಂದಿಗೆ ದೇವಾಲಯ ಕಂಗೊಳಿಸುತ್ತಿದೆ.

ಪ್ರತಿ ವರ್ಷ ಮಾರ್ಚ್ 24ರಿಂದ 28ರವರೆಗೆ ದೇವಾಲಯದಲ್ಲಿ ವಾರ್ಷಿಕ ಉತ್ಸವ ಜರುಗುತ್ತಿದ್ದು, ಈ ವರ್ಷ ದೇವಾಲಯದ ನವೀಕರಣದ ಹಿನ್ನೆಲೆಯಲ್ಲಿ ಈಚೆಗಷ್ಟೇ ಅಷ್ಟ ಬಂಧ ಬ್ರಹ್ಮಕಲಶ, ವಾರ್ಷಿಕೋತ್ಸವ ಜರಗಿತು. ದೇವಾಲಯದ ಜೀರ್ಣೋದಾರಕ್ಕಾಗಿ ಜೀರ್ಣೋದ್ಧಾರ ಸಮಿತಿ ಶ್ರಮಿಸಿದ್ದು ಕೆಲವೇ ತಿಂಗಳುಗಳಲ್ಲಿ ದೇವರ ಬಿಂಬ ಪ್ರತಿಷ್ಠೆ ನಡೆದು ಊರಿನ ಶ್ರದ್ಧಾಭಕ್ತಿಯ ಕೇಂದ್ರವಾಗಿದೆ.

ಅಂದಾಜು ಸುಮಾರು 1,900 ವರ್ಷಗಳ ಹಿಂದೆ ಬಲ್ಲತನಾಡ್ ಶ್ರೀ ಭದ್ರಕಾಳಿ ದೇವರು ಬಲ್ಲಮಾವಟಿ ಗ್ರಾಮದ ಬಲ್ಲ ಎಂಬ ಜಾಗದಲ್ಲಿ ಬಂದು ನೆಲೆ ನಿಂತಿರುವುದಾಗಿ ಪ್ರತೀತಿ. ಅದೇ ಸಮಯದಲ್ಲಿ ಭದ್ರಕಾಳಿ ದೇವರ ಸೋದರಿ ಭಗವತಿ (ಸರಸ್ವತಿ) ದೇವರು ಸಹಿತ ಜೊತೆಯಲ್ಲಿ ಬಂದು ಮಾವಟಿ ಎಂಬ ಜಾಗದಲ್ಲಿ ನೆಲೆ ನಿಂತಳು. ಪೂರ್ವ ದಿಕ್ಕಿಗೆ ಮುಖ ಮಾಡಿ ನಿಂತಿರುವ ತನ್ನ ಸೋದರಿಯ ಮುಖ ನೋಡುತ್ತಾ ಪಶ್ಚಿಮ ದಿಕ್ಕಿಗೆ ಮುಖ ಮಾಡಿ ನಿಂತಿರುವುದು ವಿಶೇಷ. ಅದಕ್ಕಾಗಿ ಈ ದೇವಸ್ಥಾನಕ್ಕೆ ಕೇಕ್ ಭಗವತಿ ದೇವಾಲಯ ಎಂಬ ಹೆಸರು. ಗ್ರಾಮದ ಕೋಟೆರ ಕುಟುಂಬಸ್ಥರು ತಕ್ಕರಾಗಿರುವ ಈ ದೇವಸ್ಥಾನದಲ್ಲಿ ಕುಟ್ಟಂಡ ಕುಟುಂಬಸ್ಥರು ಕಾವುಕಾರರಾಗಿದ್ದರು. ಆದರೆ, ಟಿಪ್ಪುವಿನ ಕಾಲದಲ್ಲಿ ಕುಟ್ಟಂಡ ಕುಟುಂಬಸ್ಥರ ನಿರ್ನಾಮ ಆದಮೇಲೆ ನೆರವಂಡ ಕುಟುಂಬಸ್ಥರು ಕಾವುಕಾರರಾಗಿ ಕಾರ್ಯ ನಿರ್ವಹಿಸಿಕೊಂಡು ಬರುತ್ತಿದ್ದಾರೆ,

ಕೇವಲ 50-60 ವರ್ಷಗಳ ಹಿಂದೆ ಹುಲ್ಲಿನ ದೇವಸ್ಥಾನವಾಗಿದ್ದ ಇದು ಊರಿನ ಭಕ್ತರ ನೆರವು ಹಾಗೂ ಆಡಳಿತ ಮಂಡಳಿಯವರ ಶ್ರಮದಿಂದ ಕಲ್ಲಿನ ಗರ್ಭಗುಡಿ ಹಾಗೂ ಮುಖಮಂಟಪವಿರುವ ಕೊಡಗಿನ ಏಕೈಕ ಭಗವತಿ ಸರಸ್ವತಿ ದೇವಸ್ಥಾನವಾಗಿದೆ. ನಿರಂತರ ಅಭಿವೃದ್ಧಿ ಆಗುತ್ತಿರುವ ಈ ದೇವಸ್ಥಾನ ಹುಲ್ಲಿನಿಂದ ಕ್ರಮೇಣ ಹಂಚು, ಮಣ್ಣಿನ ಗೋಡೆಯಿಂದ ಸಿಮೆಂಟ್, ಹೊರಗಡೆಯಲ್ಲಿ ದೇವಸ್ಥಾನದ ಎದುರು ಮತ್ತು ಬದಿಗಳಲ್ಲಿ ಸಭಾಂಗಣಗಳು, ನಂತರ ಮರದ ಮಾಡಿನಿಂದ ಕಬ್ಬಿಣದಮಾಡು ಹೀಗೆ ಅಭಿವೃದ್ಧಿ ನಡೆಯುತ್ತಿದೆ. ಒಂದು ವರ್ಷದ ಹಿಂದೆ ದೇವರ ಗರ್ಭಗುಡಿ ಹಾಗೂ ಮುಖಮಂಟಪವನ್ನು ಕಲ್ಲಿನಲ್ಲಿ ನಿರ್ಮಿಸುವ ಯೋಜನೆ ಹಾಕಿದ್ದ ಆಡಳಿತ ಮಂಡಳಿಯವರ ಚಿಂತನೆಗೆ ಊರಿನವರು ಸಮ್ಮತಿ ನೀಡಿದ್ದು, ಸಹೃದಯಿ ದಾನಿಗಳ ಸಹಕಾರದಿಂದ ಯೋಜನೆ ಪ್ರಾರಂಭಿಸಿದ ಕೆಲವೇ ತಿಂಗಳುಗಳಲ್ಲಿ ಸುಂದರ ದೇಗುಲ ನಿರ್ಮಾಣಗೊಂಡಿದೆ.

ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷರಾಗಿ ಕೋಟೆರ ಸುಬ್ಬಯ್ಯ, ಉಪಾಧ್ಯಕ್ಷರಾಗಿ ಬೈರುಡ ಮಾಚಯ್ಯ, ಕಾರ್ಯಾಧ್ಯಕ್ಷರಾಗಿ ಬೊಟ್ಟೋಳಂಡ ತನು ತಿಮ್ಮಯ್ಯ, ಖಜಾಂಚಿಯಾಗಿ ಚಂಗೇಟಿರ ಅಪ್ಪಯ್ಯ ಕಾರ್ಯನಿರ್ವಹಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.