ನಾಪೋಕ್ಲು: ಪಟ್ಟಣ ಸೇರಿ ಹೋಬಳಿ ವ್ಯಾಪ್ತಿಯ ಹಲವೆಡೆ ಬುಧವಾರ ಬಿಟ್ಟುಬಿಟ್ಟು ಮಳೆ ಸುರಿಯಿತು.

ಮಂಗಳವಾರವೂ ಬೆಟ್ಟಗೇರಿ, ಪಾಲೂರು, ಹೊದ್ದೂರು, ನಾಪೋಕ್ಲು, ಬೇತು ಗ್ರಾಮಗಳಲ್ಲಿ ಬಿರುಸಿನಮಳೆ ಸುರಿದಿದ್ದು ಕೃಷಿಚಟುವಟಿಕೆಗಳು ಚುರುಕುಗೊಂಡಿವೆ. ಕಾಫಿ ಬೆಳೆಗಾರರು ಕಾಫಿಗಿಡಗಳ ಸುತ್ತ ಕಳೆ ನಿರ್ಮೂಲನೆ ಮಾಡಿ, ರಾಸಾಯನಿಕ ಗೊಬ್ಬರ ಹಾಕಲು ಮಳೆಯ ನಿರೀಕ್ಷೆಯಲ್ಲಿದ್ದರು. ಬಿಡುವು ಕೊಟ್ಟು ಉತ್ತಮ ಮಳೆ ಸುರಿಯುತ್ತಿರುವುದರಿಂದ ರೈತರು ಹರ್ಷಗೊಂಡಿದ್ದು, ಕಾಫಿ ತೋಟಗಳಲ್ಲಿ ಬಿರುಸಿನ ಕೆಲಸಗಳು ನಡೆಯುತ್ತಿವೆ.

ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ರಾಸಾಯನಿಕಗೊಬ್ಬರ ಭರದಿಂದ ಮಾರಾಟವಾಗುತ್ತಿದೆ. ರಾಸಾಯನಿಕ ಗೊಬ್ಬರಕ್ಕೆ ಕೊರತೆಯುಂಟಾಗಬಹುದು ಎಂಬ ಆತಂಕದ ನಡುವೆ ಹಲವು ರೈತರು ಗೋದಾಮುಗಳಲ್ಲಿ ಗೊಬ್ಬರವನ್ನು ಸಂಗ್ರಹಿಸಿಟ್ಟಿದ್ದು, ಮಳೆ ಸುರಿದ ಬೆನ್ನಲ್ಲೇ ಕೃಷಿ ಕಾರ್ಯಕ್ಕೆ ಮುಂದಾದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260604-51-861856275

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.