ನಾಪೋಕ್ಲು: ಇಲ್ಲಿನ ಕೆಪಿಎಸ್ ಶಾಲಾ ಮೈದಾನದಲ್ಲಿ ಭಾನುವಾರ ಮುಕ್ತಾಯಗೊಂಡ 5ನೇ ವರ್ಷದ ಕೊಡವ ಕೌಟುಂಬಿಕ ಹಗ್ಗ ಜಗ್ಗಾಟ ಸ್ಪರ್ಧೆಯ ಫೈನಲ್ ಪಂದ್ಯದಲ್ಲಿ ಮುಕ್ಕಾಟ್ಟಿರ (ಹರಿಹರ ), ಕಾಂಡಂಡ, ಅಜ್ಜಮಾಡ ಕುಟುಂಬ ತಂಡಗಳು ಜಯ ಸಾಧಿಸುವ ಮೂಲಕ ಚೀಯಕಪೂವಂಡ ಕಪ್ ಅನ್ನು ತನ್ನದಾಗಿಸಿಕೊಂಡವು.

ಪುರುಷರ ಮತ್ತು ಮಹಿಳೆಯರ ವಿಭಾಗದ ವಿಜೇತ ಎರಡೂ ತಂಡಗಳಿಗೆ ತಲಾ ₹1ಲಕ್ಷ ನಗದು, ಪುರುಷರ ವಿಭಾಗದ ರನ್ನರ್ಸ್- ಚೀಯಕಪೂವಂಡ ತಂಡಕ್ಕೆ ₹75 ಸಾವಿರ ಹಾಗೂ ಮಹಿಳಾ ವಿಭಾಗದ ರನ್ನರ್ಸ್ ತಂಡ - ಪುದಿಯೋಕ್ಕಡ ತಂಡಕ್ಕೆ₹75,000 ಹಾಗೂ ಟ್ರೋಫಿ ವಿತರಿಸಲಾಯಿತು.

ಚೀಯಕಪೂವಂಡ ಮತ್ತು ಮುಕ್ಕಾಟ್ಟಿರ (ಹರಿಹರ) ತಂಡಗಳ ನಡುವೆ ನಡೆದ ಫೈನಲ್ ಪಂದ್ಯದ ಪುರುಷರ ವಿಭಾಗದಲ್ಲಿ ಅತಿಥೇಯ ಚೀಯಕಪೂವಂಡ ತಂಡವನ್ನು ಮುಕ್ಕಾಟಿರ ತಂಡವು ಸೋಲಿಸುವುದರ ಮೂಲಕ ವಿಜಯ ಪತಾಕೆ ಹಾರಿಸಿತು.

ಕಾಂಡಂಡ ಮತ್ತು ಪುದಿಯೋಕ್ಕಡ ತಂಡಗಳ ನಡುವೆ ನಡೆದ ಮಹಿಳೆಯರ ಫೈನಲ್ ಪಂದ್ಯದಲ್ಲಿ ಕಾಂಡಂಡ ತಂಡವು ಪುದಿಯೋಕ್ಕಡ ತಂಡವನ್ನು ಮಣಿಸುವ ಮೂಲಕ ಕೊಡವ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.

16 ವರ್ಷ ಒಳಗಿನ ಬಾಲಕ ಮತ್ತು ಬಾಲಕಿಯರ ವಿಭಾಗದಲ್ಲಿ ಅಜ್ಜಮಾಡ ತಂಡವು ಜಯ ಗಳಿಸುವುದರ ಮೂಲಕ ಮೊದಲ ಸ್ಥಾನದ ಪ್ರಶಸ್ತಿ ಪಡೆಯಿತು.

ಸಮಾರೋಪ ಸಮಾರಂಭದಲ್ಲಿ ಶಾಸಕ ಎ.ಎಸ್. ಪೊನ್ನಣ್ಣ ಮಾತನಾಡಿ, ‘ಕ್ರೀಡೆ ಕೊಡವ ಸಂಸ್ಕೃತಿಯ ಒಂದು ಭಾಗವಾಗಿದ್ದು, ದೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಪಟುಗಳನ್ನು ನೀಡಿದ ಕೀರ್ತಿ ಜಿಲ್ಲೆಗೆ ಇದೆ. ಇದು ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಪ್ರಗತಿ ಕಾಣಬೇಕು.ಚೀಯಕಪೂವಂಡ ಕುಟುಂಸ್ಥರು ಟೂರ್ನಿಯನ್ನು ಅಚ್ಚುಕಟ್ಟಾಗಿ, ವ್ಯವಸ್ಥಿತವಾಗಿ ಆಯೋಜಿಸಿರುವುದು ಸಂತಸ ತಂದಿದೆ’ ಎಂದರು.

‘ನನ್ನ ತಾಯಿಯ ತವರು ಮನೆ ಚೀಯಕಪೂವಂಡ ಆಗಿದ್ದು, 1963ರಿಂದ 2019ರವರೆಗೆ ಕೊಡಗಿನ ಕೋವಿ ಹಕ್ಕಿನ ಬಗ್ಗೆ ಸತತ ಹೋರಾಟ ನಡೆಸಿದ ಚೀಯಕಪೂವಂಡ ಭೀಮಯ್ಯ ನನ್ನ ಅಜ್ಜ ಎಂಬುದು ನನಗೆ ಹೆಮ್ಮೆ’ ಎಂದು ನೆನಪಿಸಿಕೊಂಡರು.

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೊಡಂದೆರ ಬಾಂಡ್ ಗಣಪತಿ ಮಾತನಾಡಿ, ‘ಇತರ ಕ್ರೀಡೆಗಳಲ್ಲಿ ಕೌಶಲವಿದ್ದರೆ ಹಗ್ಗ ಜಗ್ಗಾಟ ತೋಳುಬಲಕ್ಕೆ ಹೆಸರುವಾಸಿಯಾಗಿದೆ. ಬಲಿಷ್ಠರು ಇದರಲ್ಲಿ ಯಶಸ್ಸು ಕಾಣುತಾರೆ’ ಎಂದರು.

ರಾಷ್ಟೀಯ ಮಹಿಳಾ ಕೌನ್ಸಿಲ್ ಮುಖ್ಯಸ್ಥ ಶರತ್ ಪರಕೋತ್ ಮಾತನಾಡಿ, ‘ಹಗ್ಗ ಜಗ್ಗಾಟ ಸರಳ ಕ್ರೀಡೆಯಾಗಿದ್ದು, ಅದು ಒಬ್ಬರ ಬಲಕ್ಕಿಂತಲೂ ಏಕತೆಯನ್ನು ಸೂಚಿಸುತದೆ. ಒಂದು ತಂಡದಿಂದ ಏನಾದರೂ ಸಾಧಿಸಬಹುದು ಎಂಬುದಕ್ಕೆ ಇದು ಸಾಕ್ಷಿ’ ಎಂದರು.

ಕೊಡಗು ರೈತ ಸಂಘದ ಅಧ್ಯಕ್ಷ ಕಾಡ್ಯಮಡ ಮನು ಸೋಮಯ್ಯ, ನಾಪೋಕ್ಲು ಕೊಡವ ಸಮಾಜದ ಅಧ್ಯಕ್ಷ ಮುಂಡಂಡ ನಾಣಯ್ಯ, ಚೀಯಕಪೂವಂಡ ಹಗ್ಗ ಜಗ್ಗಾಟ ಟೂರ್ನಿಸಮಿತಿ ಅಧ್ಯಕ್ಷ ಸಿ. ಕೆ ಬೋಪಣ್ಣ ಮಾತನಾಡಿದರು.

ಕೊಡಗು ಟಗ್ ಆಫ್ ವಾರ್ ಅಕಾಡೆಮಿ ಅಧ್ಯಕ್ಷ ಪೊನ್ನಲತಂಡ ಕಿರಣ್ ಪೊನ್ನಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, 'ಈ ಹಗ್ಗಜಗ್ಗಾಟ ಟೂರ್ನಿಯಲ್ಲಿ 189 ಪುರುಷ, 84 ಮಹಿಳಾ ಹಾಗೂ 22 ಮಕ್ಕಳ ತಂಡ ಸೇರಿ ಒಟ್ಟು 295 ತಂಡಗಳು ಪಾಲ್ಗೊಳ್ಳುವುದರ ಮೂಲಕ ಇದು ಭಾರತೀಯ ಬುಕ್ ಆಫ್ ರೆಕಾರ್ಡ್ಗೆ ದಾಖಲಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚೀಯಕಪೂವಂಡ ಕುಟುಂಬದ ಅಧ್ಯಕ್ಷ ಅಪ್ಪಚ್ಚು ವಹಿಸಿದ್ದರು. ರಾಜ್ಯ ಸರ್ಕಾರದ ಮುಖ್ಯ ವಿದ್ಯುತ್ ಇಲಾಖಾ ಮುಖ್ಯಸ್ಥ ತೀತೀರ ರೋಷನ್ ಅಪ್ಪಚ್ಚು, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಕೇಟೋಳಿರ ಹರೀಶ್ ಪೂವಯ್ಯ, ಭಾರತೀಯ ಬುಕ್ ಆಫ್ ರೆಕಾರ್ಡ್ ನ ಅಧಿಕಾರಿ ಸಮೀಮ್ ರಜಾಕ್, ಚೀಯಕಪೂವಂಡ ಕುಟುಂಬದ ಪಟ್ಟೆದಾರ ಸಿ.ಎ. ಚಿಟ್ಟಿಯಪ್ಪ, ಚೀಯಕಪೂವಂಡ ಹಗ್ಗಜಗ್ಗಾಟ ಸಮಿತಿ ಉಪಾಧ್ಯಕ್ಷ ಚೀಯಕಪೂವಂಡ ಕಟ್ಟಿ ಮಂಜುನಾಥ್, ಕಾರ್ಯದರ್ಶಿ ನವೀನ್ ನಾಚಪ್ಪ, ಸಿ.ಎ.ನಾಚಪ್ಪ, ಸತೀಶ್ ದೇವಯ್ಯ, ಸುನಿಲ್ ಮಾಚಯ್ಯ, ಸಚಿನ್ ಮುತ್ತಪ್ಪ, ಪ್ರಕಾಶ್ ಮಂದಣ್ಣ, ಸಚಿನ್ ಪೂವಯ್ಯ, ಶಂಭು ನಂಜಪ್ಪ ಪಾಲ್ಗೊಂಡಿದ್ದರು.ವೀಕ್ಷಕ ವಿವರಣೆಗಾರರಾಗಿ ಮಾಳೇಟಿರ ಶ್ರೀನಿವಾಸ್, ಬಾಳೆಯಡ ದಿವ್ಯ ಮಂದಪ್ಪ,ಕೊಟ್ಟಂಗಡ ರಾಜಾ ಸುಬ್ಬಯ್ಯ ಕಾರ್ಯನಿರ್ವಹಿಸಿದರು.

ಕಾರ್ಯಕ್ರಮದಲ್ಲಿ ಚೀಯಕಪೂವಂಡ ಟೂರ್ನಿಯ ಬಗ್ಗೆ ಸಾಹಿತ್ಯ ರಚಿಸಿ ಸಂಗೀತ ನೀಡಿದ ಮುಕ್ಕಾಟ್ಟಿರ ಮೌನಿ ನಾಣಯ್ಯ, ಉಳುವಂಗಡ ರೋಹಿತ್ ಭೀಮಯ್ಯ, ಗಾಯಕಿ ಶಾಂತೆಯಂಡ ಯಾನ ಮಚ್ಚಾಯ್ಯ ಅವರನ್ನು ಸನ್ಮಾನಿಸಲಾಯಿತು.

ಇಂಡಿಯನ್ ಬುಕ್ ಆಫ್ ರೆಕಾರ್ಡ್ ನ ಅಧಿಕಾರಿ ಸಮೀಮ್ ರಝಕ್, ಚೀಯಕಪೂವಂಡ ಟೂರ್ನಿಯನ್ನು ಇಂಡಿಯನ್ ಬುಕ್ ಆಫ್ ರೆಕಾರ್ಡ್ ಗೆ ಸೇರಿಸಿದ ಪ್ರಮಾಣಪತ್ರವನ್ನು ಕುಟುಂಬಕ್ಕೆ ನೀಡಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260427-51-1416961809

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.