ನಾಪೋಕ್ಲು : ಯಶಸ್ವಿ ಶಿಬಿರವನ್ನು ಸಂಘಟಿಸಲು ಎಲ್ಲರ ಸಹಕಾರ ಮತ್ತು ಶಿಸ್ತು ಹಾಗೂ ಬದ್ಧತೆ ಮುಖ್ಯ ಎಂದು ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡಂಡ ಬೋಪಣ್ಣ ಹೇಳಿದರು.

ಸ್ಥಳೀಯ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕ್ರೀಡಾ ಅಕಾಡೆಮಿ ವತಿಯಿಂದ ಇಲ್ಲಿಯ ಕೆಪಿಎಸ್ ಶಾಲೆಯ ಆವರಣದಲ್ಲಿ ಆಯೋಜಿಸಲಾಗಿದ್ದ ಹಾಕಿ ತರಬೇತಿ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸತತ 26 ವರ್ಷಗಳ ಕಾಲ ಒಂದು ಶಿಬಿರ ನಡೆಸುವುದು ಸುಲಭದ ಮಾತಲ್ಲ. ಮೈಸೂರಿನ ಆರ್.ವಿ. ವಿದ್ಯಾಸಂಸ್ಥೆ ಹಾಕಿ ಆಟಗಾರರಿಗೆ ಉಚಿತ ಟ್ಯೂಷನ್ ನೀಡುತ್ತದೆ. ಇವುಗಳ ಸದುಪಯೋಗವನ್ನು ಪಡೆದುಕೊಂಡು ಶಿಬಿರಾರ್ಥಿಗಳು ಕ್ರೀಡೆಗೆ ಆದ್ಯತೆಯನ್ನು ನೀಡಿ ಉನ್ನತ ಸಾಧನೆ ಮಾಡಬೇಕು ಎಂದರು.

ಕೊಡವ ಸಮಾಜದ ಅಧ್ಯಕ್ಷ ಮುಂಡಂಡ ಸಿ.ನಾಣಯ್ಯ ಮಾತನಾಡಿ, ಶಿಬಿರಾರ್ಥಿಗಳಲ್ಲಿ ಕೆಲವರು ತಂದೆ ತಾಯಿಗಳ ಒತ್ತಡದಿಂದ, ಆಯೋಜಕರ ಪ್ರೇರಣೆಯಿಂದ ಶಿಬಿರದಲ್ಲಿ ಭಾಗವಹಿಸುವುದು ಸರಿಯಲ್ಲ. ಶಿಬಿರದ ಪ್ರಯೋಜನಗಳ ಬಗ್ಗೆ ಅರಿತುಕೊಂಡು ಮುಂದಿನ ಭವಿಷ್ಯದ ಬಗ್ಗೆ ಶಿಬಿರಾರ್ಥಿಗಳು ಯೋಚಿಸಬೇಕು. ಉತ್ತಮ ಗುರಿಯಿಂದ ಉನ್ನತ ಸಾಧನೆ ಮಾಡಲು ಸಾಧ್ಯ. ಅತಿಯಾದ ಮೊಬೈಲ್ ಗೀಳಿನಿಂದ ಭವಿಷ್ಯಕ್ಕೆ ಮಾರಕ. ಮೊಬೈಲ್ ಉಪಯೋಗಕ್ಕೆ ಮಾತ್ರ ಸೀಮಿತವಾಗಿರಲಿ ಎಂದರು.

ಕೇಟೋಳಿರ ಹರೀಶ್ ಪೂವಯ್ಯ ಮಾತನಾಡಿ, 26 ವರ್ಷ ಸತತ ಶಿಬಿರ ನಡೆಸಿರುವುದು ಶ್ಲಾಘನೀಯ. ಬೇಸಿಗೆ ಶಿಬಿರದಲ್ಲಿ ಪಾಲ್ಗೊಳ್ಳುವ ಶಿಬಿರಾರ್ಥಿಗಳ ಪೋಷಕರ ಜವಾಬ್ದಾರಿ ಪ್ರಮುಖವಾದದ್ದು. ಪೋಷಕರ ಉತ್ತೇಜನದಿಂದ ಶಿಬಿರ ಯಶಸ್ವಿ ಆಗುತ್ತದೆ. ಶಿಬಿರಾರ್ಥಿಗಳು ಒಂದು ಉತ್ತಮ ಗುರಿ ಇರಿಸಿ ಉನ್ನತ ಸ್ಥಾನಕ್ಕೇರಬೇಕು ಎಂದರು.

ಕ್ರೀಡಾ ಅಕಾಡೆಮಿ ಅಧ್ಯಕ್ಷ ಕಾಂಡಂಡ ಜೋಯಪ್ಪ ಮಾತನಾಡಿ, ಶಿಬಿರದಲ್ಲಿ ತರಬೇತಿ ಪಡೆಯುವುದರ ಮೂಲಕ ಉತ್ತಮ ಹಾಕಿ ಆಟಗಾರರಾಗಿ ರೂಜಹಗೊಂಡ ಹಲವು ಕ್ರೀಡಾಪಟುಗಳಿದ್ದಾರೆ. ತರಬೇತಿ ನಿರಂತರವಾಗಿರಲಿ. ಶಿಸ್ತಿನಿಂದ ಕ್ರೀಡೆಯನ್ನು ಅಭ್ಯಾಸ ಮಾಡಿದರೆ ಉನ್ನತ ಸ್ಥಾನ ಅಲಂಕರಿಸಲು ಸಾಧ್ಯ ಎಂದರು.

ಕೊಡವ ಹಾಕಿ ಅಕಾಡೆಮಿ ಉಪಾಧ್ಯಕ್ಷ ಕೂತಂಡ ಪೂಣಚ್ಚ ತಾಲಹ ಕೂಡ ಗೋಣಿಕೊಪ್ಪಲಿನಲ್ಲಿ ಮಕ್ಕಳಿಗೆ ಹಾಕಿ ತರಬೇತಿ ಶಿಬಿರ ನಡೆಸಿಕೊಂಡು ಬರುತ್ತಿದ್ದೇನೆ. ಮುಂದಿನ ಬಾರಿ ನಾಪೋಕ್ಲುವಿನ ಶಿಬಿರದ ವಿದ್ಯಾರ್ಥಿಗಳನ್ನು ಪೂನ್ನಂಪೇಟೆಯಲ್ಲಿರುವ ಟರ್ಫ್ ಮೈದಾನಕ್ಕೆ ಕರೆದುಕೊಂಡು ಬಂದು ಅಲ್ಲಿ ನಾಲ್ಕು ದಿನದ ತರಬೇತಿ ನೀಡಲು ಎಲ್ಲ ರೀತಿಯ ಸಹಕಾರ ಮಾಡುವೆ ಎಂದರು.

ನಿವೃತ್ತ ಶಿಕ್ಷಕಿ, ಮಹಿಳಾ ಹಿರಿಯ ತರಬೇತಿದಾರೆ ಬೋಪ್ಪಂಡ ಬೊಳ್ಳಮ್ಮ ನಾಣಯ್ಯ, ಕ್ರೀಡಾ ವೀಕ್ಷಕ ವರದಿಗಾರ ಮಾಲೇಟೀರ ಶ್ರೀನಿವಾಸ್ ಇದ್ದರು.

ಶಿಬಿರಾರ್ಥಿಗಳು ತಾವು ಪಡೆದ ತರಬೇತಿಯ ಬಗ್ಗೆ ಅನುಭವ ಹಂಚಿಕೊಂಡರು. ಶಿಬಿರಾರ್ಥಿ ಪಾಡಿಯಮ್ಮಂಡ ದುಂದುಭಿ ವಾರ್ಷಿಕ ವರದಿ ಮಂಡಿಸಿದರು. ವೇದಿಕೆಯಲ್ಲಿದ್ದ ಅತಿಥಿಗಳು ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿದರು.

ಹಾಕಿ ಅಕಾಡೆಮಿ ಉಪಾಧ್ಯಕ್ಷ ಕೊಂಡಿರ ಗಣೇಶ್, ಕೊಡವ ಹಾಕಿ ಅಕಾಡೆಮಿಯ ಕಾರ್ಯದರ್ಶಿ ನಾಯಕಂಡ ದೀಪಕ್ ಚಿಣ್ಣಪ್ಪ, ಶಿವಾಚಾಳಿಯಂಡ ಅಂಬಿ ಕಾರ್ಯಪ್ಪ, ಕುಂಡ್ಯೋಳಂಡ ದಿನೇಶ್ ಕಾರ್ಯಪ್ಪ, ಶಿವಾಚಾಳಿಯಂಡ ಸೀಮಾ, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹಾಕಿ ಅಕಾಡೆಮಿಯ ಕಾರ್ಯದರ್ಶಿ ಮಾಚೇಟಿರ ಕುಶು ಕುಶಾಲಪ್ಪ, ಮುಖ್ಯ ತರಬೇತಿದಾರರು ಹಾಗೂ ಅಕಾಡೆಮಿಯ ಖಜಾಂಚಿ ಮಾಜಿ ಸೈನಿಕ ಕೇಟೋಳಿರ ಅಚ್ಚಪ್ಪ, ಅರೇಯಡ ಗಣೇಶ, ಬಿದ್ದಾಟಂಡ ಮಮತಾ ಚಿನ್ನಪ್ಪ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260508-51-1580918585

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.