ಸೋಮವಾರ, ಆಗಸ್ಟ್ 19, 2019
22 °C
ಸ್ಥಳೀಯ ಪೊಲೀಸ್‌ ಪಡೆ

ಜನರ ರಕ್ಷಣೆಗಾಗಿ ಪ್ರಾಣದ ಹಂಗು ತೊರೆದಿದ್ದ ಎನ್‌ಡಿಆರ್‌ಎಫ್‌, ಭಾರತೀಯ ಸೇನೆ

Published:
Updated:
Prajavani

ಮಡಿಕೇರಿ: ಪ್ರಾಕೃತಿಕ ವಿಕೋಪವನ್ನು ಸಮರ್ಥವಾಗಿ ಎದುರಿಸಲೆಂದೇ ಜಿಲ್ಲಾಡಳಿತದ ಕೋರಿಕೆ ಮೇರೆಗೆ ಜಿಲ್ಲೆಗೆ ಬಂದಿದ್ದ ಎನ್‌ಡಿಆರ್‌ಎಫ್‌, ಭಾರತೀಯ ಸೇನೆ ಹಗಲಿರುಳು ಪ್ರಾಣದ ಹಂಗು ತೊರೆದು ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದವು. ಅದರೊಂದಿಗೆ ಜಿಲ್ಲೆಯ ಎರಡು ಪೊಲೀಸ್‌ ತಂಡ, ಜನರಲ್‌ ತಿಮ್ಮಯ್ಯ ಸಾಹಸ ಅಕಾಡೆಮಿ ಸದಸ್ಯರು ಕೈಜೋಡಿಸಿದ್ದರು.

ನಾಲ್ಕೈದು ದಿನಗಳವರೆಗೆ ನಡೆದ ಕಾರ್ಯಾಚರಣೆಯಲ್ಲಿ 79 ಪ್ರವಾಹಪೀಡಿತ ಪ್ರದೇಶಗಳಲ್ಲಿ 1,507 ಜನರು ಹಾಗೂ 19 ಜಾನುವಾರುಗಳನ್ನು ಸುರಕ್ಷಿತ ಸ್ಥಳಗಳಿಗೆ ಕರೆ ತರಲಾಗಿತ್ತು. ಈಗ ಕಾರ್ಯಾಚರಣೆ ಸ್ಥಗಿತವಾಗಿದೆ. ತೋರದಲ್ಲಿ ಮಾತ್ರ ಮಣ್ಣಿನಡಿ ಸಿಲುಕಿದ್ದಾರೆ ಎನ್ನಲಾದ ಏಳು ಮಂದಿಗೆ ಕಾರ್ಯಾಚರಣೆ ಮಾತ್ರ ಪ್ರಗತಿಯಲ್ಲಿದೆ. 

ಎನ್‌ಡಿಆರ್‌ಎಫ್‌ ತಂಡ ಆಂಧ್ರಪ್ರದೇಶದ ಗುಂಟೂರಿನಿಂದ ಬಂದಿತ್ತು. ಕಳೆದ ವರ್ಷದ ಭೀಕರತೆ ಅರಿತು ಮುಂಜಾಗ್ರತಾ ಕ್ರಮವಾಗಿ ಮೇ ತಿಂಗಳ ಕೊನೆಗೇ ಈ ತಂಡ ಆಗಮಿಸಿತ್ತು. ಜೂನ್‌, ಜುಲೈನಲ್ಲಿ ಮಳೆಯ ಪ್ರಮಾಣ ಕಡಿಮೆ ಇದ್ದರಿಂದ ಅಪಾಯಕಾರಿ ಸ್ಥಳಗಳಲ್ಲಿ ಸಾರ್ವಜನಿಕರೊಂದಿಗೆ ಸಮಾಲೋಚನೆ ಮಾಡುವುದು, ಪ್ರಾತ್ಯಕ್ಷಿಕೆ ಮೂಲಕ ಜನರಿಗೆ ಧೈರ್ಯ ತುಂಬುವ ಕಾರ್ಯವನ್ನು ಮಾಡಿದ್ದರು.

98 ಮಂದಿ ರಕ್ಷಣೆ: 34 ಮಂದಿ ಎನ್‌ಡಿಆರ್‌ಎಫ್‌ ಸೇರಿದಂತೆ 17 ಮಂದಿ ಭಾರತೀಯ ಸೇನೆ, 30 ಪೊಲೀಸ್ ಸಿಬ್ಬಂದಿ, 17 ಗರುಡ ಫೋರ್ಸ್‌ ಸೇರಿದಂತೆ ಒಟ್ಟು 98 ಮಂದಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಅಗ್ನಿಶಾಮಕ, ಗೃಹರಕ್ಷಕ ದಳದ ಸಿಬ್ಬಂದಿಯೂ ಕಾರ್ಯಾಚರಣೆಯಲ್ಲಿ ತೊಡಗಿದ್ದರು.

Post Comments (+)