ಸರ್ಕಾರಿ ಕಟ್ಟಡ ಹಾಗೂ ಗ್ರಾ.ಪಂ. ಗಳಲ್ಲಿ ಪ್ಲಾಸ್ಟಿಕ್ ಬಾಟಲಿ ಬಳಕೆ ಕಡಿಮೆಗೊಳಿಸಲು ಕ್ರಮ ವಹಿಸಬೇಕು. ನೆಲ್ಯಹುದಿಕೇರಿ ಕಾವೇರಿ ನದಿಗೆ ನೇರವಾಗಿ ತ್ಯಾಜ್ಯ ಹರಿಯುತ್ತಿದ್ದು ಸೂಕ್ತ ಕ್ರಮ ವಹಿಸಿ.
– ಮಂಥರ್ ಗೌಡ, ಶಾಸಕ
ತಡವಾಗಿ ಬಂದ ಶಾಸಕ
ನೆಲ್ಯಹುದಿಕೇರಿ ಗ್ರಾ.ಪಂ ಉದ್ಘಾಟನೆ ಕಾರ್ಯಕ್ರಮ ಮಂಗಳವಾರ ಬೆಳಿಗ್ಗೆ 11.30 ಕ್ಕೆ ನಿಗದಿಯಾಗಿತ್ತು. ಆದರೇ ಶಾಸಕ ಮಂಥರ್ ಗೌಡ ಮಧ್ಯಾಹ್ನ 2 ಗಂಟೆಗೆ ಆಗಮಿಸಿದರು. ಈ ನಡುವೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಾರ್ವಜನಿಕರು ವಿದ್ಯಾರ್ಥಿಗಳು ಕಾದು ಕುಳಿತು ಸುಸ್ತಾಗಿದ್ದರು. ಕೆಲವರು ಕಾದು ಬಳಿಕ ಮನೆಗೆ ಹಿಂತಿರುಗಿದರು.