24ಕ್ಕೆ ‘ಸ್ವರ್ಣ ಜ್ಞಾನ’ ಕಾರ್ಯಾಗಾರ

ಭಾನುವಾರ, ಮೇ 26, 2019
27 °C

24ಕ್ಕೆ ‘ಸ್ವರ್ಣ ಜ್ಞಾನ’ ಕಾರ್ಯಾಗಾರ

Published:
Updated:

ಮಡಿಕೇರಿ: ಕೊಡಗು ಜಿಲ್ಲೆಯ ಚಿನ್ನ, ಬೆಳ್ಳಿ ವರ್ತಕರು ಹಾಗೂ ಕೆಲಸಗಾರರ ಸಂಘದಿಂದ ಫೆ. ‌24ರಂದು ಗೋಣಿಕೊಪ್ಪಲಿನ ಪಾಲಿಬೆಟ್ಟದ ಕೂರ್ಗ್ ಕ್ಲಿಪ್‌ ರೆಸಾರ್ಟ್‌ನಲ್ಲಿ ‘ಸ್ವರ್ಣ ಜ್ಞಾನ’ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಕೆ.ಕೆ.ಶ್ರೀನಿವಾಸ್ ತಿಳಿಸಿದರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ರಾಜ್ಯ ಜ್ಯುವೆಲರಿ ಅಸೋಸಿಯೇಷನ್ ವತಿಯಿಂದ ಮಂಗಳೂರು, ಹುಬ್ಬಳ್ಳಿ, ಶಿವಮೊಗ್ಗದಲ್ಲಿ ಕಾರ್ಯಾಗಾರ ನಡೆದಿದೆ. 4ನೇ ಕಾರ್ಯಾಗಾರ ಕೊಡಗಿನಲ್ಲಿ ಹಮ್ಮಿಕೊಳ್ಳಲಾಗಿದೆ’ ಎಂದು ಮಾಹಿತಿ ನೀಡಿದರು.

ಅಂದು ಬೆಳಿಗ್ಗೆ 10ಕ್ಕೆ ಚಿನ್ನ, ಬೆಳ್ಳಿ ಪರಿಣಿತರಿಂದ ಉದ್ಯೋಗಕ್ಕೆ ಸಂಬಂಧಪಟ್ಟಂತೆ ಸಂಪೂರ್ಣ ಮಾಹಿತಿ ನೀಡಲಾಗುವುದು. ಹಾಲ್ ಮಾರ್ಕ್‌ ಹಾಗೂ ಜಿಎಸ್‌ಟಿ ಕಾನೂನು ಸೇರಿದಂತೆ ವಿವಿಧ ಮಾಹಿತಿ ಒದಗಿಸಲಾಗುವುದು. ಆಸಕ್ತರು ಸದು‍ಪಯೋಗ ಮಾಡಿಕೊಳ್ಳಬಹುದು ಎಂದು ತಿಳಿಸಿದರು.

ಕಾರ್ಯಾಗಾರದಲ್ಲಿ ಜಿ.ಜಯಾಚಾರ್ಯ, ಡಾ.ಬಿ. ರಾಮಾಚಾರ್ಯ, ಸುಮೇಶ್, ಶ್ರೀಕಾಂತ್ ಕರಿ, ಒ.ವಿ.ದಿವಾಕರ್, ಕೆ.ಎಸ್.ರಾಜಶೇಖರ್ ಪಾಲ್ಗೊಳ್ಳುವರು ಎಂದು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಚಿನ್ನ– ಬೆಳ್ಳಿ ವರ್ತಕರು ಹಾಗೂ ಕೆಲಸಗಾರರ ಸಂಘದ ಉಪಾಧ್ಯಕ್ಷ ಲೀಲಾರಾಂ ಎಸ್.ಬಿ., ಪ್ರಶಾಂತ್ ಎಸ್. ವೆರ್ಣೇಕರ್, ಪ್ರಧಾನ ಕಾರ್ಯದರ್ಶಿ ಆರ್.ಬಿ.ರವಿ ಇದ್ದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !