ಶುಕ್ರವಾರ, ಅಕ್ಟೋಬರ್ 18, 2019
20 °C

ಅಂತರರಾಷ್ಟ್ರೀಯ ಫುಟ್‌ಬಾಲ್‌ ಆಟಗಾರನಿಂದ ತರಬೇತಿ

Published:
Updated:
Prajavani

ಮಡಿಕೇರಿ: ಇಂಗ್ಲೆಂಡ್‌ನ ಫುಟ್‌ಬಾಲ್‌ ಆಟಗಾರ ಹಾಗೂ ಫುಟ್‌ಬಾಲ್ ತರಬೇತುದಾರ ಇಯಾನ್ ಷೆಲ್ಲಿ ಮರಗೋಡು ಗ್ರಾಮಕ್ಕೆ ಭೇಟಿ ನೀಡಿ 14 ವರ್ಷದೊಳಗಿನ ಮಕ್ಕಳೊಂದಿಗೆ ಫುಟ್‌ಬಾಲ್ ಆಟವಾಡಿ ಸಂಭ್ರಮಿಸಿದರು.

ಗುಡ್ಡೆಗೊಸೂರು ಐಎನ್ಎಸ್ ಕೇಂದ್ರದಲ್ಲಿ ಮಕ್ಕಳಿಗೆ ತರಬೇತಿ ನೀಡುತ್ತಿರುವ ಷೆಲ್ಲಿ, ಮರಗೋಡು ಗ್ರಾಮಕ್ಕೂ ಆಗಮಿಸಿದ್ದರು.  ಇಲ್ಲಿನ‌ ವೈಷ್ಣವಿ ಫುಟ್‌ಬಾಲ್‌ ಕ್ಲಬ್ ಈ ಕಾರ್ಯಕ್ರಮ ಆಯೋಜಿಸಿತ್ತು. ಸರ್ಕಾರಿ ಮಾದರಿ ಪ್ರಾಥಮಿಕ‌ ಶಾಲಾ ಮೈದಾನದಲ್ಲಿ ಪುಟ್ಟ ಮಕ್ಕಳಿಗೆ ಯೂರೋಪ್‌ ಮಾದರಿಯ ಫುಟ್‌ಬಾಲ್‌ ತಂತ್ರಗಳನ್ನು ಹೇಳಿಕೊಟ್ಟರು.

ಇದೇ ವೇಳೆ ಮಾತನಾಡಿದ ಷೆಲ್ಲಿ, ಪಾಶ್ಚಾತ್ಯ ಮತ್ತು ಭಾರತೀಯ ಮಕ್ಕಳ ಆಟದ ಗುಣಮಟ್ಟದಲ್ಲಿ ಹೆಚ್ಚೇನು ವ್ಯತ್ಯಾಸವಿಲ್ಲ. ಸಾಕಷ್ಟು ಪರಿಶ್ರಮ ಪಟ್ಟರೆ ಭಾರತದ ಮಕ್ಕಳೂ ಕೂಡ ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳಗಲು ಅವಕಾಶವಿದೆ ಎಂದರು. 

ಐಎನ್ಎಸ್ ಸಂಚಾಲಕ ಐಚೆಟ್ಟೀರ ಪೊನ್ನಪ್ಪ, ಮರಗೋಡು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶೈಲಾ ಉಪಸ್ಥಿತರಿದ್ದರು.

Post Comments (+)