ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶನಿವಾರಸಂತೆ ಹೋಬಳಿ: ಮಳೆ-ಗಾಳಿಗೆ ಮನೆಯೊಂದಕ್ಕೆ ಹಾನಿ, ₹ 2.5 ಲಕ್ಷ ನಷ್ಟ

Last Updated 9 ಏಪ್ರಿಲ್ 2019, 13:58 IST
ಅಕ್ಷರ ಗಾತ್ರ

ಶನಿವಾರಸಂತೆ: ಹೋಬಳಿಯಾದ್ಯಂತ ಸೋಮವಾರ ಸಂಜೆ ಗುಡುಗು, ಆಲಿಕಲ್ಲು, ಗಾಳಿ ಸಹಿತ ಸುರಿದ ಮಳೆಗೆ ಅಲ್ಲಲ್ಲಿ ಹಾನಿ ಉಂಟಾಗಿದೆ. ಮರಗಿಡಗಳ ರೆಂಬೆ-ಕೊಂಬೆ ಮುರಿದು ಬಿದ್ದಿವೆ.

ವಿದ್ಯುತ್ ಕಂಬಗಳಲ್ಲಿ ತಂತಿಗಳು ಕಡಿದು ಬಿದ್ದಿದ್ದು ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಕೆಲವೆಡೆ ರೈತರ ಬೆಳೆ ನಾಶವಾಗಿದೆ.

ಸಮೀಪದ ಅಪ್ಪಶೆಟ್ಟಳ್ಳಿ ಗ್ರಾಮದ ಕೃಷಿಕ ಎ.ಡಿ.ಕೊಮಾರಪ್ಪ ಅವರ ಮನೆಯ ಚಾವಣಿ ಹೆಂಚು, ಶೀಟುಗಳು, ರೀಪು, ಕೌಕೋಲುಗಳು ಭಾರಿ ಗಾಳಿ-ಮಳೆಗೆ ಹಾರಿ ಹೋಗಿವೆ. 35 ಶೀಟುಗಳು, 1,000 ಹಂಚುಗಳು, 500 ರೀಪುಗಳು, 30 ಕೌಕೋಲುಗಳು ಹಾರಿ ಬಿದ್ದು ಚೂರಾಗಿವೆ. ₹ 2.5 ಲಕ್ಷ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಮನೆಯೊಳಗಿದ್ದ ಜನರು ಅಪಾಯದಿಂದ ಪಾರಾಗಿದ್ದಾರೆ.

ಕೃಷಿಕ ಕೊಮಾರಪ್ಪ ನಾಡಕಚೇರಿಗೆ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಮಂಗಳವಾರ ಬೆಳಿಗ್ಗೆ ಸ್ಥಳಕ್ಕೆ ಕಂದಾಯ ಪರಿವೀಕ್ಷಕ ನಂದಕುಮಾರ್, ಗ್ರಾಮ ಲೆಕ್ಕಿಗ ಮಂಜುನಾಥ್, ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು.

ದುಂಡಳ್ಳಿ ಹಾಗೂ ಬಿಳಾಹ ಗ್ರಾಮದಲ್ಲೂ ರೈತರು ಬೆಳೆದಿದ್ದ ಚೆಂಡು ಹೂವಿನ ಬೆಳೆ ಮಳೆ-ಗಾಳಿಗೆ ಹಾನಿಗೀಡಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT