ಕಮಲೇಶ್ಚಂದ್ರ ಆಯೋಗದ ಶಿಫಾರಸು ಜಾರಿಗೊಳಿಸಿ

7
ಅಂಚೆ ನೌಕರರ ಆಗ್ರಹ; ಪ್ರಧಾನ ಅಂಚೆ ಕಚೇರಿ ಎದುರು ಪ್ರತಿಭಟನೆ

ಕಮಲೇಶ್ಚಂದ್ರ ಆಯೋಗದ ಶಿಫಾರಸು ಜಾರಿಗೊಳಿಸಿ

Published:
Updated:
Deccan Herald

ಮಡಿಕೇರಿ: ಕಮಲೇಶ್ಚಂದ್ರ ವೇತನ ಆಯೋಗದ ಶಿಫಾರಸು ಜಾರಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಅಖಿಲ ಭಾರತ ಗ್ರಾಮೀಣ ಅಂಚೆ ಸೇವಕರ ಸಂಘದ ನೇತೃತ್ವದಲ್ಲಿ ಅಂಚೆ ನೌಕರರು ನಗರದ ಪ್ರಧಾನ ಅಂಚೆ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.

ಅಂಚೆ ಇಲಾಖೆ ಪ್ರಾರಂಭವಾಗಿ 15 ದಶಕಗಳು ಕಳೆದಿವೆ. ಆದರೂ, ಇಲಾಖೆಯಲ್ಲಿ ನೌಕರರಿಗೆ ಹೆಚ್ಚಿನ ಸೌಲಭ್ಯ ಸಿಕ್ಕಿಲ್ಲ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.

ಸಂಘದ ಕಾರ್ಯದರ್ಶಿ ಬಿ.ಎಂ. ಮಂಜುನಾಥ್ ಮಾತನಾಡಿ, ‘ಕೇಂದ್ರ ಸಂಘಟನೆಯು ದೇಶವ್ಯಾಪ್ತಿ ಮುಷ್ಕರಕ್ಕೆ ಕರೆ ಕೊಟ್ಟಿದ್ದು, ಮಡಿಕೇರಿಯಲ್ಲೂ ಪ್ರತಿಭಟನೆ ನಡೆಸಲಾಗುತ್ತಿದೆ. ಇಷ್ಟು ವರ್ಷ ಕಳೆದರೂ ಕೆಲಸ ಕಾಯಂ ಆಗಿಲ್ಲ. ಸೌಲಭ್ಯಗಳನ್ನು ಕಲ್ಪಿಸಿಲ್ಲ’ ಎಂದು ದೂರಿದರು.

ವಿಭಾಗೀಯ ಅಧ್ಯಕ್ಷ ಪಿ.ಎಸ್. ಕುರಿಯನ್, ಉಪಾಧ್ಯಕ್ಷ ಎ.ಯು. ಪೂಣಚ್ಚ, ಸಹ ಕಾರ್ಯದರ್ಶಿ ಬಿ.ಪಿ. ಅಚ್ಚಯ್ಯ, ಖಜಾಂಚಿ ಎಸ್.ಪ್ರಶಾಂತ್, ಸುಶೀಲಾ, ಸತೀಶ್‌, ಅಕ್ಕಮ್ಮ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !