ಆನೆಚೌಕೂರು– ಗೋಣಿಕೊಪ್ಪಲು ರಸ್ತೆ ಗುಂಡಿಮಯ

7
17 ಕಿ.ಮೀ ದೂರದವರೆಗೆ ಹೆದ್ದಾರಿ ದುಃಸ್ಥಿತಿ; ಪ್ರಯಾಣಿಕರು, ಸವಾರರಿಗೆ ತೀವ್ರ ತೊಂದರೆ

ಆನೆಚೌಕೂರು– ಗೋಣಿಕೊಪ್ಪಲು ರಸ್ತೆ ಗುಂಡಿಮಯ

Published:
Updated:
Prajavani

ಗೋಣಿಕೊಪ್ಪಲು: ದಕ್ಷಿಣ ಕೊಡಗಿನ ಆನೆಚೌಕೂರು– ಗೋಣಿಕೊಪ್ಪಲು ನಡುವಿನ ಅಂತರರಾಜ್ಯ ಹೆದ್ದಾರಿಯಲ್ಲಿ ಗುಂಡಿಗಳು ಬಿದ್ದಿದ್ದು, ವಾಹನ ಸವಾರರಿಗೆ ತೀವ್ರ ತೊಂದರೆ ಉಂಟಾಗುತ್ತಿದೆ.

ಈ ಮಾರ್ಗ ಮೈಸೂರು, ತೆಲಚೇರಿ, ಕಣ್ಣೂರು ಕಡೆಗೆ ಹೋಗುತ್ತದೆ. ನಿತ್ಯವೂ ಸಾವಿರಾರು ವಾಹನಗಳು ಸಂಚರಿಸುತ್ತವೆ. ಆನೆಚೌಕೂರುನಿಂದ ಗೋಣಿಕೊಪ್ಪಲಿನವರೆಗೆ ಸುಮಾರು 17 ಕಿ.ಮೀ ದೂರದವರೆಗೆ ರಸ್ತೆ ಹದಗೆಟ್ಟಿದೆ. ಕಳೆದ ಜುಲೈವರೆಗೆ ಈ ರಸ್ತೆಯು ಸುಸ್ಥಿತಿಯಲ್ಲಿ ಇತ್ತು. ಆನಂತರ ಬಿದ್ದ ಮಳೆಯಿಂದಾಗಿ ಈ ರಸ್ತೆ ಹಾಳಾಗಿತ್ತು. ಮಳೆ ನಿಂತು ತಿಂಗಳುಗಳು ಕಳೆದರೂ ರಸ್ತೆಗೆ ಡಾಂಬರು ಹಾಕಿಲ್ಲ. ಹೀಗಾಗಿ, ವಾಹನ ಸವಾರರು ಹಾಗೂ ಪ್ರಯಾಣಿಕರನ್ನು ಬಲಿ ತೆಗೆದುಕೊಳ್ಳಲು ಸನ್ನದ್ಧವಾಗಿದೆ.

ತಿತಿಮತಿಯಿಂದ ಹಿಡಿದು ದೇವರಪುರದವರೆಗಿನ 3 ಕಿ.ಮೀ ತೀರಾ ಹಾಳಾಗಿದೆ. ಹತ್ತಾರು ಬೈಕ್‌ಗಳ ಸವಾರರು ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿವೆ. ಅನೇಕ ಕಾರುಗಳು ಹಾಗೂ ಮಿನಿ ಲಾರಿಗಳಿಗೆ ಹಾನಿ ಹಾಗಿದೆ. ವಾಹನ ಸವಾರರಿಗೆ ಗಾಯಗಳಾಗಿವೆ ಎಂದು ಸ್ಥಳೀಯರು ಹೇಳುತ್ತಾರೆ.

ಕೇರಳದ ಇರಟಿ ನಿವಾಸಿ ಮೋಹನ್ ಮಾತನಾಡಿ, ‘ರಸ್ತೆಯಲ್ಲಿ ದೊಡ್ಡ ಗಾತ್ರದ ಗುಂಡಿಗಳು ಬಿದ್ದಿದ್ದು, ವಾಹನಗಳು ಸುಗಮ ಹೋಗಲು ಸಾಧ್ಯವಾಗುತ್ತಿಲ್ಲ. ಪ್ರಯಾಣಿಕರಿಗೆ ತೀವ್ರ ತೊಂದರೆ ಆಗುತ್ತಿದೆ. ಬೆನ್ನುಹುರಿ, ಮೂಳೆ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಮತ್ತಷ್ಟು ಸಮಸ್ಯೆ ಆಗುತ್ತಿದೆ. ರಸ್ತೆಗೆ ಕೂಡಲೇ ಡಾಂಬರು ಹಾಕಬೇಕು’ ಎಂದು ಒತ್ತಾಯಿಸಿದರು.

ರಸ್ತೆಗೆ ಡಾಂಬರು ಹಾಕದಿದ್ದರೆ ಪ್ರತಿಭಟನೆ ನಡೆಸುವುದಾಗಿ ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !