ಮೂರ್ನಾಡು ಮಡಿಲಿಗೆ ಚಾಂಪಿಯನ್‌ ಪಟ್ಟ

7
ಕೊಡಗು ಜಿಲ್ಲಾಮಟ್ಟದ ‘ಇಸ್ಲಾಮಿಕ್ ಕಲೋತ್ಸವ’

ಮೂರ್ನಾಡು ಮಡಿಲಿಗೆ ಚಾಂಪಿಯನ್‌ ಪಟ್ಟ

Published:
Updated:
Prajavani

ಮಡಿಕೇರಿ: ಚೆಟ್ಟಳ್ಳಿ ಸಮೀಪದ ಕಂಡಕರೆಯ ಹಯಾತುಲ್ ಇಸ್ಲಾಂ ಮದರಸಾದಲ್ಲಿ ನಡೆದ ಜಿಲ್ಲಾಮಟ್ಟದ ‘ಇಸ್ಲಾಮಿಕ್ ಕಲೋತ್ಸವ’ದಲ್ಲಿ ಮೂರ್ನಾಡು ವ್ಯಾಪ್ತಿಯ ತಂಡವು 175 ಅಂಕಗಳೊಂದಿಗೆ ಚಾಂಪಿಯನ್ ಆಗಿ ಹೊರಹೊಮ್ಮಿತು.

ನಾಪೋಕ್ಲು ದ್ವಿತೀಯ ಸ್ಥಾನ (167), ಪಾಲಿಬೆಟ್ಟದ ತೃತೀಯ ಸ್ಥಾನಕ್ಕೆ (164 ಅಂಕ) ತೃಪ್ತಿಪಟ್ಟುಕೊಂಡಿತು.

ಸೋಮವಾರಪೇಟೆ, ಪಾಲಿಬೆಟ್ಟ, ವಿರಾಜಪೇಟೆ, ಮೂರ್ನಾಡು, ನಾಪೋಕ್ಲು ಸೇರಿ ಒಟ್ಟು 5 ವ್ಯಾಪ್ತಿಯಿಂದ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಲೋತ್ಸವದಲ್ಲಿ ಪಾಲ್ಗೊಂಡಿದ್ದರು.

ಸಬ್ ಜೂನಿಯರ್, ಜೂನಿಯರ್, ‌ಸೀನಿಯರ್ ಹಾಗೂ ಜನರಲ್ ವಿಭಾಗದಲ್ಲಿ ಕನ್ನಡ ಭಾಷಣ, ರಸಪ್ರಶ್ನೆ, ಕವಾಲಿ, ಪೋಸ್ಟರ್ ಡಿಸೈನ್, ಕನ್ನಡ ಭಾಷಣ, ಧಫ್ ಸೇರಿ ಒಟ್ಟು 25ಕ್ಕೂ ಹೆಚ್ಚು ವಿವಿಧ ಸ್ಪರ್ಧೆಗಳು ನಡೆದಿದ್ದವು.

ಇಸ್ಲಾಮಿಕ್ ಕಲೋತ್ಸವದ ವೈಯಕ್ತಿಕ ಚಾಂಪಿಯನ್ ಪಟ್ಟವನ್ನು (ಕಲಾ ಪ್ರತಿಭೆ) ಮೂರ್ನಾಡಿನ ಶಹೀರ್ ಪಡೆದುಕೊಂಡರು.

ತೀರ್ಪುಗಾರರಾಗಿ ಸಿರಾಜ್ ಮಾಸ್ಟರ್ ಕಣ್ಣೂರ್, ಯೂಸುಫ್ ಮುಸ್ಲಿಯಾರ್, ಖಾದರ್ ಮುಸ್ಲಿಯಾರ್, ಹನೀಫ್ ಸಖಾಫಿ, ಇಬ್ರಾಹಿಂ ಸಖಾಫಿ ಕಾರ್ಯ ನಿರ್ವಹಿಸಿದ್ದರು.

ಜಿಲ್ಲಾ ಎಸ್ಎಸ್ಎಫ್ ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆಯಾದ ಅಜೀಜ್ ಸಖಾಫಿ ಕೊಡ್ಲಿಪೇಟೆ ಸನ್ಮಾನಿಸಲಾಯಿತು.

ಹಮೀದ್ ಮುಸ್ಲಿಯಾರ್ ಅಧ್ಯಕ್ಷತೆ ವಹಿಸಿದ್ದರು. ಮುಸ್ತಫಾ ಸಖಾಫಿ, ಅಬೂಬಕರ್ ಮುಸ್ಲಿಯಾರ್, ಹಸೈನಾರ್ ಮಹ್ಳರಿ, ಹಾರಿಸ್ ಸಖಾಫಿ, ಆಲಿ ಉಸ್ತಾದ್, ಗಫೂರ್ ಸಾಹೇಬ್, ರಫಿ, ರಜಾಕ್, ಗಫೂರ್ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !