27ರಂದು ‘ಸಂವಿಧಾನದ ಆಶಯಗಳು’ ಕಾರ್ಯಾಗಾರ

7

27ರಂದು ‘ಸಂವಿಧಾನದ ಆಶಯಗಳು’ ಕಾರ್ಯಾಗಾರ

Published:
Updated:

ಮಡಿಕೇರಿ: ಕೊಡಗು ಮಾನವ ಬಂಧುತ್ವ ವೇದಿಕೆ ನಗರದ ಅಂಬೇಡ್ಕರ್ ಭವನದಲ್ಲಿ ಜ.27ರ ಬೆಳಿಗ್ಗೆ 10.30ಕ್ಕೆ ‘ಸಂವಿಧಾನದ ಆಶಯಗಳು’ ವಿಷಯ ಕುರಿತು ಕಾರ್ಯಾಗಾರ ಏರ್ಪಡಿಸಿದೆ ಎಂದು ವೇದಿಕೆ ಜಿಲ್ಲಾ ಸಂಚಾಲಕ ಸುರೇಶ್ ತಿಳಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವೇದಿಕೆ ರಾಜ್ಯದಾದ್ಯಂತ ವೈಚಾರಿಕ ಜಾಗೃತಿ ಮತ್ತು ಸ್ವಾಭಿಮಾನ ಮೂಡಿಸುವಲ್ಲಿ ಕಾರ್ಯಾಗಾರ ನಡೆಸುತ್ತಾ ಬಂದಿದೆ. ಬುದ್ಧ, ಬಸವ, ನಾರಾಯಣ ಗುರು, ಅಂಬೇಡ್ಕರ್ ಅವರ ಚಿಂತನೆಗಳು ಮತ್ತು ಸಂವಿಧಾನದ ಆಶಯಗಳ ಬಗ್ಗೆ ವೇದಿಕೆ ಬದ್ಧತೆ ಹೊಂದಿದೆ ಎಂದು ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೇದಿಕೆ ಪ್ರಧಾನ ಸಂಚಾಲಕ ಕೆ.ಎಂ. ಕುಂಞ ಅಬ್ದುಲ್ಲಾ ವಹಿಸಲಿದ್ದಾರೆ. ಚಿಂತಕ ಎಚ್.ಎನ್. ನಾಗಮೋಹನದಾಸ್ ಕಾರ್ಯಾಗಾರ ನಡೆಸಿಕೊಡಲಿದ್ದಾರೆ. ಹೈಕೋರ್ಟ್ ಹಿರಿಯ ವಕೀಲ ಎಚ್.ಎಸ್. ಚಂದ್ರಮೌಳಿ, ವೇದಿಕೆ ಗೌರವ ಸಂಚಾಲಕ ಕೆ.ಆರ್. ವಿದ್ಯಾಧರ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸೋಮವಾರಪೇಟೆ ತಾಲ್ಲೂಕು ಸಂಚಾಲಕ ಜನಾರ್ಧನ, ಜಿಲ್ಲಾ ಸಂಚಾಲಕರಾದ ರಜಾಕ್, ಕೆ.ಎನ್. ಪೂವಯ್ಯ, ನಿರ್ದೇಶಕರಾದ ಅಲ್ಲಾರಂಡ ವಿಠಲ ನಂಜಪ್ಪ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !