ಶೋಕಾಚರಣೆ ನಡುವೆ ಕಡತ ವಿಲೇವಾರಿ

7

ಶೋಕಾಚರಣೆ ನಡುವೆ ಕಡತ ವಿಲೇವಾರಿ

Published:
Updated:

ಮಡಿಕೇರಿ: ಶಿವಕುಮಾರ ಸ್ವಾಮೀಜಿ ಗೌರವಾರ್ಥ ಮಂಗಳವಾರ ರಜೆ ಘೋಷಿಸಿದ್ದರೂ ಇಲ್ಲಿನ ಗೌಳಿಬೀದಿಯ ಲೋಕೋಪಯೋಗಿ ಇಲಾಖೆಯ ಸಹಾಯಕ ಎಂಜಿನಿಯರ್‌ ಕಚೇರಿಯಲ್ಲಿ ಕೆಲವು ಸಿಬ್ಬಂದಿಗಳು ಬಾಗಿಲು ಬಂದ್ ಮಾಡಿಕೊಂಡು ಕಡತ ವಿಲೇವಾರಿ ಮಾಡುತ್ತಿದ್ದದ್ದು ಸಾರ್ವಜನಿಕರ ಆಕ್ರೋಶಕ್ಕೆ ತುತ್ತಾಗಿದೆ.

ರಜೆ ನೀಡಿರುವುದು ಗೊತ್ತಿದ್ದರೂ ಐವರು ಸಿಬ್ಬಂದಿ ಮಧ್ಯಾಹ್ನದ ತನವೂ ಕಡತ ವಿಲೇವಾರಿ ಮಾಡಿದ್ದಾರೆ ಎನ್ನಲಾಗಿದೆ. ಮಾಹಿತಿ ತಿಳಿದು ಸ್ಥಳಕ್ಕೆ ತೆರಳಿದ ಸಾರ್ವಜನಿಕರು ಹಾಗೂ ಮಾಧ್ಯಮ ಪ್ರತಿನಿಧಿಗಳನ್ನು ಕಂಡೊಡನೆ ಒಬ್ಬ ಸಿಬ್ಬಂದಿ ಹಿಂಬಾಗಿಲು ಮೂಲಕ ಓಡಿ ಹೋಗಿದ್ದಾನೆ. ಬಳಿಕ ಉಳಿದವರು ಕಚೇರಿಗೆ ಬೀಗಹಾಕಿ ತೆರಳಿದ್ದಾರೆ.

‘ರಜೆ ಘೋಷಿಸಿದ್ದರೂ ಸಿಬ್ಬಂದಿಗೆ ಅಂಥ ತುರ್ತು ಕೆಲಸವಾದರೂ ಏನಿತ್ತು? ಯಾವ ಕಾರಣಕ್ಕೆ ಬಾಗಿಲು ಬಂದ್  ಮಾಡಿಕೊಳ್ಳಲಾಗಿತ್ತು’ ಎಂದು ಸಾರ್ವಜನಿಕರು ‍ಪ್ರಶ್ನಿಸಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !