ಭಾನುವಾರ, ಏಪ್ರಿಲ್ 18, 2021
31 °C

14ರಿಂದ ಹಾಕಿ ಚಾಂಪಿಯನ್ಸ್ ಟ್ರೋಫಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಿಕೇರಿ: ಏಪ್ರಿಲ್ 14ರಿಂದ ಮೇ 12ರವರೆಗೆ ಚಾಂಪಿಯನ್ಸ್ ಟ್ರೋಫಿ ಹಾಗೂ ಹಾಕಿ ಚಾಂಪಿಯನ್‌ಷಿಪ್ –2019 ಅನ್ನು ಕಾಕೋಟುಪರಂಬು ಮೈದಾನದಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಹಾಕಿ ಕೂರ್ಗ್ ಅಧ್ಯಕ್ಷ ಎಂ.ಪಿ. ಸುಬ್ಬಯ್ಯ ತಿಳಿಸಿದರು.

ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡಲು 11 ತಂಡಗಳು ಆಯ್ಕೆಯಾಗಿದ್ದು, ಒಂದು ತಂಡವನ್ನು ಶೀಘ್ರ ಆಯ್ಕೆ ಮಾಡಲಾಗುವುದು. ಚಾಂಪಿಯನ್‌ಷಿಪ್‌ಗೆ 65 ತಂಡ ನೋಂದಣಿ ಮಾಡಿಸಿಕೊಂಡಿವೆ ಎಂದರು.

ಕೊಡಗಿನಲ್ಲಿ ಯಾವುದೇ ರೀತಿಯ ಹಾಕಿ ಆಟ ನಡೆಸಲು ಹಾಕಿ ಕೂರ್ಗ್‌ನಿಂದ ಅನುಮತಿ ಪಡೆಯಬೇಕು. ಹಾಕಿ ಕೂರ್ಗ್ ಅನುಮತಿ ಇಲ್ಲದೇ ಪಂದ್ಯಾವಳಿ ನಡೆಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಪತ್ರಿಕಾ ಗೋಷ್ಠಿಯಲ್ಲಿ ಪದಾಧಿಕಾರಿಗಳಾದ ಚಂಗಪ್ಪ, ಲವ ಹಾಗೂ ನವೀನ್ ಬೆಳ್ಯಪ್ಪ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು