ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್‌: ವಿರಾಟ್ ರೈ ಚಾಂಪಿಯನ್‌

ಜಿಲ್ಲಾ ಬಂಟರ ಯುವ ಘಟಕದ ಆಶ್ರಯದಲ್ಲಿ ಕ್ರೀಡಾಕೂಟ
Last Updated 13 ಮೇ 2019, 13:30 IST
ಅಕ್ಷರ ಗಾತ್ರ

ಮಡಿಕೇರಿ: ಜಿಲ್ಲಾ ಬಂಟರ ಯುವ ಘಟಕದ ಆಶ್ರಯದಲ್ಲಿ ನಡೆದ ಬಂಟ ಸಮುದಾಯದ 6ನೇ ವರ್ಷದ ಕ್ರೀಡಾಕೂಟದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಮಡಿಕೇರಿಯ ವಿರಾಟ್ ರೈ ತಂಡ ಚಾಂಪಿಯನ್ ಆಯಿತು.

ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮಲ್ನಾಡ್ ಬಂಟ್ಸ್ ವಿರಾಜಪೇಟೆ ತಂಡವನ್ನು 50 ರನ್ ಅಂತರದಿಂದ ಮಣಿಸಿತು.

ಟಾಸ್ ಸೋತು ಮೊದಲು ಬ್ಯಾಟ್‌ ಮಾಡಿದ ವಿರಾಟ್ ರೈ ತಂಡವು 6 ಓವರ್‌ನಲ್ಲಿ 121 ರನ್ ಗಳಿಸಿತು. ರೇಣುಕಾ ಪ್ರಸಾದ್ ವೈಯಕ್ತಿಕ 66 ರನ್, ನಿಖಿಲ್ 43 ರನ್ ಗಳಿಸಿದರು. ಮಲ್ನಾಡ್ ಬಂಟ್ಸ್ ತಂಡವು ನಿಗದಿತ ಓವರ್‌ನಲ್ಲಿ 72 ರನ್ ಗಳಿಸಲು ಮಾತ್ರ ಶಕ್ತವಾಗಿ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

ಇದಕ್ಕೂ ಮುನ್ನ ನಡೆದ ಸೆಮಿಫೈನಲ್‌ನಲ್ಲಿ ಯಂಗ್ ಬಂಟ್ ಪ್ಯಾಂಥರ್ಸ್ ಕೈಕೇರಿ ತಂಡವನ್ನು ಮಣಿಸಿ ಮಲ್ನಾಡ್ ಬಂಟ್ಸ್ ತಂಡವು ಫೈನಲ್‌ಗೆ ಅರ್ಹತೆ ಪಡೆದರೆ, ರೈ ಬ್ರದರ್ಸ್ ನೀಲ್‌ಮಾಡು ತಂಡವನ್ನು ಸೋಲಿಸಿ ವಿರಾಟ್ ರೈ ತಂಡ ಫೈನಲ್ ಪ್ರವೇಶಿಸಿತು.

ಮಹಿಳೆಯರ ವಿಭಾಗದ ಹಗ್ಗಜಗ್ಗಾಟ: ಅಮೃತಮಯಿ ಮಡಿಕೇರಿ (ಪ್ರ), ಹಾಕತ್ತೂರು ಬಂಟ್ಸ್ (ದ್ವಿ), ಥ್ರೋಬಾಲ್‌ನಲ್ಲಿ ಬಂಟ್ಸ್ ವಾರಿಯರ್ಸ್ ಮೂರ್ನಾಡು (ಪ್ರ), ಅಮೃತಮಯಿ– ಮಡಿಕೇರಿ (ದ್ವಿ).

ಪುರುಷರ ವಿಭಾಗದ ಹಗ್ಗಜಗ್ಗಾಟ: ಮಲ್ನಾಡ್ ಬಂಟ್ಸ್ (ಪ್ರ), ಸಮುದ್ರ ಬಂಟ್ಸ್ ‘ಎ’ (ದ್ವಿ). ವಾಲಿಬಾಲ್‌ನಲ್ಲಿ ಸಮುದ್ರ ಫ್ರೆಂಡ್ಸ್ ಎ (ಪ್ರ), ಸುಪ್ರಿಂ ಬಂಟ್ಸ್, ಮಡಿಕೇರಿ (ದ್ವಿ).

5 ವರ್ಷದೊಳಗಿನ ಮಕ್ಕಳಿಗೆ ನಡೆದ ಕಾಳು ಹೆಕ್ಕುವ ಸ್ಪರ್ಧೆಯಲ್ಲಿ ಹಂಸಿಕ ರೈ (ಪ್ರ), ಹಿತಶ್ರೀ ರೈ (ದ್ವಿ), ಮಾನ್ವಿತ್ ರೈ (ತೃ). ಕಪ್ಪೆ ಜಿಗಿತ (ಬಾಲಕರು): ವಿಶಿಷ್ಟ ರೈ (ಪ್ರ), ತರುಣ್ ರೈ (ದ್ವಿ), ರಶ್ಮಿನ್ ಬಿ. ರೈ(ತೃ). ಬಾಲಕಿಯರ ವಿಭಾಗದಲ್ಲಿ ಅಂಕಿತ ರೈ(ಪ್ರ), ಅನನ್ಯ ರೈ(ದ್ವಿ), ಹಿತಾ ಶೆಟ್ಟಿ(ತೃ).

ಬಾಲಕರ 50 ಮೀ. ಓಟ: ಸಮರ್ಥ ರೈ(ಪ್ರ), ರೋಹನ್ ರೈ(ದ್ವಿ), ರಷ್ಮಿನ್ ರೈ(ತೃ). ಬಾಲಕಿಯರ ವಿಭಾಗ: ತನ್ಯ ರೈ(ಪ್ರ), ಲತಾಕ್ಷ ರೈ(ವಿ), ನಿಷ್ಮಿತಾ ರೈ (ತೃ).

ಪ್ರಾಥಮಿಕ ಶಾಲಾ ಬಾಲಕರ 100 ಮೀ. ಓಟ: ವಿನ್ಯಾಸ್ ರೈ (ಪ್ರ), ಯೋಗೇಶ್ ರೈ (ದ್ವಿ), ಪ್ರಜ್ವಲ್ ರೈ, ನವನೀತ್ ರೈ (ತೃ). ಬಾಲಕಿಯರ ವಿಭಾಗ: ಪ್ರಾಪ್ತಿ ಪಿ. ರೈ (ಪ್ರ), ಪ್ರತೀಕ್ಷ ರೈ (ದ್ವಿ), ಮುಕ್ತ ಶೆಟ್ಟಿ (ಶೆಟ್ಟಿ). ಪ್ರೌಢಶಾಲೆ ಬಾಲಕರ ವಿಭಾಗದ 100 ಮೀ. ಓಟ: ಮನೀಶ್ ರೈ (ಪ್ರ), ಹರ್ಷಿತ್ ಶೆಟ್ಟಿ (ದ್ವಿ), ಲಿಯಾನ್ ರೈ (ತೃ). ಬಾಲಕಿಯರ ವಿಭಾಗ: ಭೂಮಿಕಾ ಶೆಟ್ಟಿ (ಪ್ರ), ಸುಶ್ಮಿತಾ ರೈ(ವಿ), ಸೃಷಷ್ಟಿ ರೈ (ತೃ).

60 ವರ್ಷ ಮೇಲ್ಪಟ್ಟವರ 100 ಮೀ. ಓಟ (ಪುರುಷರು): ಜನಾರ್ದನಾ ರೈ ಪೋರಬೈಲು (ಪ್ರ), ಜಗನ್ನಾಥ್ ಶೆಟ್ಟಿ (ದ್ವಿ), ಶೇಖರ್ ಶೆಟ್ಟಿ (ತೃ). ಮಹಿಳೆಯರ ವಿಭಾಗ: ವೇದಾವತಿ ಶೆಟ್ಟಿ (ಪ್ರ), ಶಶಿಕಲಾ ಶೆಟ್ಟಿ (ದ್ವಿ), ದೇವಕಿ ರೈ (ತೃ).

ಭಾರದ ಗುಂಡು ಎಸೆತ (ಪುರುಷರು): ರಮೇಶ್ ರೈ(ಪ್ರ), ಯೋಗೇಶ್ ಶೆಟ್ಟಿ(ದ್ವಿ), ಪ್ರಕಾಶ್ ರೈ(ತೃ). ಮಹಿಳೆಯರ ವಿಭಾಗ: ಗೀತಾ ರೈ (ಪ್ರ), ರಶ್ಮಿ ರೈ(ದ್ವಿ), ಶೀತಲ್ ಶೆಟ್ಟಿ (ತೃ). ಮಹಿಳೆಯರ ವಿಭಾಗದ ಸಂಗೀತ ಕುರ್ಚಿ: ಸವಿತಾ ಸತೀಶ್ ರೈ(ಪ್ರ), ಶಶಿಕಲಾ ರೈ ಗೋಣಿಕೊಪ್ಪಲು(ದ್ವಿ), ರುಕ್ಮಿಣಿ ರೈ ಮೂರ್ನಾಡು (ತೃ).

ಬಹುಮಾನ ವಿತರಣೆ: ಜಿಲ್ಲಾ ಬಂಟರ ಸಂಘದ ಗೌರವಾಧ್ಯಕ್ಷ ಐತಪ್ಪ ರೈ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಕಾರ್ಯಕ್ರಮಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಂಘದ ಜಿಲ್ಲಾ ಅಧ್ಯಕ್ಷ ಬಿ.ಡಿ. ನಾರಾಯಣ ರೈ ಉದ್ಘಾಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT