ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತರಕಾರಿ ಬೆಲೆ ಯಥಾಸ್ಥಿತಿ: ಗ್ರಾಹಕರಿಗೆ ನೆಮ್ಮದಿ

news07
Last Updated 26 ಆಗಸ್ಟ್ 2019, 20:00 IST
ಅಕ್ಷರ ಗಾತ್ರ

ಮಡಿಕೇರಿ: ತರಕಾರಿಬೆಲೆಯಲ್ಲಿ ಈ ವಾರವೂ ಯಥಾಸ್ಥಿತಿ ಮುಂದುವರೆದಿದ್ದು ಗ್ರಾಹಕರಿಗೆ ತುಸು ನೆಮ್ಮದಿ ತಂದಿದೆ. ಕಳೆದ ವಾರಕ್ಕೆ ಹೋಲಿಸಿದರೆಬೀನ್ಸ್‌, ಬೆಳ್ಳುಳ್ಳಿ ಬೆಲೆ ಮಾತ್ರ ತುಸು ಏರಿಕೆ ಕಂಡಿದೆ. ಉಳಿದಂತೆ ತರಕಾರಿ ಬೆಲೆ ಕಳೆದ ವಾರದಷ್ಟೇ ಇದೆ.

ಪ್ರತಿ ಕೆ.ಜಿ ಟೊಮೆಟೊಗೆ ಕಳೆದ ವಾರ ₹ 20 ಬೆಲೆಯಿತ್ತು. ಈ ವಾರ ₹ 16ಕ್ಕೆ ಇಳಿದಿದೆ. ಪ್ರತಿ ಕೆ.ಜಿ ಮೂಲಂಗಿಗೆ ₹ 20, ಈರುಳ್ಳಿ ₹ 38, ಹೂಕೋಸು ₹ 30, ಹಸಿಮೆಣಸಿನಕಾಯಿ ₹ 30, ಕ್ಯಾಪ್ಸಿಕಂ ₹ 60, ಬೀಟ್‌ರೂಟ್‌ ₹ 30, ನುಗ್ಗೇಕಾಯಿ ₹ 50, ಕ್ಯಾಬೇಜ್‌ ₹ 26 ಆಗಿದೆ.

ಬೆಂಡೆಕಾಯಿ ₹ 30, ಆಲೂಗೆಡ್ಡೆ ₹ 24, ಬೆಳ್ಳಾರೆ ₹ 20, ಕುಂಬಳಕಾಯಿ ₹ 16, ಹೀರೇಕಾಯಿ ₹ 36, ಪಡುವಲಕಾಯಿ ₹ 30, ತೊಂಡೆಕಾಯಿ ₹ 30, ಬೀನ್ಸ್‌ 50 ಆಗಿದೆ. ಬೆಳ್ಳುಳ್ಳಿ ಬೆಲೆ ₹ 90ಕ್ಕೆ ಇಳಿಕೆಯಾಗಿದೆ.

ಸೊಪ್ಪಿನ ಬೆಲೆಯೂ ಇಳಿಕೆ:

ಪ್ರತಿ ಕಂತೆ ಕೊತ್ತಂಬರಿ ಹಾಗೂ ಮೆಂತೆಗೆ ₹ 5. ಮಳೆ ಹಾಗೂ ಪ್ರವಾಹ ಸಂದರ್ಭದಲ್ಲಿ ಮಡಿಕೇರಿ ಸೇರಿದಂತೆ ಕೊಡಗಿನ ಹಲವು ಮಾರುಕಟ್ಟೆಗಳಿಗೆ ತರಕಾರಿಯೇ ಪೂರೈಕೆ ಕಡಿಮೆಯಿತ್ತು. ಹೀಗಾಗಿ ತರಕಾರಿ ಬೆಲೆಯಲ್ಲಿ ಸಾಕಷ್ಟು ಏರಿಕೆ ಕಂಡಿತ್ತು. ಗ್ರಾಹಕರ ಜೇಬಿಗೂ ಕತ್ತರಿ ಬೀಳುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT