ಪೊಮ್ಮಕ್ಕಡ ಒಕ್ಕೂಟದಿಂದ ಸಂತೋಷಕೂಟ

7

ಪೊಮ್ಮಕ್ಕಡ ಒಕ್ಕೂಟದಿಂದ ಸಂತೋಷಕೂಟ

Published:
Updated:
Prajavani

ಮಡಿಕೇರಿ: ಕೊಡವ ಸಮಾಜದ ಪೊಮ್ಮಕ್ಕಡ ಒಕ್ಕೂಟದ ವತಿಯಿಂದ ನಗರದ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆ ಆವರಣದಲ್ಲಿ ಈಚೆಗೆ ‘ಪುತ್ತರಿ ಹಬ್ಬ’ದ ಸಂತೋಷಕೂಟ ನಡೆಯಿತು.

ಕಾರ್ಯಕ್ರಮದ ಅಂಗವಾಗಿ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಚತುಷ್ಪಥ ರಸ್ತೆ ನಿರ್ಮಾಣದ ವಿಚಾರಕ್ಕೆ ಸಂಬಂಧಿಸಿದ ಚರ್ಚಾ ಸ್ಪರ್ಧೆ, ಬಾಲ್ಯದ ದಿನಗಳ ಮೆಲುಕು, ಕಿರು ನಾಟಕ ಪ್ರದರ್ಶನ, ನೃತ್ಯ, ಹಾಡು, ಆಕರ್ಷಕ ಹೂವು ಜೋಡಣೆ ಹಾಗೂ ಫ್ಯಾಷನ್ ಷೋಗಳು ನಡೆದವು.

ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ, ಕೂಟದ ಅಧ್ಯಕ್ಷೆ ಕನ್ನಂಡ ಕವಿತಾ, ಸಾಹಿತಿ ಶೋಭಾ ಸುಬ್ಬಯ್ಯ, ತೆನ್ನೀರ ರಾಧಾ ಪೊನ್ನಪ್ಪ, ಸಣ್ಣುವಂಡ ಉಷಾ, ಅಚ್ಚಪಂಡ ಪದ್ಮಾ, ಆಲೆಮಾಡ ಚಿತ್ರಾ ನಂಜಪ್ಪ, ಚೇಂದ್ರಿಮಾಡ ಆಗ್ನೇಸ್ ಮುತ್ತಣ್ಣ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !