ಮೋದಿ ಸರ್ಕಾರ ಕಿತ್ತೊಗೆಯುವ ಕಾಲ ಸನ್ನಿಹಿತ: ವಿ.ಪಿ.ಶಶಿಧರ್

ಶನಿವಾರ, ಏಪ್ರಿಲ್ 20, 2019
28 °C

ಮೋದಿ ಸರ್ಕಾರ ಕಿತ್ತೊಗೆಯುವ ಕಾಲ ಸನ್ನಿಹಿತ: ವಿ.ಪಿ.ಶಶಿಧರ್

Published:
Updated:
Prajavani

ಶನಿವಾರಸಂತೆ: ಮೋದಿಯವರ ಆಡಳಿತದಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದ್ದು ಈ ಸರ್ಕಾರವನ್ನು ಕಿತ್ತೊಗೆಯುವ ಕಾಲ ಸನ್ನಿಹಿತವಾಗಿದೆ. ಮೈತ್ರಿ ಪಕ್ಷದ ಲೋಕಸಭಾ ಅಭ್ಯರ್ಥಿ ವಿಜಯಶಂಕರ್ ಗೆಲುವಿಗೆ ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರು ಸಂಘಟಿತರಾಗಿ ಶ್ರಮಿಸಬೇಕಿದೆ ಎಂದು ಕಾಂಗ್ರೆಸ್ ಮುಖಂಡ ವಿ.ಪಿ.ಶಶಿಧರ್ ಕರೆ ನೀಡಿದರು.

ಸಮೀಪದ ಆಲೂರು–ಸಿದ್ದಾಪುರ ಸಮುದಾಯ ಭವನದಲ್ಲಿ ಶನಿವಾರಸಂತೆ ಹೋಬಳಿಯ ಆಲೂರು–ಸಿದ್ಧಾಪುರ-ನಿಡ್ತ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜೆಡಿಎಸ್-ಕಾಂಗ್ರೆಸ್ ಪಕ್ಷದ ಸಮನ್ವಯ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

ಜೆಡಿಎಸ್ ಜಿಲ್ಲಾ ಮಹಾಪ್ರಧಾನ ಕಾರ್ಯದರ್ಶಿ ಎಂ.ಎ.ಆದಿಲ್ ಪಾಶ ಮಾತನಾಡಿ, ಪ್ರಧಾನಮಂತ್ರಿ ಮೋದಿ ಕಳೆದ 5 ವರ್ಷಗಳಿಂದ ಸುಳ್ಳು ಆಶ್ವಾಸನೆಗಳನ್ನು ನೀಡುತ್ತ ಬಂದರು. ಕೊಡಗು ಪ್ರಕೃತಿ ವಿಕೋಪಕ್ಕೆ ಒಳಗಾದಾಗ ಕೊಡಗಿಗೆ ಭೇಟಿ ನೀಡದೇ ಮಲತಾಯಿ ಧೋರಣೆ ಅನುಸರಿಸಿದರು. ಇಂದು ಕಾಫಿ, ಕಾಳುಮೆಣಸು ಬೆಳೆಗಾರರ, ರೈತರ, ಕಾರ್ಮಿಕರ ಸ್ಥಿತಿ ಅಧೋಗತಿಗೆ ಇಳಿಯಲು ಮೋದಿ ಸರ್ಕಾರವೇ ಕಾರಣವಾಗಿದೆ. ಈ ಚುನಾವಣೆಯಲ್ಲಿ ಮತದಾರರು ಅವರಿಗೆ ತಕ್ಕ ಪಾಠ ಕಲಿಸಬೇಕು ಎಂದರು.

ಮುಖಂಡ ಪಾಪಣ್ಣ ಮಾತನಾಡಿ, ‘ರಾಜ್ಯ ಸರ್ಕಾರ ಬಲಗೊಳ್ಳಲು ರಾಜ್ಯದಲ್ಲಿ ಅತಿ ಹೆಚ್ಚು ಸಮ್ಮಿಶ್ರ ಅಭ್ಯರ್ಥಿಗಳು ಆರಿಸಿ ಬರಬೇಕಿದೆ. ಆ ನಿಟ್ಟಿನಲ್ಲಿ ಅಭ್ಯರ್ಥಿ ವಿಜಯಶಂಕರ್ ಅವರನ್ನು ಅತ್ಯಧಿಕ ಮತಗಳಿಂದ ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು.

ಮುಖಂಡರಾದ ಡಿ.ಪಿ.ಬೋಜಪ್ಪ, ಮುತ್ತೇಗೌಡ, ರಾಜಪ್ಪ, ಲತಾ, ದೇವರಾಜ್, ಕುಮಾರಸ್ವಾಮಿ, ಕೃಷ್ಣಮೂರ್ತಿ, ಶೇಷಾದ್ರಿ, ಎನ್.ಬಿ.ನಾಗಪ್ಪ, ಆನಂದ್, ನಾಗಮ್ಮ, ರಾಜಮ್ಮರುದ್ರಯ್ಯ, ಸತೀಶ್, ಪ್ರಸನ್ನ, ತೀರ್ಥಾನಂದ್, ಹರೀಶ್, ಲೀಲಾದಾಸ್, ಅನಿಲ್, ಸುಬ್ಬಮ್ಮ, ಮಂಜುನಾಥ್, ಪೊನ್ನಪ್ಪ, ಪುಟ್ಟಸ್ವಾಮಿ ಇದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !