ಕೊಡಗು ಸಂರಕ್ಷಣೆಗೆ ಪ್ರತ್ಯೇಕ ನೀತಿ ಅಗತ್ಯ: ತಾಂತ್ರಿಕ ಸಮಿತಿ ವರದಿ

7
ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌. ವಿಶ್ವನಾಥ್‌, ಜಿಲ್ಲಾಧಿಕಾರಿ ಶ್ರೀವಿದ್ಯಾ ಚರ್ಚೆ

ಕೊಡಗು ಸಂರಕ್ಷಣೆಗೆ ಪ್ರತ್ಯೇಕ ನೀತಿ ಅಗತ್ಯ: ತಾಂತ್ರಿಕ ಸಮಿತಿ ವರದಿ

Published:
Updated:

ಮಡಿಕೇರಿ: ಮೈಸೂರಿನ ‘ದಿ ಇನ್‌ಸ್ಟಿಟ್ಯೂಟ್‌ ಆಫ್‌ ಎಂಜಿನಿಯರ್‌’ಗಳ ತಂಡವು ಕೊಡಗು ಜಿಲ್ಲೆಯ ಮರು ನಿರ್ಮಾಣಕ್ಕೆ ಸಂಬಂಧಿಸಿದ ತಾಂತ್ರಿಕ ಸಮಿತಿ ಸಲಹೆಯ ವರದಿಯನ್ನು ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಅವರಿಗೆ ಶನಿವಾರ ಹಸ್ತಾಂತರಿಸಿತು.

ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್‌. ವಿಶ್ವನಾಥ್‌ ಅವರ ನೇತೃತ್ವದಲ್ಲಿ ತಾಂತ್ರಿಕ ಸಮಿತಿಯ ಸಂಚಾಲಕ ಎಂ. ಲಕ್ಷ್ಮಣ ಹಾಗೂ ಮತ್ತಿತರರು ವರದಿ ಹಸ್ತಾಂತರಿಸಿದರು. 11 ಮಂದಿ ಎಂಜಿನಿಯರ್‌ಗಳು ಭೂಕುಸಿತವಾದ ಸ್ಥಳಗಳಿಗೆ ಭೇಟಿ ಮಾಡಿ ಪರಿಶೀಲಿಸಿ ಜಿಲ್ಲೆಯ ಮರು ನಿರ್ಮಾಣಕ್ಕೆ ಸಂಬಂಧಿಸಿದಂತೆ ವರದಿ ತಯಾರಿಸಿದ್ದರು.

ಅನಾಹುತಕ್ಕೆ ಕಾರಣ: ಜುಲೈನಲ್ಲಿ ಕೊಡಗು ಜಿಲ್ಲೆಯಲ್ಲಿ ಜನರಿಗೆ ಭೂಕಂಪನದ ಅನುಭವ ಉಂಟಾಗಿತ್ತು. ಬೆಟ್ಟ ಗುಡ್ಡಗಳು ಬಿರುಕು ಬಿಟ್ಟಿವೆ. ಮಳೆ ನೀರು ಈ ಬಿರುಕುಗಳ ನಡುವೆ ಹರಿದು ದೊಡ್ಡ ಪ್ರಮಾಣದಲ್ಲಿ ಭೂಕುಸಿತವಾಗಲು ಕಾರಣವಾಗಿದೆ ಎಂದು ತಜ್ಞರು ಹೇಳಿದ್ದಾರೆ.

ಬೆಟ್ಟ ಮತ್ತು ಗುಡ್ಡಗಳ ಕುಸಿತದಿಂದ ರಸ್ತೆಗಳಿಗೆ ಹಾನಿಯಾಗಿದೆ. ನೀರಿನ ರಭಸದಿಂದ ರಸ್ತೆ ಹಾಗೂ ಭೂಮಿಗಳು ಕೊಚ್ಚಿ ಹೋಗಿವೆ ಎಂದು ಸಮಿತಿ ಹೇಳಿದೆ.  

ಅನಾಹುತ ತಡೆಯಲು ಸಲಹೆ

* ಪಶ್ಚಿಮ ಘಟ್ಟಗಳ ಸಂರಕ್ಷಣೆ ಮುಖ್ಯವಾದದ್ದು. ಮಾಧವ್‌ ಗಾಡ್ಗೀಲ್‌ ಹಾಗೂ ಕಸ್ತೂರಿ ರಂಗನ್‌ ವರದಿಯನ್ನು ಜಾರಿಗೊಳಿಸಬೇಕು.

* ಕೊಡಗು ಜಿಲ್ಲೆಯ ಪರಿಸರ ಸಂರಕ್ಷಣೆ ಹಾಗೂ ಜಿಲ್ಲೆಯ ಹಿತದೃಷ್ಟಿಯಿಂದ ಪ್ರತ್ಯೇಕ ನೀತಿ ಜಾರಿಯಾಗಬೇಕು.

* ರೈಲು ಸಂಪರ್ಕ, ಕೇರಳಕ್ಕೆ ವಿದ್ಯುತ್‌ ಸಂಪರ್ಕ ಹಾಗೂ ಗ್ಯಾಸ್‌ ಸಂಪರ್ಕ ಕಲ್ಪಿಸುವುದನ್ನು ಬಿಡಬೇಕು.

* ಪರಿಸರಕ್ಕೆ ಹಾನಿಯಾಗುವ ಅಭಿವೃದ್ಧಿ ಕೆಲಸಗಳನ್ನು ಸ್ಥಗಿತ ಮಾಡಬೇಕು. ಮರಳು, ಅದಿರು ಗಣಿಗಾರಿಕೆ ಮತ್ತು ಪರಿಸರ ನಾಶ ಮಾಡುವ ಕೈಗಾರಿಕೆಗಳಿಗೆ ಪರವಾನಗಿಯನ್ನು ನೀಡಬಾರದು.

* ಅರಣ್ಯ ಇಲಾಖೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಸಿ ಬೆಳೆಸಬೇಕು.

* ಅಭಿವೃದ್ಧಿ ನೆಪದಲ್ಲಿ ಮರಗಳನ್ನು ಕಡಿಯುವುದನ್ನು ಅಪರಾಧವೆಂದು ಪರಿಗಣಿಸಿ ಕ್ರಿಮಿನಲ್‌ ಮೊಕದಮ್ಮೆ ದಾಖಲಿಸಬೇಕು.

* ಖಾಸಗಿ ಜಮೀನನ್ನು ಸಾರ್ವಜನಿಕ ಉದ್ದೇಶಕ್ಕೆ ಬದಲಾಯಿಸುವ ನೀತಿಯನ್ನು ಕೂಡಲೇ ಸ್ಥಗಿತ ಮಾಡಬೇಕು ಎಂದೂ ಸಮಿತಿ ತಿಳಿಸಿದೆ. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !