ಕೊಡಗಿನಲ್ಲಿದ್ದರು ಶಬರಿಮಲೆ ದೇಗುಲ ಪ್ರವೇಶಿಸಿದ್ದ ಇಬ್ಬರು ಮಹಿಳೆಯರು

7

ಕೊಡಗಿನಲ್ಲಿದ್ದರು ಶಬರಿಮಲೆ ದೇಗುಲ ಪ್ರವೇಶಿಸಿದ್ದ ಇಬ್ಬರು ಮಹಿಳೆಯರು

Published:
Updated:

ವಿರಾಜಪೇಟೆ: ಶಬರಿಮಲೆ ಅಯ್ಯಪ್ಪಸ್ವಾಮಿ ದೇಗುಲ ಪ್ರವೇಶಿಸಿ ಇತಿಹಾಸ ಸೃಷ್ಟಿಸುವುದಕ್ಕೂ ಮೊದಲು ಕೇರಳದ ಇಬ್ಬರು ಮಹಿಳೆಯರು ಕೊಡಗು ಜಿಲ್ಲೆಗೂ ಭೇಟಿ ನೀಡಿದ್ದರು.

ಡಿ.29ರ ಮಧ್ಯಾಹ್ನ 12.15ಕ್ಕೆ ವಿರಾಜಪೇಟೆಯ ಲಾಡ್ಜ್‌ವೊಂದಕ್ಕೆ ಬಂದಿದ್ದ ಮಹಿಳೆಯರು ಕೊಠಡಿ ಪಡೆದು ತಂಗಿದ್ದರು. 31ರಂದು ರೂಂ ಖಾಲಿ ಮಾಡಿದ್ದರು. ಬಿಂದು ಹೆಸರಿನಲ್ಲಿಯೇ ರೂಂ ಬುಕ್ ಮಾಡಲಾಗಿತ್ತು.

ಪತ್ರಿಕೆಗಳಲ್ಲಿ ಪ್ರಕಟವಾದ ಮಹಿಳೆಯರು ಚಿತ್ರವನ್ನು ನೋಡಿ ಸಿ.ಸಿ.ಟಿ.ವಿ ದೃಶ್ಯಾವಳಿ ಪರಿಶೀಲಿಸಿದಾಗ ಈ ವಿಷಯ ಗೊತ್ತಾಯಿತು ಎಂದು ಲಾಡ್ಜ್‌ ಮಾಲೀಕ ಹರಿಹರನ್‌ ತಿಳಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 8

  Happy
 • 1

  Amused
 • 2

  Sad
 • 0

  Frustrated
 • 4

  Angry

Comments:

0 comments

Write the first review for this !