ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಣಿಕೊಪ್ಪಲು: ಫುಟ್‌ಬಾಲ್ ಟೂರ್ನಿಗೆ ಚಾಲನೆ

Last Updated 19 ಏಪ್ರಿಲ್ 2019, 12:06 IST
ಅಕ್ಷರ ಗಾತ್ರ

ಪೊನ್ನಂಪೇಟೆ: ಕೊಡಗು ಹಿಂದೂ ಮಲಯಾಳಿ ಸಮಾಜದ ವತಿಯಿಂದ ಆಯೋಜಿಸಿದ್ದ ಕೊಡಗು ಹಿಂದೂ ಫುಟ್‌ಬಾಲ್‌ ಕಪ್ ಟೂರ್ನಿಗೆ ಗೋಣಿಕೊಪ್ಪಲು ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಚಾಲನೆ ನೀಡಲಾಯಿತು.

ಶುಕ್ರವಾರ ಹಿರಿಯ ಕ್ರೀಡಾಪಟು ಕಳ್ಳಿಚಂಡ ಪ್ರಸಾದ್ ದೀಪ ಬೆಳಗಿಸುವ ಮೂಲಕ ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿ, ಕ್ರೀಡಾಕೂಟಗಳು ಆಟಗಾರರಿಗೆ ಅವಕಾಶ ಕಲ್ಪಿಸುತ್ತದೆ. ಇದನ್ನು ಅರಿತು ಅವಕಾಶ ಸದುಪಯೋಗ ಪಡೆಯುವಲ್ಲಿ ಆಟಗಾರರು ಸಫಲರಾಗಬೇಕು ಎಂದರು.

ಮಲಯಾಳಿ ಸಮಾಜದ ಅಧ್ಯಕ್ಷ ಪಿ.ಎಸ್. ಶರತ್‌ಕಾಂತ್ ಮಾತನಾಡಿ, ಫುಟ್‌ಬಾಲ್‌ ಟೂರ್ನಿಯ ಮೂಲಕ ಎಲ್ಲರನ್ನೂ ಒಂದುಗೂಡಿಸುವ ಪ್ರಯತ್ನ ನಡೆಸಲಾಗುತ್ತಿದೆ. ಸಮಾಜದ ಸದಸ್ಯರು ಒಂದಾಗಲು ಸಾಧ್ಯವಾಗಲಿದೆ ಎಂದು ಹೇಳಿದರು.

ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸೆಲ್ವಿ, ಜಿ.ಪಂ. ಸದಸ್ಯೆ ಶ್ರೀಜಾ ಶಾಜಿ, ಮಲಯಾಳಿ ಸಮಾಜದ ಗೌರವ ಅಧ್ಯಕ್ಷ ಪಿ. ಭಾಸ್ಕರನ್, ಕಾನೂನು ಸಲಹೆಗಾರ ಕೆ.ಬಿ. ಸಂಜೀವನ್, ಕೆಎನ್‌ಎಸ್‌ಎಸ್ ಗೋಣಿಕೊಪ್ಪ ಶಾಖೆ ಅಧ್ಯಕ್ಷ ಪಿ.ಈ. ಪವಿತ್ರನ್, ವಿಶ್ವಕರ್ಮ ಸಮಾಜ ಗೋಣಿಕೊಪ್ಪಲು ಶಾಖೆ ಅಧ್ಯಕ್ಷ ಕೆ.ಎ. ವಿನೋದ್, ಸಮಾಜದ ಪ್ರಧಾನ ಕಾರ್ಯದರ್ಶಿ ವಿ.ವಿ. ಅರುಣ್‌ಕುಮಾರ್, ಖಜಾಂಜಿ ಸುಬ್ರಮಣಿ ಉಪಸ್ಥಿತರಿದ್ದರು.

ಅನುಷಾ ಪ್ರಾರ್ಥಿಸಿದರು. ಸುಬ್ರಮಣಿ ವಂದಿಸಿದರು. ಏ. 21ರವರೆಗೆ ನಡೆಯುವ ಕ್ರೀಡಾಕೂಟದಲ್ಲಿ 30 ತಂಡಗಳು ಪಾಲ್ಗೊಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT