ಬುಧವಾರ, ನವೆಂಬರ್ 20, 2019
25 °C

ಅನೈತಿಕ ಚಟುವಟಿಕೆ: ಹೋಮ್‌ ಸ್ಟೇ ವಿರುದ್ಧ ಕ್ರಮಕ್ಕೆ ಆಗ್ರಹ

Published:
Updated:
Prajavani

ಮಡಿಕೇರಿ: ‘ಕಾನೂನಿಗೆ ವಿರುದ್ಧವಾದ ಅನೈತಿಕ ಚಟುವಟಿಕೆಗಳಲ್ಲಿ ತೊಡಗಿರುವ ಹೋಮ್‌ ಸ್ಟೇಗಳನ್ನು ಶಾಶ್ವತವಾಗಿ ಮುಚ್ಚಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು’ ಎಂದು ಜಿಲ್ಲಾ ಹೋಮ್‌ ಸ್ಟೇ ಅಸೋಸಿಯೇಷನ್ ಅಧ್ಯಕ್ಷ ಬಿ.ಜಿ.ಅನಂತಶಯನ ಒತ್ತಾಯಿಸಿದ್ದಾರೆ.

ಅನಧಿಕೃತ ಹೋಮ್‌ ಸ್ಟೇಗಳ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ವಿಫಲವಾಗಿದ್ದು, ಇದರಿಂದ ಅವ್ಯವಹಾರಗಳು ಹೆಚ್ಚುತ್ತಿವೆ. ಒಂದುವೇಳೆ ಕಾನೂನಿಗೆ ವಿರುದ್ಧವಾಗಿ ವ್ಯವಹಾರ ನಡೆಸುವ ಅಧಿಕೃತ ಹೋಮ್‌ ಸ್ಟೇಗಳು ಕಂಡುಬಂದಲ್ಲಿ ಆ ಹೋಮ್‌ ಸ್ಟೇಗಳ ಸದಸ್ಯತ್ವ ಕಿತ್ತು ಹಾಕುವುದಾಗಿ ಅವರು ಎಚ್ಚರಿಸಿದ್ದಾರೆ.

ಬೆರಳೆಣಿಕೆಯ ಮಂದಿ ದಿಢೀರ್ ಹಣ ಮಾಡಲು, ಹೊಲಸು ವ್ಯವಹಾರಕ್ಕೆ ಇಳಿದಿದ್ದಾರೆ. ಇದರಿಂದ ಇಡೀ ಉದ್ಯಮಕ್ಕೆ ಮಸಿ ಬಳಿದಂತಾಗಿದೆ ಎಂದು ಅನಂತಶಯನ ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)