ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪೌರತ್ವ ಕಾಯ್ದೆ: ಸಂದೇಹ ಪರಿಹರಿಸಲಿ’

ಕೊಂಡಂಗೇರಿಯ ಶಾದಿ ಮಹಲ್‌ನಲ್ಲಿ ನಡೆದ ವಿಚಾರಗೋಷ್ಠಿ
Last Updated 7 ಜನವರಿ 2020, 14:33 IST
ಅಕ್ಷರ ಗಾತ್ರ

ಸಿದ್ದಾಪುರ: ‘ಪೌರತ್ವ (ತಿದ್ದುಪಡಿ) ಕಾಯ್ದೆ ಬಗ್ಗೆ ಇರುವ ಸಂದೇಹಗಳನ್ನು ಸರ್ಕಾರ ಮೊದಲು ಪರಿಹರಿಸಬೇಕು’ ಎಂದು ‘ಪ್ರಜಾವಾಣಿ’ಯ ಸಹ ಸಂಪಾದಕ ಬಿ.ಎಂ.ಹನೀಫ್ ಇಲ್ಲಿ ಅಭಿಪ್ರಾಯಪಟ್ಟರು.

ಸಮೀಪದ ಕೊಂಡಂಗೇರಿಯ ಶಾದಿ ಮಹಲ್‌ನಲ್ಲಿ ‘ಸಿ.ಎ.ಎ, ಎನ್‌.ಆರ್‌.ಸಿ, ಎನ್‌.ಪಿ.ಆರ್ ಕಾರಣ ಮತ್ತು ಪರಿಣಾಮಗಳು’ ಕುರಿತು ನಡೆದ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಪೌರತ್ವ (ತಿದ್ದುಪಡಿ) ಕಾಯ್ದೆಯು ಸಂವಿಧಾನ ವಿರುದ್ಧದ ಆಶಯವಾಗಿರುವ ಕಾರಣಕ್ಕೆ ಈ ಬಗ್ಗೆ ಚರ್ಚೆ ನಡೆಯಬೇಕಿದೆ. ರಾಜಕೀಯ ಮುಖಂಡರ ಬದಲಿಗೆ, ಅಧಿಕಾರಿಗಳ ಮೂಲಕವೇ ಸಂದೇಹ ಪರಿಹಾರಕ್ಕೆ ಸರ್ಕಾರ ಮುಂದಾಗಬೇಕಿತ್ತು. ಪೌರತ್ವಕ್ಕೆ ಸಂಬಂಧಿಸಿದ ವ್ಯಾಜ್ಯ ಸುಪ್ರೀಂ ಕೋರ್ಟ್‌ನಲ್ಲಿದೆ. ಸರ್ಕಾರಕ್ಕೆ ಇಷ್ಟೊಂದು ಆತುರ ಮಾಡುವ ಅಗತ್ಯವಿರಲಿಲ್ಲ’ ಎಂದು ಅಭಿಪ್ರಾಯಪಟ್ಟರು.

‘ಇದು ರಾಜಕೀಯ ವಿಷಯವಲ್ಲ; ಭಾರತೀಯ ನಾಗರಿಕರ ವಿಚಾರ. ಕಾಯ್ದೆ ಸಂವಿಧಾನ ಬದ್ಧವಾಗಿದ್ದರೆ ಜಾರಿ ಮಾಡುವ ಬಗ್ಗೆಯೂ, ಸಂವಿಧಾನ ವಿರೋಧಿಯಾಗಿದ್ದರೆ ಕಾನೂನು ರೀತಿಯಲ್ಲಿ ಎದುರಿಸುವ ಬಗ್ಗೆಯೂ ಚರ್ಚೆಗಳು ನಡೆಯಲಿ’ ಎಂದು ಹೇಳಿದರು.

ಮುಸ್ಲಿಂ ಜಮಾತ್ ಜಿಲ್ಲಾ ಘಟಕದ ಅಧ್ಯಕ್ಷ ಸೈಯದ್ ಶಿಹಾಬುದ್ದೀನ್ ಅಲ್ ಹೈದ್ರೊಸ್ ಕಿಲ್ಲೂರು, ಜಿಲ್ಲೆ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹಾಜಿ, ವಕೀಲ ಕೆ. ಅಬ್ದುಲ್ಲಾ, ವಕ್ಫ್ ಬೋರ್ಡ್ ಜಿಲ್ಲಾ ಅಧ್ಯಕ್ಷ ಕೆ.ಎ.ಯಾಕೂಬ್, ಪಿ.ಯು.ಹನೀಫ್ ಸಖಾಫಿ, ಪಿ.ಎ.ಯೂಸುಫ್, ಜಿಲ್ಲಾ ಪಂಚಾಯತಿ ಸದಸ್ಯ ಅಬ್ದುಲ್ ಲತೀಫ್ ಮೊದಲಾದವರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT