ಜಿಲ್ಲಾಧಿಕಾರಿ ಕಚೇರಿಯಲ್ಲಿ ಗಮನ ಸೆಳೆದ ವ್ಯಕ್ತಿ

7

ಜಿಲ್ಲಾಧಿಕಾರಿ ಕಚೇರಿಯಲ್ಲಿ ಗಮನ ಸೆಳೆದ ವ್ಯಕ್ತಿ

Published:
Updated:
Prajavani

ಮಡಿಕೇರಿ: ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ಮಂಗಳವಾರ ಕರ್ತವ್ಯ ನಿರತರಾಗಿದ್ದರು. ಮಧ್ಯಾಹ್ನ ದಿಢೀರ್‌ ಆಗಿ ವ್ಯಕ್ತಿಯೊಬ್ಬರು ವಿಭಿನ್ನ ವೇಷದಲ್ಲಿ ಪ್ರವೇಶಿಸಿದರು. ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಒಳಗೊಂಡಂತೆ ಸಿಬ್ಬಂದಿ ಅಚ್ಚರಿಗೆ ಒಳಗಾದರು. ಆ ವ್ಯಕ್ತಿ ಯಾರು ಎನ್ನುತ್ತೀರಾ? ಕೇರಳದ ವಾಯುತ್ತೂರುಪ್ಪ ದೇವಾಲಯದ ಅರ್ಚಕ.

ವಾಯುತ್ತೂರಪ್ಪ ದೇವರ ಉತ್ಸವಕ್ಕೆ ಜಿಲ್ಲಾಧಿಕಾರಿ ಆಹ್ವಾನಿಸಲು ವಿಭಿನ್ನ ವೇಷದಲ್ಲಿ ಕಚೇರಿ ಪ್ರವೇಶಿಸಿ ಎಲ್ಲರೂ ಅಚ್ಚರಿ ಪಡುವಂತೆ ಮಾಡಿದರು. ವಿಧಾನ ಪರಿಷತ್‌ ಸದಸ್ಯ ಎಂ.ಪಿ. ಸುನಿಲ್ ಸುಭ್ರಮಣಿ ಸಹ ಹಾಜರಿದ್ದರು.

ನಂತರ ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಮಾತನಾಡಿ, ‘ಸಂಪ್ರದಾಯದಂತೆ ದೇವಾಲಯ ಸಮಿತಿಯವರು ಉತ್ಸವಕ್ಕೆ ಆಹ್ವಾನಿಸಲು ಬಂದಿದ್ದಾರೆ. ಅದು ಹಿಂದಿನಿಂದಲೂ ನಡೆದುಕೊಂಡ ಬಂದ ಪದ್ಧತಿ’ ಎಂದು ಹೇಳಿದರು.

ದೇವಸ್ಥಾನ ಸಮಿತಿಯ ಪೊನ್ನಪ್ಪ ಮಾತನಾಡಿ, ‘ಹಿಂದಿನ ಕಾಲದಲ್ಲಿ ಕೊಡಗಿಗೆ ಬಂದು ಪೂಜೆ ಸಲ್ಲಿಸಿ ಕೊಡಗಿನ ರಾಜರನ್ನು ಉತ್ಸವಕ್ಕೆ ಆಹ್ವಾನಿಸಲಾಗುತ್ತಿತ್ತು. ನಂತರ, ಈ ಸಂಪ್ರದಾಯ ಕಣ್ಮರೆಯಾಗಿತ್ತು. ಕೇರಳದಲ್ಲಿ ಅಷ್ಟಮಂಗಲ ಪ್ರಶ್ನೆಯಿಟ್ಟಾಗ ಸಂಪ್ರದಾಯ ಬಿಟ್ಟಿರುವುದೇ ಕೊಡಗಿನ ಪರಿಸ್ಥಿತಿಗೆ ಕಾರಣ ಎಂಬುದು ತಿಳಿದುಬಂದಿತ್ತು. ಈಗ ರಾಜ ಆಳ್ವಿಕೆ ಇಲ್ಲ. ಜಿಲ್ಲಾಧಿಕಾರಿ ಪ್ರಮುಖರು. ಹೀಗಾಗಿ ಅವರನ್ನು ಆಹ್ವಾನಿಸುತ್ತಿದ್ದೇವೆ. ಕೊಡಗಿನ ಪರಿಸ್ಥಿತಿ ಸುಧಾರಿಸಲಿ’ ಎಂದು ಹೇಳಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !