ಸಿಗದ ಸೂರ್ಯನ ದರ್ಶನ: ಕಾನ್‌ಸ್ಟೆಬಲ್ ಅಳಲು!

7

ಸಿಗದ ಸೂರ್ಯನ ದರ್ಶನ: ಕಾನ್‌ಸ್ಟೆಬಲ್ ಅಳಲು!

Published:
Updated:
Deccan Herald

ಮಡಿಕೇರಿ: ಕೊಡಗಿನಲ್ಲಿ‌ ಕಳೆದ ಎರಡು ತಿಂಗಳಿಂದ ಸುರಿಯುತ್ತಿರುವ ಮಳೆ‌ಯಿಂದ ಹಲವಾರು ರೀತಿಯ ಅವಾಂತರಗಳು ಸೃಷ್ಟಿಯಾಗುತ್ತಿವೆ. ಒಂದೆಡೆ ರಸ್ತೆ ಕುಸಿತ, ಬೆಳೆ ಹಾನಿ ಸಂಭವಿಸುತ್ತಿದ್ದರೆ ದಿನದಿಂದ ದಿನಕ್ಕೆ ಜನಜೀವನವೂ ಅಸ್ತವ್ಯಸ್ತಗೊಳ್ಳುತ್ತಿದೆ. ಮಳೆಯ ರಗಳೆ ಪೊಲೀಸ್ ಕಾನ್‌ಸ್ಟೆಬಲ್‌ಗೂ ತಟ್ಟಿದ್ದು ರಜೆಗಾಗಿ ಪೊಲೀಸ್ ವರಿಷ್ಠಾಧಿಕಾರಿಯಲ್ಲಿ ಮೊರೆಯಿಟ್ಟಿದ್ದಾರೆ!

ಅವರು ಬರೆದು ಪತ್ರ ಸಾಮಾಜಿಕ ಜಾಲತಾಣದಲ್ಲಿ‌ ಹರಿದಾಡುತ್ತಿದೆ.

'ಕಳೆದ ಎರಡು ತಿಂಗಳಿಂದ ಸೂರ್ಯನ ಮುಖವನ್ನೇ ನೋಡಿಲ್ಲ. ನಮ್ಮ ಊರಿಗೆ ತೆರಳಿ‌ ಸೂರ್ಯನನ್ನು ನೋಡಿಕೊಂಡು, ಬಟ್ಟೆ ಒಣಗಿಸಿಕೊಂಡು‌ ಬರಲು ಆ.18ರಿಂದ‌ ಐದು ದಿನಗಳ ಕಾಲ ಸಾಂದರ್ಭಿಕ ರಜೆ ನೀಡುವಂತೆ‌ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ' ಎಂದು‌ ರಮೇಶ್ (ಪಿಸಿ ಸಂಖ್ಯೆ1121) ಎಂಬುವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರಲ್ಲಿ ಕೋರಿದ್ದಾರೆ. ಆದರೆ, ಆ ಪತ್ರದಲ್ಲಿ ಯಾವ ಠಾಣೆಯ ಸಿಬ್ಬಂದಿ ಎಂದು ನಮೂದಿಸಿಲ್ಲ.

'ಆ ರೀತಿಯ ಯಾವುದೇ ರಜೆಯ ಮನವಿ ನನಗೆ ಬಂದಿಲ್ಲ' ಎಂದು‌ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್‌ ಡಿ. ಪನ್ನೇಕರ್ 'ಪ್ರಜಾವಾಣಿ'ಗೆ ತಿಳಿಸಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !