ಹುತ್ತರಿ ಹಬ್ಬ: ಓಂಕಾರೇಶ್ವರ ದೇವಾಲಯದ ಆವರಣದಲ್ಲಿ ಭತ್ತ ನಾಟಿ

7

ಹುತ್ತರಿ ಹಬ್ಬ: ಓಂಕಾರೇಶ್ವರ ದೇವಾಲಯದ ಆವರಣದಲ್ಲಿ ಭತ್ತ ನಾಟಿ

Published:
Updated:
Deccan Herald

ಮಡಿಕೇರಿ: ನಗರದ ಓಂಕಾರೇಶ್ವರ ದೇವಾಲಯದ ಆವರಣದಲ್ಲಿ ಬುಧವಾರ ಹುತ್ತರಿ ಹಬ್ಬಕ್ಕಾಗಿ ಭತ್ತದ ತೆನೆಯನ್ನು (ಕದಿರು) ತೆಗೆಯುವ ಉದ್ದೇಶಕ್ಕಾಗಿ ಭತ್ತದ ಸಸಿ ನೆಡಲಾಯಿತು. ವ್ಯವಸ್ಥಾಪನಾ ಸಮಿತಿ ಹಾಗೂ ಕೊಡಗು ಜಾನಪದ ಪರಿಷತ್ ವತಿಯಿಂದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಓಂಕಾರೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಪುಲಿಯಂಡ ಕೆ. ಜಗದೀಶ್, ಸದಸ್ಯ ಸುನಿಲ್ ಕೆ., ಕಾರ್ಯ ನಿರ್ವಹಣಾಧಿಕಾರಿ ಸಂಪತ್ ಕುಮಾರ್ ಹಾಗೂ ಮಾಜಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರಮೇಶ್ ಹೊಳ್ಳ, ಜಾನಪದ ಪರಿಷತ್‌ ಜಿಲ್ಲಾ ಅಧ್ಯಕ್ಷ ಅನಂತಶಯನ, ಉಪಾಧ್ಯಕ್ಷ ಅಂಬೆಕಲ್ಲು ಕುಶಾಲಪ್ಪ, ಕೃಪಾ ದೇವರಾಜ್, ಕವಿತಾ, ರಾಧಿಕಾ, ಶಿವು ಮತ್ತು ವಾಸು ಪುಟ್ಟಯ್ಯ, ಕುಶ, ಅಣ್ಣಪ್ಪ ಹಾಜರಿದ್ದರು.

‘ಪರಂಪರೆಯಿಂದ ನಡೆದು ಬರುವ ಹುತ್ತರಿ ಹಬ್ಬವನ್ನು ಆಚರಿಸಲು ಸಾಂಪ್ರದಾಯಿಕವಾದ ಗ್ರಾಮೀಣ ಪ್ರದೇಶದಲ್ಲಿ ಭತ್ತದ ಸಸಿ ನೆಡುವ ಕಾರ್ಯಕ್ರಮ ಇದಾಗಿದ್ದು, ನಾಟಿಯನ್ನು ಮಾಡಲಾಗಿದೆ’ ಎಂದು ಜಾನಪದ ಪರಿಷತ್ತಿನ ಅಧ್ಯಕ್ಷ ಅನಂತಶಯನ ತಿಳಿಸಿದರು.

ಈ ಹಿಂದಿನಿಂದಲೂ ಬಂದ ಸಂಪ್ರದಾಯವನ್ನು ದೇವಸ್ಥಾನದಲ್ಲಿ ನಡೆಸುವ ರೀತಿಯಲ್ಲಿ ಈ ವರ್ಷವೂ ನಾಟಿ ಮಾಡಲಾಗಿದೆ ಎಂದು ತಿಳಿಸಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !