ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾರ್ವತಿ– ಪರಮೇಶ್ವರ ಜೋಡಿ ದೇವರ ನೃತ್ಯಬಲಿ

ಪಾಲೂರು ಮಹಾಲಿಂಗೇಶ್ವರ ವಾರ್ಷಿಕೋತ್ಸವ ಸಂಭ್ರಮ: ದೇವಾಲಯಗಳ ಕೋಲ ನಾಳೆ
Last Updated 19 ಏಪ್ರಿಲ್ 2021, 4:49 IST
ಅಕ್ಷರ ಗಾತ್ರ

ನಾಪೋಕ್ಲು: ಸಮೀಪದ ಪಾಲೂರಿನ ಮಹಾಲಿಂಗೇಶ್ವರ ದೇವಾಲಯದಲ್ಲಿ ವಾರ್ಷಿಕ ಉತ್ಸವ ವಿಜೃಂಭಣೆಯಿಂದ ಜರುಗಿತು.

ಭಾನುವಾರ ನಡೆದ ವಾರ್ಷಿಕ ಉತ್ಸವದಲ್ಲಿ ಪಾರ್ವತಿ ಪರಮೇಶ್ವರ ಜೋಡಿ ದೇವರ ನೃತ್ಯ ಬಲಿ ಜರುಗಿತು. ಅಧಿಕ ಸಂಖ್ಯೆಯ ಭಕ್ತರು ಉತ್ಸವದಲ್ಲಿ ಪಾಲ್ಗೊಂಡಿದ್ದರು. ಮಧ್ಯಾಹ್ನ ದೇವಾಲಯದಲ್ಲಿ ವಿಶೇಷ ಪೂಜೆ ಮಾಡಲಾಯಿತು. ಬಳಿಕ ಭಕ್ತರಿಗೆ ಅನ್ನಸಂತರ್ಪಣೆ
ಏರ್ಪಡಿಸಲಾಗಿತ್ತು.

ಕುಯ್ಯಂಗೇರಿ ನಾಡಿನ ಪಾಲೂರು ಗ್ರಾಮದ ಪುರಾತನ ಮಹಾಲಿಂಗೇಶ್ವರ ದೇವಾಲಯದಲ್ಲಿ ಪೂದಕೋಲದೊಂದಿಗೆ ಉತ್ಸವ ಆರಂಭಗೊಂಡಿತು. ಒಂದು ವಾರಗಳ ಕಾಲ ವಿಜೃಂಭಣೆಯಿಂದ ಹಬ್ಬ ಜರುಗಿತು. ಭಾನುವಾರ ಎತ್ತುಪೋರಾಟ, ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ನೃತ್ಯೋತ್ಸವಕ್ಕೆ ಮುನ್ನ ನಾಲ್ಕುನಾಡಿನ ಭಗವತಿ ಯುವಕ ಸಂಘದ ಸದಸ್ಯರಿಂದ ಬೋಳಕಾಟ್, ಕೋಲಾಟ್ ಹಾಗೂ ಪರೆಯಕಳಿ ಪ್ರದರ್ಶನ ನಡೆಯಿತು.

ಗ್ರಾಮದ ತಕ್ಕಮುಖ್ಯಸ್ಥರು, ದೇವಾಲಯದ ಆಡಳಿತ ಮಂಡಳಿ ಸದಸ್ಯರು ಪಾಲ್ಗೊಂಡಿದ್ದರು.

ಮುಖ್ಯ ಅರ್ಚಕ ದೇವಿಪ್ರಸಾದ್ ನೇತೃತ್ವದಲ್ಲಿ ವಿವಿಧ ಪೂಜಾಕಾರ್ಯಗಳು ಜರುಗಿದವು. ಸೋಮವಾರ ಸಂಜೆ ತೆಂಗಿನಕಾಯಿಗೆ ಗುಂಡು ಹೊಡೆಯುವುದು, ದೇವರ ದರ್ಶನ, ಸಮೀಪದ ಹರಿಶ್ಚಂದ್ರದಲ್ಲಿ ದೇವರ ಅವಭೃತ ಸ್ನಾನ
ಜರುಗಲಿದೆ.

ಮಂಗಳವಾರ ದೀಪಾಲಂಕಾರ, ಮಹಾಪೂಜೆ ಇನ್ನಿತರೆ ಕಾರ್ಯಕ್ರಮಗಳು ಜರುಗಲಿದ್ದು, ರಾತ್ರಿ ಚಾಮುಂಡಿ ದೇವಸ್ಥಾನದಲ್ಲಿ ಐದು ಕೂಟು ದೇವಾಲಯಗಳ ಕೋಲ ನಡೆಯಲಿದೆ. ವಿಷ್ಣುಮೂರ್ತಿ ಕೋಲ, ಮೇಲೇರಿಯೊಂದಿಗೆ ಅದ್ದೂರಿ ಉತ್ಸವಕ್ಕೆ ತೆರೆ ಎಳೆಯಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT