ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯರಿಗೆ ಪುರವಂತಿಗೆ ತರಬೇತಿ ಶ್ಯಾಘನೀಯ

Last Updated 8 ಮಾರ್ಚ್ 2018, 10:20 IST
ಅಕ್ಷರ ಗಾತ್ರ

ರಾಣೆಬೆನ್ನೂರು: ‘ವೀರಭದ್ರೇಶ್ವರ ಹವ್ಯಾಸಿ ಕಲಾ ತಂಡದ ಕಲಾವಿದ ಬಸವಣ್ಣೆಪ್ಪ ಅಟವಾಳಗಿ ಅವರು ಯುವತಿಯರಿಗೆ ಪುರವಂತಿಕೆ ಕಲೆಯ ತರಬೇತಿ ನೀಡುತ್ತಿರುವುದು ಶ್ಲಾಘನೀಯ’ ಎಂದು ಚನ್ನೇಶ್ವರ ಮಠದ ಕಾರ್ಯದರ್ಶಿ ಪ್ರೊ.ಅ.ಸಿ.ಹಿರೇಮಠ ಹೇಳಿದರು.

ಇಲ್ಲಿನ ಮೃತ್ಯುಂಜಯ ನಗರದ ಚನ್ನೇಶ್ವರಮಠದ ವಾಗೀಶ ಪಂಡಿತಾರಾಧ್ಯ ಸಭಾಭನದಲ್ಲಿ ಹೋಳಿ ಹುಣ್ಣಿಮೆ ಹಿನ್ನೆಲೆಯಲ್ಲಿ ಈಚೆಗೆ ನಡೆದ ‘ಜ್ಞಾನವಾಹಿನಿ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ಆಕಾಶವಾಣಿ ಕಲಾವಿದೆ ಗಿರಿಜಾ ಎನ್‌. ಹಿರೇಮಠ ಅವರು ‘ಸಂಗೀತ ಸೌರಭ’ವನ್ನು ನಡೆಸಿಕೊಟ್ಟರು. ಸ್ಥಳೀಯ ಕಲಾವಿದರಾದ ಗಣ್ಣಪ್ಪ ಕುಲಕರ್ಣಿ, ಅನಸೂಯಾ ರಾಠೋಡ, ಗುಡ್ಡಪ್ಪ ಹಿಂದಿನಮನಿ, ನಿಂಗಪ್ಪ ವಿಭೂತಿ, ವೀಣಾ ಕಾಮಠೆ, ಮೌನೇಶ ತ್ರಾಸದ, ರಜನಿ ಕರಿಗಾರ, ನಾಗಪ್ಪ ಮುಂತಾದ ಕಲಾವಿದರು ಭಾಗವಹಿಸಿದ್ದರು.

ಸನ್ಮಾನ: ಕನ್ನಡ ಸಾಹಿತ್ಯ ಪರಿಷತ್‌ನ ಪ್ರಥಮ ಜಿಲ್ಲಾ ಮಹಿಳಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಗಿರಿಜಾದೇವಿ ದುರ್ಗದಮಠ ಹಾಗೂ ವೀರಭದ್ರೇಶ್ವರ ಹವ್ಯಾಸಿ ಕಲಾ ತಂಡದ ಕಲಾವಿದ ಬಸವಣ್ಣೆಪ್ಪ ಅಟವಾಳಗಿ ಹಾಗೂ ಹೊನ್ನಾಳಿಯಿಂದ ಶ್ರೀಶೈಲ ಪೀಠಕ್ಕೆ ಪಾದಯಾತ್ರೆ ಕೈಗೊಂಡ ಹೊನ್ನಾಳಿ ಹಿರೇಕಲ್ಮಠದ ಒಡೆಯರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರರನ್ನು ದಾನೇಶ್ವರಿ ಅಕ್ಕನಬಳದ ಪದಾಧಿಕಾರಿಗಳು ಸನ್ಮಾನಿಸಿದರು.

ಮುಖಂಡರಾದ ಬಿ.ಎಸ್‌.ಪಟ್ಟಣಶೆಟ್ಟಿ, ವಿ.ಬಿ.ಅಂಗಡಿ, ಉಮೇಶ ಗುಂಡಗಟ್ಟಿ, ಮಲ್ಲಜ್ಜ ಹೆಗ್ಗಪ್ಪನವರ, ಬಸನಗೌಡ ಮರಬಸಣ್ಣನವರ, ಶಶಿಕಲಾ ಹಳ್ಳಳ್ಳಿ, ವಿ.ಎಂ.ಕರ್ಜಿಗಿ, ಮಹೇಶ ಹಳ್ಳಳ್ಳಿ, ಹಾಲಸಿದ್ದಶಾಸ್ತ್ರಿ, ಗಾಯತ್ರಮ್ಮ ಕುರುವತ್ತಿ, ಶಕುಂತಲಾ ಅಂಗಡಿ, ಸುವರ್ಣಮ್ಮ ಮಾಗನೂರಮಠ, ಭಾಗ್ಯ ಗುಂಡಗಟ್ಟಿ, ಕಸ್ತೂರಿ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT