‘ಪೌರ ಕಾರ್ಮಿಕರು ಕಾಯಕ ಯೋಗಿಗಳು’

7
ಪೌರಕಾರ್ಮಿಕರ ದಿನಾಚರಣೆಯಲ್ಲಿ ಸನ್ಮಾನ

‘ಪೌರ ಕಾರ್ಮಿಕರು ಕಾಯಕ ಯೋಗಿಗಳು’

Published:
Updated:
Deccan Herald

ಮಡಿಕೇರಿ: ‘ನಗರದ ಸೌಂದರ್ಯ ಹಾಗೂ ಸ್ವಚ್ಛತೆ ಕಾಪಾಡುವಲ್ಲಿ ಪೌರ ಕಾರ್ಮಿಕರ ಕೆಲಸ ಮಹತ್ವದ್ದು’ ಎಂದು ನಗರಸಭೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ನುಡಿದರು.

ಇಲ್ಲಿನ ಕಾವೇರಿ ಕಲಾಕ್ಷೇತ್ರದಲ್ಲಿ ಶುಕ್ರವಾರ ನಗರಸಭೆ ವತಿಯಿಂದ ನಡೆದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನಾವು ವಾಸ ಮಾಡುವ ಪ್ರದೇಶದ ಸುತ್ತಮುತ್ತಲ ಪರಿಸರ ಸ್ವಚ್ಛವಾಗಿ ಇಟ್ಟುಕೊಂಡರೆ ಇಡೀ ನಗರವೇ ಶುಚಿತ್ವದಿಂದ ಇರಲಿದೆ. ಆ ನಿಟ್ಟಿನಲ್ಲಿ ಎಲ್ಲರೂ ಪ್ರಯತ್ನಿಸಬೇಕು’ ಎಂದು ಕಾವೇರಮ್ಮ ಕೋರಿದರು.

‘ನಾವು ಸಹ ಸ್ವಚ್ಛತೆ ಕಾಪಾಡಲು ಕೈಕೋಡಿಸಿದರೆ ಪೌರ ಕಾರ್ಮಿಕರ ಕೆಲಸದ ಒತ್ತಡವು ಕಡಿಮೆಯಾಗಲಿದೆ’ ಎಂದು ಕಿವಿಮಾತು ಹೇಳಿದರು.

ನಗರಸಭೆ ಸದಸ್ಯ ಪಿ.ಡಿ.ಪೊನ್ನಪ್ಪ ಮಾತನಾಡಿ, ‘ಸ್ವಚ್ಛತೆ ಎಂಬುದು ಮನಸ್ಸಿನಿಂದಲೇ ಬರಬೇಕು. ಕೆಲವು ದೇಶಗಳಲ್ಲಿ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಲಾಗುತ್ತಿದೆ. ನಮ್ಮ ದೇಶದಲ್ಲಿ ಏಕೆ ಅದು ಸಾಧ್ಯವಾಗುತ್ತಿಲ್ಲ. ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕು’ ಎಂದು ಹೇಳಿದರು.

ಪೌರಾಯುಕ್ತ ರಮೇಶ್, ‘ಪೌರ ಕಾರ್ಮಿಕರು ಕಾಯಕ ಯೋಗಿಗಳಾಗಿದ್ದು, ಇಡೀ ನಗರವನ್ನು ಸ್ವಚ್ಛ ಮಾಡುತ್ತಾರೆ’ ಎಂದು ಸೇವೆ ಶ್ಲಾಘಿಸಿದರು.
ಸಿಂಗಾಪುರ ಪ್ರವಾಸ ಕೈಗೊಂಡ ನಾಲ್ಕು ಮಂದಿ ಪೌರ ಕಾರ್ಮಿಕರು ತಮ್ಮ ಪ್ರವಾಸದ ಅನಿಸಿಕೆ ಹಂಚಿಕೊಂಡರು.

ನಗರಾಭಿವೃದ್ಧಿ ಯೋಜನಾ ಶಾಖೆಯ ಯೋಜನಾ ನಿರ್ದೇಶಕರಾದ ಗೋಪಾಲಕೃಷ್ಣ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಉನ್ನೀಕೃಷ್ಣ, ಸದಸ್ಯರಾದ ಶ್ರೀಮತಿ ಬಂಗೇರಾ, ಪ್ರಕಾಶ್ ಆಚಾರ್ಯ, ಸವಿತಾ ರಾಕೇಶ್, ಅನಿತಾ ಪೂವಯ್ಯ, ಉದಯಕುಮಾರ್, ಯತೀಶ್, ಎ.ಸಿ. ದೇವಯ್ಯ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !