ಪಂಚಾಯಿತಿ ಸದಸ್ಯರಿಂದಲೇ ಗಿಡಗಳ ಹನನ

7
ಸಾರ್ವಜನಿಕರು, ಕೆಲ ಸದಸ್ಯರಿಂದ ಅಸಮಾಧಾನ

ಪಂಚಾಯಿತಿ ಸದಸ್ಯರಿಂದಲೇ ಗಿಡಗಳ ಹನನ

Published:
Updated:
Deccan Herald

ಗೋಣಿಕೊಪ್ಪಲು: ಪಟ್ಟಣದ ಹೃದಯ ಭಾಗದಲ್ಲಿ ಸಮೃದ್ಧವಾಗಿ ಬೆಳೆದು ಹಸಿರುಕಳೆ ತುಂಬಿದ್ದ ಸುಮಾರು 40 ವರ್ಷದಷ್ಟು ಹಿಂದಿನ ಅಶೋಕವೃಕ್ಷಗಳನ್ನು ಗ್ರಾಮ ಪಂಚಾಯಿತಿ ಸದಸ್ಯರೇ ಕಡಿದು ನೆಲಕ್ಕುರುಳಿಸಿದ್ದಾರೆ. ಇದಕ್ಕೆ ಕೆಲ ಸದಸ್ಯರು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ಇಲ್ಲಿನ ಹಳೆಯ ಗ್ರಾಮ ಪಂಚಾಯಿತಿ ಸಭಾಂಗಣದ ಮುಂಭಾಗದಲ್ಲಿ ಹಿಂದೆ ಪುರಸಭೆ ಇದ್ದಾಗ ನೆರಳು ಮತ್ತು ಹಸಿರು ಪರಸರಕ್ಕಾಗಿ ಸುಮಾರು 20 ಅಶೋಕ ವೃಕ್ಷಗಳನ್ನು ಸಾಲಾಗಿ ನೆಟ್ಟು ಬೆಳೆಸಲಾಗಿತ್ತು. ಈ ಮರಗಳಡಿ ಸಾರ್ವಜನಿಕರು, ಆಟೊ ಚಾಲಕರು ನಿಂತು ದಣಿವಾರಿಸಿಕೊಳ್ಳುತ್ತಿದ್ದರು. ಪಟ್ಟಣಕ್ಕೂ ಹಸಿರಿನ ಕಳೆ ತುಂಬಿತ್ತು. ಇದೀಗ ಗ್ರಾಮ ಪಂಚಾಯಿತಿ ಸದಸ್ಯರೇ ಇವುಗಳನ್ನು ಕಡಿದು  ಹಾಕಿಸಿ ನೆರಳು ಹಾಗೂ ಹಸಿರು ಪರಿಸರವನ್ನು ಹಾಳುಮಾಡಿದ್ದಾರೆ.

ಗಿಡ ಕಡಿದ ವಿಷಯ ತಿಳಿದ ಗ್ರಾಮ ಪಂಚಾಯಿತಿ ಸದಸ್ಯರಾದ ರಾಮಕೃಷ್ಣ ಹಾಗೂ ಸುರೇಶ್ ರೈ ಸ್ಥಳಕ್ಕೆ ಬಂದು ಆಕ್ಷೇಪ ವ್ಯಕ್ತಪಡಿಸಿದರು. ಪಟ್ಟಣದಲ್ಲಿ ಇರುವ ಮರಗಳನ್ನೂ ಕಡಿಯುವದರಿಂದ ಪರಿಸರ ಹಾಳಾಗಿ ವಾತಾವರಣ ಕೆಡಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !