ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಜನೆ ಗಾಯಕ ಅರವಿಂದ ಮುದುಲಿ ನಿಧನ

Last Updated 1 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಭುವನೇಶ್ವರ: ಒಡಿಶಾದ ಜನಪ್ರಿಯ ಭಜನೆ ಗಾಯಕ ಅರವಿಂದ ಮುದುಲಿ (56) ಅವರು ಗುರುವಾರ ಮುಂಜಾನೆ ಹೃದಯ ಸ್ತಂಭನದಿಂದಾಗಿ ಸಾವನ್ನಪ್ಪಿದ್ದಾರೆ.

‘ಮುದುಲಿ ಅವರಿಗೆ ಎದೆ ನೋವು ಕಾಣಿಸಿಕೊಂಡಾಗ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ ಆಸ್ಪತ್ರೆಗೆ ದಾಖಲಿಸಿಕೊಳ್ಳುತ್ತಿದ್ದಂತೆಯೇ ಅವರು ಕೊನೆಯುಸಿರೆಳೆದರು’ ಎಂದು ಕುಟುಂಬದ ಮೂಲಗಳು ತಿಳಿಸಿವೆ. 1961ರ ಸೆಪ್ಟೆಂಬರ್ 1ರಂದು ಖೋರ್ಧಾ ಜಿಲ್ಲೆಯ ಖನಾತಿ ಗ್ರಾಮದಲ್ಲಿ ಅವರು ಜನಿಸಿದ್ದರು.

ಸಂಗೀತ ನಿರ್ದೇಶಕ ಹಾಗೂ ಸಾಹಿತಿಯೂ ಆಗಿದ್ದ ಮುದುಲಿ ಅವರು ತಮ್ಮ ಕಂಠದಿಂದಾಗಿ ಖ್ಯಾತರಾದರು. ಜಗನ್ನಾಥ ಸ್ವಾಮಿಯ ಆರಾಧಕರಾಗಿದ್ದ ಅವರು ತಮ್ಮನ್ನು ಭಕ್ತಿ ಗೀತೆಗಳಿಗೆ ಮಾತ್ರ ಸೀಮಿತಗೊಳಿಸಿಕೊಂಡಿದ್ದರು. ಅವರು 3,000ಕ್ಕೂ ಅಧಿಕ ಹಾಡುಗಳಿಗೆ ದನಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT