ಕೊಡಗು: ಸಾಮಗ್ರಿ ಹಂಚಿಕೆಯಲ್ಲಿ ಕೊಡವ ಸಮಾಜದ ತಾರತಮ್ಯ ಆರೋಪ

7

ಕೊಡಗು: ಸಾಮಗ್ರಿ ಹಂಚಿಕೆಯಲ್ಲಿ ಕೊಡವ ಸಮಾಜದ ತಾರತಮ್ಯ ಆರೋಪ

Published:
Updated:

ಮಡಿಕೇರಿ: ‘ಚೇರಂಬಾಣೆ ಪರಿಹಾರ ಕೇಂದ್ರದಲ್ಲಿ ನಿರಾಶ್ರಿತರಿಗೆ ಬಂದ ಪರಿಹಾರ ಸಾಮಗ್ರಿಗಳನ್ನು ಇಲ್ಲಿನ ಕೊಡವ ಸಮಾಜ ಹಾಗೂ ಕೊಡವ ಕ್ರಿಯೇಶನ್ ಕ್ಲಬ್‌ ಆಡಳಿತ ಮಂಡಳಿ ಸದಸ್ಯರು ಸ್ವಇಚ್ಛೆಯಂತೆ ಬಳಕೆ ಮಾಡಿ ಜಾತಿ ರಾಜಕೀಯ ನಡೆಸುತ್ತಿದ್ದಾರೆ’ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಬಬ್ಬಿರ ಸರಸ್ವತಿ ದೂರಿದರು.

‘ಮಹಾಮಳೆಗೆ ಮೊಣ್ಣಂಗೇರಿ, ಜೋಡುಪಾಲ, ಮದೆನಾಡು, ಕಾಟಕೇರಿ ಭಾಗದಲ್ಲಿ ಮನೆಗಳನ್ನು ಕಳೆದುಕೊಂಡ 600 ನಿರಾಶ್ರಿತರಿಗೆ ಚೇರಂಬಾಣೆ ಜೂನಿಯರ್ ಕಾಲೇಜಿನಲ್ಲಿ ಪರಿಹಾರ ಕೇಂದ್ರ ಸ್ಥಾಪಿಸಲಾಗಿತ್ತು. ಪರಿಹಾರ ಸಾಮಗ್ರಿಗಳನ್ನು ಆಡಳಿತ ಮಂಡಳಿಯವರು ತಮಗೆ ಬೇಕಾದವರಿಗೆ ನೀಡುತ್ತಿದ್ದರು. ಇದನ್ನು ಪ್ರಶ್ನಿಸಿದ ನನಗೆ ಕೊಡವ ವಿರೋಧಿ ಪಟ್ಟ ಕಟ್ಟುತ್ತಿದ್ದಾರೆ. ಜತೆಗೆ, ಸುಳ್ಳು ಆರೋಪಗಳನ್ನು ಬಹಿರಂಗವಾಗಿ ನೀಡಿ ಮಾನಸಿಕವಾಗಿ ಕುಗ್ಗಿಸುವ ಪ್ರಯತ್ನ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

ಪರಿಹಾರ ಕೇಂದ್ರದಲ್ಲಿ 32 ಗ್ರಾಮಸ್ಥರು ಸೇರಿ 9 ಜನರ ಸಮಿತಿಯನ್ನು ರಚಿಸಲಾಗಿತ್ತು. ಆದರೆ, ಎಲ್ಲ ನಿರಾಶ್ರಿತರಿಗೆ ಆಹಾರ ಪದಾರ್ಥ ಹಂಚಿಕೆ ಮಾಡಲಿಲ್ಲ ಎಂದು ಹೇಳಿದರು.

ನಿರಾಶ್ರಿತ ಸತೀಶ್‌ ಮಾತನಾಡಿ, ‘ಪರಿಹಾರ ಕೇಂದ್ರಕ್ಕೆ ಬರುತ್ತಿದ್ದ ಆಹಾರ ಸಾಮಗ್ರಿ ದುರುಪಯೋಗ ಆಗಿದೆ. ಇದರಿಂದ ನಿಜವಾದ ನಿರಾಶ್ರಿತರಿಗೆ ಎಲ್ಲ ಸೌಲಭ್ಯಗಳು ಸಿಗುತ್ತಿರಲಿಲ್ಲ. ಹೆಚ್ಚು ಬೆಲೆ ಬಾಳುವ ವಸ್ತುಗಳನ್ನು ಬೇರೆಡೆ ಸಾಗಿಸುತ್ತಿದ್ದ ಸಾಕಷ್ಟು ಪ್ರಕರಣಗಳು ಕಂಡು ಬರುತ್ತಿತ್ತು’ ಎಂದು ಹೇಳಿದರು.

ನಿರಾಶ್ರಿತರಾದ ಮದೆ ಗ್ರಾಮ ಸೀನಪ್ಪ ಮಾತನಾಡಿ, ‘10 ದಿನಗಳವರೆಗೆ ಚಪ್ಪಲಿ ಕೂಡ ಬಂದಿರಲಿಲ್ಲ. ಕೇಂದ್ರದಲ್ಲಿ 600 ಮಂದಿಗೆ ಬೇಕಾಗಿರುವ ಸಾಮಗ್ರಿಗಳು ಪರಿಹಾರ ಕೇಂದ್ರಕ್ಕೆ ನಿತ್ಯ ಬರುತ್ತಿದ್ದರೂ ಕೈಗೆ ಮಾತ್ರ ಸಿಗುತ್ತಿರಲಿಲ್ಲ. ಇದರ ಹಿಂದೆ ಸ್ಥಳೀಯ ಕೆಲವು ಮುಖಂಡರು ಎನಿಸಿಕೊಳ್ಳುವವರ ಕೈವಾಡವಿದೆ’ ಎಂದು ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ದಿಲೀಪ್‌ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !