ಗಾಡ್ಗೀಲ್ ವರದಿ ಅನುಷ್ಠಾನಗೊಳಿಸಿ, ಕೊಡಗಿನಲ್ಲಿ ಪ್ರವಾಸೋದ್ಯಮ ನಿಷೇಧಕ್ಕೆ ಆಗ್ರಹ

7

ಗಾಡ್ಗೀಲ್ ವರದಿ ಅನುಷ್ಠಾನಗೊಳಿಸಿ, ಕೊಡಗಿನಲ್ಲಿ ಪ್ರವಾಸೋದ್ಯಮ ನಿಷೇಧಕ್ಕೆ ಆಗ್ರಹ

Published:
Updated:

ಮಡಿಕೇರಿ: ಮಾಧವ್ ಗಾಡ್ಗೀಲ್ ವರದಿಯನ್ನು ಅನುಷ್ಠಾನಗೊಳಿಸಬೇಕು ಎಂದು ವಾಲ್ನೂರು ಬಸವಣ್ಣ ದೇವರ ಬನ ಸಂರಕ್ಷಣಾ ಟ್ರಸ್ಟ್ ಕಾರ್ಯದರ್ಶಿ ಬಿ.ಸಿ. ನಂಜಪ್ಪ ಒತ್ತಾಯಿಸಿದರು.

ಕೊಡಗು ಭೂಕುಸಿತಕ್ಕೆ ತುತ್ತಾಗಿದೆ. ಕೊಡಗಿನ ಮೂಲ ಸ್ವರೂಪವನ್ನು ರಕ್ಷಿಸಬೇಕಿರುವುದರಿಂದ ಅಲ್ಪಪ್ರಮಾಣದ ಮಾರ್ಪಾಡಿನೊಂದಿಗೆ ಮಾಧವ್ ಗಾಡ್ಗೀಲ್ ವರದಿಯನ್ನು ಜಾರಿ ಮಾಡಬೇಕು ಎಂದು ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಒತ್ತಾಯಿಸಿದರು.

‘ಜಿಲ್ಲೆಯು ಸೂತಕದ ವಾತಾವರಣದಲ್ಲಿದೆ. ಭೂಮಾಫಿಯಾ, ಗಣಿಗಾರಿಕೆಯ ಪ್ರತಿಕೂಲ ಪರಿಣಾಮವೇ ಇಂದಿನ ದುಸ್ಥಿತಿಗೆ ಕಾರಣ. ಕೊಡಗಿನವರು ಪ್ರವಾಸೋದ್ಯಮದಿಂದ ಜೀವನ ನಡೆಸುತ್ತಿಲ್ಲ. ಆದ್ದರಿಂದ, ಒಂದು ವರ್ಷದವರೆಗೆ ಪ್ರವಾಸೋದ್ಯಮ ನಿಷೇಧಿಸಬೇಕು’ ಎಂದು ಆಗ್ರಹಿಸಿದರು.

‘ಪ್ರಕೃತಿ ವಿಕೋಪಗಳು ಮರುಕಳಿಸುವ ಸಾಧ್ಯತೆಯಿರುವ ಪ್ರದೇಶಗಳನ್ನು ಸರ್ಕಾರ ಮೀಸಲು ಅರಣ್ಯಕ್ಕೆ ಹಸ್ತಾಂತರಿಸಬೇಕು. ನಿವಾಸಿಗಳಿಗೆ ಆನೆಕಾಡು, ದುಬಾರೆ, ದೇವಮಚ್ಚಿ, ಹುದುಗೂರು ಮೀಸಲು ಅರಣ್ಯದಲ್ಲಿ ಲಭ್ಯವಿರುವ ಪೈಸಾರಿ ಜಾಗಗಳನ್ನು ಗುರುತಿಸಿ ಪೂರ್ಣ ಪ್ರಮಾಣದ ಪುನರ್ವಸತಿ ಕಲ್ಪಿಸಬೇಕು’ ಎಂದು ಹೇಳಿದರು.

ಜಿಲ್ಲೆಯ ರಸ್ತೆ ಅಭಿವೃದ್ಧಿ ಹೊಂದುವವರೆಗೆ ಮರದ ದಿಮ್ಮಿ, ಮರಳು ಸಾಗಾಟಕ್ಕೆ ಕಡಿವಾಣ ಹಾಕಬೇಕು. ಜಿಲ್ಲೆಯ ರಸ್ತೆಗಳು ಮತ್ತಷ್ಟು ಹಾಳಾಗದ ರೀತಿಯಲ್ಲಿ 6 ತಿಂಗಳ ಕಾಲ ಟಿಂಬರ್ ಸಾಗಾಟ ನಿಷೇಧಿಸಬೇಕು ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟ್‌ಅಧ್ಯಕ್ಷ ಚೇಂದಂಡ ಜಪ್ರಿ, ಖಜಾಂಚಿ ಸೋಮೆಯಂಡ ಡಿ. ಉದಯ, ಟ್ರಸ್ಟಿ ಎ.ವಿ. ಕಾರ್ಯಪ್ಪ ಉಪಸ್ಥಿತರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !