ಕೊಡಗು, ದಕ್ಷಿಣಕನ್ನಡದಲ್ಲಿ ಮುಂದುವರಿದ ಮಳೆ, ಗಾಳಿ

7

ಕೊಡಗು, ದಕ್ಷಿಣಕನ್ನಡದಲ್ಲಿ ಮುಂದುವರಿದ ಮಳೆ, ಗಾಳಿ

Published:
Updated:

ಮಡಿಕೇರಿ: ಕೊಡಗು ಜಿಲ್ಲೆಯಾದ್ಯಂತ ಮಳೆ ಹಾಗೂ ಗಾಳಿಯ ಆರ್ಭಟ ಗುರುವಾರವೂ ಮುಂದುವರಿದಿದೆ. ಜಿಲ್ಲೆಯ ಪ್ರಮುಖ ನದಿಗಳೂ ಸೇರಿದಂತೆ ಹಳ್ಳ, ಕೊಳ್ಳಗಳು ಉಕ್ಕಿ ಹರಿಯುತ್ತಿವೆ. 

ಮಡಿಕೇರಿ ಹಾಗೂ ಮಾದಾಪುರ ವ್ಯಾಪ್ತಿಯಲ್ಲಿ ಬುಧವಾರ ರಾತ್ರಿಯಿಡೀ ಸುರಿದ ಮಳೆಗೆ ಹಾರಂಗಿ ಜಲಾಶಯದ ಒಳಹರಿವು ಏರಿಕೆಯಾಗಿದೆ.

ಗುರುವಾರ ಜಿಲ್ಲೆಯ ಎಲ್ಲ ಶಾಲಾ, ಕಾಲೇಜುಗಳಿಗೆ ರಜೆ ನೀಡಲಾಗಿದೆ‌. ಈ ವರ್ಷದ ಮಳೆಗಾಲದಲ್ಲಿ ಇದು 13ನೇ ರಜೆಯಾಗಿದೆ.

ದಕ್ಷಿಣಕನ್ನಡದಲ್ಲೂ ವರ್ಷಧಾರೆ

ಘಟ್ಟ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ  ಸತತ ಎರಡನೇ ದಿನವಾದ ಗುರುವಾರ ಸಹಿತ ಹೊಸಮಠ ಸೇತುವೆ ಮುಳುಗಡೆಯಾಗಿಯೇ ಇದೆ.

ಶಿಶಿಲದಲ್ಲಿ ಶಿಶಿಲೇಶ್ವರ ದೇವಸ್ಥಾನ ಪ್ರವಾಹದ ನೀರಿನಿಂದ ಆವೃತವಾಗಿದೆ.

ಶಿರಾಡಿಘಾಟಿಯಲ್ಲಿ ಇದೀಗ ವಾಹನಗಳು ಸಂಚರಿಸುತ್ತಿದ್ದು, ಮಂಗಳೂರು-ಬೆಂಗಳೂರು ಹೆದ್ದಾರಿಯ ಉದನೆಯಲ್ಲಿ ಪ್ರವಾಹ ಎದುರಾಗಿರುವುದರಿಂದ ವಾಹನ ಸಂಚಾರ ಸ್ಥಗಿತಗೊಂಡಿದೆ. 


ಮಂಗಳೂರು-ಬೆಂಗಳೂರು ಹೆದ್ದಾರಿಯ ಉದನೆಯಲ್ಲಿ ಹೊಳೆ ನೀರು ಹೆದ್ದಾರಿಯನ್ನು ಆವರಿಸಿದ್ದು, ವಾಹನ ಸಂಚಾರ ಸ್ಥಗಿತಗೊಂಡಿದೆ.

***
ಹಾರಂಗಿ ಜಲಾಶಯದ ಇಂದಿನ ಮಟ್ಟ (ಕೊಡಗು ಜಿಲ್ಲೆ) 
ಗರಿಷ್ಠ ಮಟ್ಟ   – 2,859 ಅಡಿ
ಇಂದಿನ ಮಟ್ಟ  –  2,858.43 ಅಡಿ
ಒಳ ಹರಿವು  – 15,247 ಕ್ಯುಸೆಕ್
ಹೊರ ಹರಿವು – 13,100 ಕ್ಯುಸೆಕ್

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !