ಕೊಡಗಿನಲ್ಲಿ ಮಳೆ ಇಳಿಮುಖ

7

ಕೊಡಗಿನಲ್ಲಿ ಮಳೆ ಇಳಿಮುಖ

Published:
Updated:

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮುಂಗಾರು ಮಳೆ ಸಂಪೂರ್ಣ ಇಳಿಮುಖವಾಗಿದ್ದು ಶನಿವಾರ ಬಿಸಿಲ ವಾತಾವರಣ ಕಂಡುಬಂತು. ತಿಂಗಳ ಬಳಿಕ ಇಂತಹ ವಾತಾವರಣ ಜಿಲ್ಲೆಯಲ್ಲಿ ಕಂಡುಬಂದಿದ್ದು, ಜನರು ಲಘುಬಗೆಯಿಂದ ಸಂಚರಿಸಿ ಬಿಸಿಲಿಗೆ ಮೈಯೊಡ್ಡಿದರು.

ಭಾಗಮಂಡಲ, ತಲಕಾವೇರಿ ವ್ಯಾಪ್ತಿಯಲ್ಲೂ ಮಳೆ ತಗ್ಗಿದೆ. ಹೀಗಾಗಿ, ಕಾವೇರಿ ನದಿಯಲ್ಲಿ ನೀರಿನ ಮಟ್ಟ ಇಳಿಕೆಯಾಗಿದೆ. ಶನಿವಾರ ಬೆಳಿಗ್ಗೆ 8.30ಕ್ಕೆ ಕೊನೆಯಾದಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಕೊಡಗು ಜಿಲ್ಲೆಯಲ್ಲಿ 7.59 ಮಿ.ಮೀ. ಮಳೆಯಾಗಿದೆ. ಜನವರಿಯಿಂದ ಇದುವರೆಗೆ 1,340.51 ಮಿ.ಮೀ ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಗೆ 695.57 ಮಿ.ಮೀ. ಮಳೆಯಾಗಿತ್ತು.

ಮಡಿಕೇರಿ ತಾಲ್ಲೂಕಿನಲ್ಲಿ 1.80 ಮಿ.ಮೀ., ವಿರಾಜಪೇಟೆ ತಾಲ್ಲೂಕಿನಲ್ಲಿ 4.03 ಮಿ.ಮೀ., ಸೋಮವಾರಪೇಟೆ ತಾಲ್ಲೂಕಿನಲ್ಲಿ 16.95 ಮಿ.ಮೀ. ಮಳೆಯಾಗಿದೆ.

ಹೋಬಳಿವಾರು ಸುರಿದ ಮಳೆ: ಮಡಿಕೇರಿ ಕಸಬಾ 1.60, ಸಂಪಾಜೆ 3, ಭಾಗಮಂಡಲ 2.60, ಹುದಿಕೇರಿ 7, ಪೊನ್ನಂಪೇಟೆ 2.20, ಅಮ್ಮತಿ 11.50, ಬಾಳೆಲೆ 3.45, ಸೋಮವಾರಪೇಟೆ ಕಸಬಾ 53.40, ಶನಿವಾರಸಂತೆ 9.40, ಶಾಂತಳ್ಳಿ 20.40, ಕೊಡ್ಲಿಪೇಟೆ 10, ಕುಶಾಲನಗರ 4.20, ಸುಂಟಿಕೊಪ್ಪ 4.30 ಮಿ.ಮೀ. ಮಳೆಯಾಗಿದೆ.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !