ಕುಶಾಲನಗರ: ಸಮೀಪದ ರಂಗಸಮುದ್ರ ಗ್ರಾಮದ ಜೋಡಿ ಬಸವೇಶ್ವರ ದೇವರ ವಾರ್ಷಿಕ ಪೂಜಾ ಮಹೋತ್ಸವ ಮಂಗಳವಾರ ಶ್ರದ್ಧಾ ಭಕ್ತಿಯಿಂದ ನೆರವೇರಿತು.

ಸೋಮವಾರ ಆರಂಭವಾದ ದೇವರ ಧಾರ್ಮಿಕ ವಿಧಿಗಳು ಮಂಗಳವಾರ ಸಂಜೆಯವರೆಗೂ ನಿರಂತರವಾಗಿ ನಡೆದವು. ಸಂಜೆ ಗ್ರಾಮದ ಕಲ್ಲೇಗೌಡರ ಜಾನಕಿ ಮನೆಯಿಂದ ದೇವರ ಕಳಸವನ್ನು ಮಂಗಳವಾದ್ಯದೊಂದಿಗೆ ಮೆರವಣಿಗೆಯಲ್ಲಿ ತರಲಾಯಿತು. ರಾತ್ರಿ 8ಕ್ಕೆ ಗ್ರಾಮದ ಜೆ.ಜಿ. ಚಂದ್ರಶೇಖರ್ ಅವರ ಮನೆಯಿಂದ ಭಂಡಾರವನ್ನು ದೇವಾಲಯಕ್ಕೆ ತಂದು ಪೂಜಿಸಲಾಯಿತು. ಸೋಮವಾರ ರಾತ್ರಿ ಗ್ರಾಮದ ಕುಂಭನ ಬೆಳ್ಯಪ್ಪ ಕುಟುಂಬ ಸ್ಥರಿಂದ ಅನ್ನದಾನ ನಡೆಯಿತು. ರಾತ್ರಿ 9.30ಕ್ಕೆ ದೇವರ ಗಂಗಾಸ್ನಾನಕ್ಕೆ ತೆರಳಲು ದೇವರ ಅಪ್ಪಣೆ ಪಡೆಯಲಾಯಿತು.

ಮಂಗಳವಾರ ಮುಂಜಾನೆಯಿಂದ ದೇವಾಲಯದ ಆವರಣದಲ್ಲಿ ಕೆಂಡೋತ್ಸವ ಪೂಜೆ ಆರಂಭವಾಯಿತು. ಬೆಳಿಗ್ಗೆ 5ಕ್ಕೆ ದೇವರಿಗೆ ಅಭಿಷೇಕ ಪೂಜೆ. 9ಕ್ಕೆ ವಾದ್ಯ ಮೇಳ, ಅಲಂಕೃತ ದೇವರ ಪಲ್ಲಕ್ಕಿ ಉತ್ಸವದೊಂದಿಗೆ ಗ್ರಾಮದ ಕಾಫಿ ಬೆಳೆಗಾರ ಮುರುಳಿ ಮಾದಯ್ಯ ಅವರ ತೋಟದ ವ್ಯಾಪ್ತಿಯಲ್ಲಿ ಚಿಕ್ಲಿಹೊಳೆ ಹಾಗೂ ಕಾವೇರಿ ನದಿಯ ಸಂಗಮದಲ್ಲಿ ಗಂಗಾಸ್ನಾನ ಹಾಗೂ ಗಂಗಾಪೂಜೆ ನೆರವೇರಿಸಲಾಯಿತು.

ಬಳಿಕ ದೇವರ ಪಲ್ಲಕ್ಕಿ ಮೆರವಣಿಗೆ ಕಾವೇರಿ ನದಿಯಿಂದ ಆರಂಭಗೊಂಡು ದೇವಾಲಯದವರೆಗೂ ಸಾಗಿ ಬಂತು. ಈ ಸಂದರ್ಭ ರಂಗಸಮುದ್ರ, ವಿರೂಪಾಕ್ಷಪುರ, ಕಬ್ಬಿನಗದ್ದೆ ವ್ಯಾಪ್ತಿಯ ಆದಿವಾಸಿಗಳು ಸೇರಿದಂತೆ ಸಮಸ್ತ ಭಕ್ತಜನರು ಪಾಲ್ಗೊಂಡರು.ಈ ಬಾರಿ ಮಳೆ ಬೆಳೆ ಉತ್ತಮ ಗೊಂಡು ರೈತರ ಬೆಳೆಗಾರರ ಬದುಕು ಹಸನು ಮಾಡು ಎಂದು ದೇವಾಲಯದ ಪದಾಧಿಕಾರಿಗಳು ಪ್ರಾರ್ಥಿಸಿದರು.

ಅರಮೇರಿ ಕಳಂಚೇರಿ ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರ ಪಾದಪೂಜೆ ದೇವಾಲಯದ ಆವರಣದಲ್ಲಿ ನೆರವೇರಿಸಲಾಯಿತು. ಬಳಿಕ ಭಕ್ತರಿಗೆ ಅನ್ನದಾನ ನಡೆಯಿತು. ದೇವಾಲಯ ಆಡಳಿತ ಸಮಿತಿ ಅಧ್ಯಕ್ಷ ಎ.ಜಿ.ಚಿಣ್ಣಪ್ಪ, ಗೌರವಾಧ್ಯಕ್ಷ ಜೆ.ಜಿ. ಚಂದ್ರಶೇಖರ್, ಕಾರ್ಯದರ್ಶಿ ಕೆ.ಟಿ. ಧನಂಜಯ, ನಿರ್ದೇಶಕರಾದ ವಿ.ಎಚ್.ಸುಭಾಷ್, ಎನ್.ಪಿ.ನವೀನ್, ಕೆ.ಎಸ್. ಚಂದ್ರಶೇಖರ್, ಜೆ.ಕೆ. ಮುತ್ತುರಾಜ್, ಎನ್.ಪಿ. ಕುಶಾಲಪ್ಪ, ಎನ್.ಡಿ.ಪ್ರಕಾಶ್, ಪಿ.ಎಸ್.ಬಸಪ್ಪ, ಪಿ.ಬಿ.ಅಶೋಕ್, ಪಿ.ಎಸ್.ಮೋಹನ್ ಹಾಗೂ ಅರ್ಚಕ ಶಿವಕುಮಾರ್ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260408-51-2109154226

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.