ಶುಕ್ರವಾರ, ನವೆಂಬರ್ 22, 2019
22 °C
ಜೈವಿಕ ಉದ್ಯಾನ ಆಯೋಜಿಸಿದ್ದ ಸ್ಪರ್ಧೆ

ಪಿಲಿಕುಳ | ವನ್ಯಜೀವಿ ಛಾಯಾಚಿತ್ರ ಸ್ಪರ್ಧೆ: ಮಡಿಕೇರಿ ಪ್ರಥಮ, ಮೈಸೂರು ದ್ವಿತೀಯ

Published:
Updated:
Prajavani

ಬಜ್ಪೆ : ಪಿಲಿಕುಳ ಜೈವಿಕ ಉದ್ಯಾನ ಮತ್ತು ಜೀವವೈವಿಧ್ಯದ ಪಾಲುದಾರ ಸಂಸ್ಥೆ ಎಂಆರ್‌ಪಿಎಲ್ ಆಯೋಜಿಸಿದ್ದ ‘ವನ್ಯಜೀವಿ ಸಪ್ತಾಹ-2019’ ಹಾಗೂ ವನ್ಯಜೀವಿ ಛಾಯಾಚಿತ್ರ ಸ್ಪರ್ಧೆಯಲ್ಲಿ  ಮಡಿಕೇರಿಯ ಛಾಯಾಗ್ರಾಹಕ ವಿನೋದ್ ಪ್ರಥಮ ಬಹುಮಾನ ಗಳಿಸಿದ್ದಾರೆ.

ವಿನೋದ್  ಸೆರೆಹಿಡಿದ ‘ಮರವೊಂದರಲ್ಲಿ ನೇತಾಡುತ್ತಿರುವ ಗೂಡಿಗೆ ಗೀಜಗ ಹಕ್ಕಿಯೊಂದು ಸೇರಿಕೊಳ್ಳಲು ಪ್ರಯತ್ನಿಸುತ್ತಿರುವ ದೃಶ್ಯ ಪ್ರಥಮ ಸ್ಥಾನ ಗಳಿಸಿದೆ. 

ಪಿಲಿಕುಳ ನಿಸರ್ಗಧಾಮದ ಪುಟ್ಟ ಕಾಡಿನೊಳಗೆ ‘ಒಂದು ಹುಲಿ ಮತ್ತೊಂದು ಹುಲಿಯ ಕಿವಿಹಿಂಡಿ ಎಳೆಯುತ್ತಿರುವ ಚಿನ್ನಾಟದ ದೃಶ್ಯ ಸೆರೆ ಹಿಡಿದ ಮೈಸೂರಿನ ಕರಣ್ ಸತೀಶ್ ಅವರಿಗೆ ದ್ವಿತೀಯ ಸ್ಥಾನ ಹಾಗೂ ‘ಆಹಾರಕ್ಕೆ ದೃಷ್ಟಿನೆಟ್ಟು ರೆಕ್ಕೆ ಬಿಚ್ಚಿ ಹಾರಾಡುತ್ತಿರುವ ಗಿಳಿ’ಯ ಚಿತ್ರ ಸೆರೆಹಿಡಿದ ತುಮಕೂರಿನ ವರದನಾಯಕ ಟಿ. ಪಿ. ತೃತೀಯ ಬಹುಮಾನ ಪಡೆದಿದ್ದಾರೆ.

ಈ ಛಾಯಾಚಿತ್ರಗ್ರಾಹಕರು ಸೆರೆಹಿಡಿದ ಕೆಲವು ಅದ್ಭುತ ಹಾಗೂ ಹುಬ್ಬೇರಿಸುವ ದೃಶ್ಯಗಳು ಈಗ ಪಿಲಿಕುಳ ಉದ್ಯಾನದಲ್ಲಿ ಅನಾವರಣಗೊಳಿಸಲಾಗಿದೆ.
 

ಪ್ರತಿಕ್ರಿಯಿಸಿ (+)