ಮಡಿಕೇರಿಯಲ್ಲಿರುವ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ಸೇರಿದ ಬೋಧನಾ ಆಸ್ಪತ್ರೆ (ಜಿಲ್ಲಾಸ್ಪತ್ರೆ)ಯಲ್ಲಿರುವ ಕಿವಿ ಮೂಗು ಮತ್ತು ಗಂಟಲು ವಿಭಾಗದಲ್ಲಿರುವ ಶ್ರವಣಶಕ್ತಿ ಪರೀಕ್ಷೆ ಮಾಡುವ ಉಪಕರಣಗಳು
ಡಾ.ಶ್ವೇತಾ ಇಎನ್‌ಟಿ ವಿಭಾಗದ ಮುಖ್ಯಸ್ಥೆ

ಎಲ್ಲರೂ ಹೆಚ್ಚು ಶಬ್ದದಿಂದ ದೂರ ಇರಿ. ತಮ್ಮ ಶ್ರವಣಶಕ್ತಿಯನ್ನು ಕಾಪಾಡಿಕೊಳ್ಳಿರಿ
ಡಾ.ಶ್ವೇತಾ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಇಎನ್‌ಟಿ ವಿಭಾಗದ ಮುಖ್ಯಸ್ಥೆಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಎಂ.ಸತೀಶ್‌ಕುಮಾರ್

ಕೊಡಗಿನ 2 ತಾಲ್ಲೂಕು ಆಸ್ಪತ್ರೆಗಳಲ್ಲೂ ಜಿಲ್ಲಾಸ್ಪತ್ರೆಯಲ್ಲೂ ಕಿವಿ ಮೂಗು ಗಂಟಲು ವೈದ್ಯರು ಇದ್ದಾರೆ. ತೊಂದರೆ ಇದ್ದವರು ತಪಾಸಣೆಗೆ ಒಳಗಾಗಬಹುದು
ಡಾ.ಕೆ.ಎಂ.ಸತೀಶ್‌ಕುಮಾರ್ ಜಿಲ್ಲಾ ಆರೋಗ್ಯಾಧಿಕಾರಿ
ಜಿಲ್ಲಾಸ್ಪತ್ರೆಯಲ್ಲಿ ತಜ್ಞ ವೈದ್ಯರಿದ್ದಾರೆ. ಕಿವಿಯಲ್ಲಿ ಸೋಂಕು ತೊಂದರೆ ಉಂಟಾದಾಗ ತಕ್ಷಣವೇ ಆಸ್ಪತ್ರೆಗೆ ಬರಬೇಕು. ಕಾಲಕಾಲಕ್ಕೆ ತಪಾಸಣೆ ಮಾಡಿಸಿಕೊಳ್ಳಬೇಕು
ಡಾ.ಎ.ಜೆ.ಲೋಕೇಶ್ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಡೀನ್ ಮತ್ತು ನಿರ್ದೇಶಕಡಾ.ಸನತ್‌ಕುಮಾರ್ ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ

ಕೊಡಗು ಜಿಲ್ಲೆಯ ಜಿಲ್ಲಾಸ್ಪತ್ರೆ ತಾಲ್ಲೂಕು ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಲಭ್ಯವಿದೆ. ನವಜಾತ ಶಿಶುಗಳಿಗೂ ಶ್ರವಣಶಕ್ತಿ ಮಾಡಲಾಗುತ್ತಿದೆ
ಡಾ.ಸನತ್‌ಕುಮಾರ್ ಶ್ರವಣಶಕ್ತಿ ದೋಷ ಜಿಲ್ಲಾ ಕಾರ್ಯಕ್ರಮ ಅಧಿಕಾರಿನವಜಾತ ಶಿಶುಗಳಿಗೆ ಶ್ರವಣಶಕ್ತಿ ಪರೀಕ್ಷೆ
ಮಕ್ಕಳಲ್ಲಿ ಶ್ರವಣ ಶಕ್ತಿ ದೋಷವನ್ನು ಬೇಗ ಪತ್ತೆ ಮಾಡಿದರೆ ಚಿಕಿತ್ಸೆ ಸುಲಭ. ಹಾಗಾಗಿ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ಸೇರಿದ ಬೋಧನಾ ಆಸ್ಪತ್ರೆಯಲ್ಲಿ ಜನಿಸಿದ ಎಲ್ಲ ನವಜಾತ ಶಿಶುಗಳಿಗೂ ಶ್ರವಣ ಶಕ್ತಿ ಪರೀಕ್ಷೆ ಮಾಡಲಾಗುತ್ತಿದೆ.