ಕೊಡಗು: ರಸ್ತೆ ದಾಟಲು ಪರದಾಡಿದ ವಿದ್ಯಾರ್ಥಿಗಳು

7

ಕೊಡಗು: ರಸ್ತೆ ದಾಟಲು ಪರದಾಡಿದ ವಿದ್ಯಾರ್ಥಿಗಳು

Published:
Updated:
Deccan Herald

ಸುಂಟಿಕೊಪ್ಪ: ಮಿತಿಮೀರಿದ ವಾಹನ ದಟ್ಟಣೆಯಿಂದಾಗಿ ವಿದ್ಯಾರ್ಥಿಗಳನ್ನು ರಸ್ತೆ ದಾಟಿಸುತ್ತಿದ್ದ ಗೃಹರಕ್ಷಕ ದಳದ ಸಿಬ್ಬಂದಿ ಸೋಮವಾರ ಕರ್ತವ್ಯದಲ್ಲಿ ಇಲ್ಲದ್ದರಿಂದ ಮಕ್ಕಳು ಪರದಾಡುವಂತಹ ಪರಿಸ್ಥಿತಿ ಎದುರಾಯಿತು.

ಪ್ರತಿನಿತ್ಯ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಸಂಚಾರ ಮಿತಿಮೀರಿದ್ದು, ಇಲ್ಲಿನ ಪೊಲೀಸ್ ಠಾಣೆಯಲ್ಲಿ ಸಿಬ್ಬಂದಿ ಕೊರತೆಯ ಹಿನ್ನಲೆ ಗೃಹ ರಕ್ಷಕ ದಳದವರನ್ನು ನಿಯೋಜಿಸಲಾಗಿತ್ತು. ಆದರೆ ಸೋಮವಾರ ಮುಂಜಾನೆಯಿಂದಲೇ ಗೃಹರಕ್ಷಕ ಸಿಬ್ಬಂದಿಯಾಗಲೀ ಅಥವಾ ಪೊಲೀಸರಾಗಲಿ ಪಟ್ಟಣದ ಹೃದಯ ಭಾಗದಲ್ಲಿ ಕರ್ತವ್ಯದಲ್ಲಿ ಇಲ್ಲದ್ದರಿಂದ ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಸಮಸ್ಯೆ ಉಂಟಾಯಿತು.

ಸೋಮವಾರ ಸಂಜೆ ಶಾಲೆ ಬಿಟ್ಟ ನಂತರ ಮಕ್ಕಳು ಮನೆಗೆ ತೆರಳಲು ರಸ್ತೆ ಬದಿಗೆ ನಿಂತಿದ್ದರು. ಆದರೆ, ನಿರಂತರವಾಗಿ ವಾಹನಗಳ ಸಂಚಾರದಿಂದಾಗಿ ಯಾವ ಕಡೆ ರಸ್ತೆ ದಾಟಬೇಕು ಎಂದು ನೋಡುತ್ತಿದ್ದ ದೃಶ್ಯ ಕಂಡು ಬಂತು.

ಪೊಲೀಸ್‌ ಅಧಿಕಾರಿಗಳು ಇತ್ತ ಗಮನಹರಿಸಿ ಶಾಲಾ ಬಿಡುವ ಸಮಯದಲ್ಲಿ ಮಕ್ಕಳಿಗೆ ಆಗುವ ತೊಂದರೆ ಆಗುವುದನ್ನು ತಪ್ಪಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !