ವಿದ್ಯಾರ್ಥಿಗಳ ಸ್ವಾಗತಿಸಿದ ಶಿಕ್ಷಕರು, ಮೊದಲ ದಿನ ಹಾಜರಾತಿ ಕಡಿಮೆ

ಮಡಿಕೇರಿ: ಕೋವಿಡ್‌ನಿಂದ ಕೊಡಗು ಜಿಲ್ಲೆಯಲ್ಲೂ ಕಳೆದ ಮಾರ್ಚ್‌ನಿಂದ ಮುಚ್ಚಲ್ಪಟ್ಟಿದ್ದ ಶಾಲೆ– ಕಾಲೇಜುಗಳು ಶುಕ್ರವಾರದಿಂದ ಆರಂಭಗೊಂಡವು.
ಮೊದಲ ದಿನ ಜಿಲ್ಲೆಯ ಶಾಲೆ – ಕಾಲೇಜಿನಲ್ಲಿ ವಿದ್ಯಾರ್ಥಿಗಳ ಹಾಜರಾತಿ ಕಡಿಮೆಯಿತ್ತು. ಕೆಲವು ಶಾಲೆ, ಕಾಲೇಜಿನಲ್ಲಿ ವಿದ್ಯಾರ್ಥಿಗಳನ್ನು ಆತ್ಮೀಯವಾಗಿ ಶಿಕ್ಷಕರು ಹಾಗೂ ಉಪನ್ಯಾಸಕರು ಸ್ವಾಗತಿಸಿದ್ದು ಕಂಡುಬಂತು. ಕೆಲವು ಕಡೆ ಸಿಹಿ ತಿನಿಸಿ ನೀಡಿ ವಿದ್ಯಾರ್ಥಿಗಳನ್ನು ಸ್ವಾಗತಿಸಲಾಯಿತು. ಮೊದಲ ದಿನವಾದ ಕಾರಣಕ್ಕೆ ಶಿಕ್ಷಕರು ಬೆಳಿಗ್ಗೆ 8ಕ್ಕೆ ಶಾಲೆಗಳಿಗೆ ಆಗಮಿಸಿದ್ದರು.
ಉಷ್ಣಾಂಶ ತಪಾಸಣೆ: ಇನ್ನು ವಿದ್ಯಾರ್ಥಿಗಳು ಕಾಲೇಜು, ಶಾಲೆಯ ಆವರಣ ಪ್ರವೇಶಿಸುತ್ತಿದ್ದಂತೆಯೇ ಉಷ್ಣಾಂಶ ತಪಾಸಣೆ ಮಾಡಲಾಯಿತು. ಸ್ಯಾನಿಟೈಸರ್ ನೀಡಲಾಯಿತು. ಕೆಲವು ಶಾಲೆಗಳಲ್ಲಿ ನೀರು ಹಾಗೂ ಸೋಪು ಇಡಲಾಗಿತ್ತು.
‘ಆನ್‌ಲೈನ್‌ನಲ್ಲಿ ಪಾಠಗಳು ಅಷ್ಟಾಗಿ ಅರ್ಥವಾಗುತ್ತಿರಲಿಲ್ಲ. ತರಗತಿಗೆ ಖುದ್ದು ಹಾಜರಾಗಿ ಶಿಕ್ಷಕರ ಸಮ್ಮುಖದಲ್ಲಿ ಕಲಿಯುವುದು ಒಳ್ಳೆಯದು. ಮಾಸ್ಕ್ ಹಾಕಿ, ಅಂತರ ಕಾಪಾಡಿಕೊಂಡು ಮುನ್ನೆಚ್ಚರಿಕೆ ವಹಿಸುತ್ತೇವೆ’ ಎಂದು ವಿದ್ಯಾರ್ಥಿನಿ ಸೂಫಿಯಾ ಹೇಳಿದಳು.
‘ವಿದ್ಯಾರ್ಥಿಗಳು ಕಾಲೇಜಿಗೆ ಬರಬೇಕು ಎಂಬ ಕಡ್ಡಾಯ ನಿಯಮವಿಲ್ಲ. ಒಪ್ಪಿಗೆಯಿದ್ದವರು ಬರಬಹುದು. ಆದರೆ, ಪೋಷಕರ ಒಪ್ಪಿಗೆ ಕಡ್ಡಾಯ. ಎಲ್ಲ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ’ ಎಂದು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಿಜಯ ಅವರು ಹೇಳಿದರು.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.