ಮಡಿಕೇರಿ: ಇಲ್ಲಿನ ಐತಿಹಾಸಿಕ ಶಾಂತಿ ಚರ್ಚ್ನಲ್ಲಿ ಶತಮಾನೋತ್ತರ ಸುವರ್ಣ ಮಹೋತ್ಸವದ ಅಂಗವಾಗಿ ಶನಿವಾರ ವಿಶೇಷ ಆರಾಧನೆ ನಡೆಯಿತು. ಬಿಷಪ್ ರೆವರೆಂಡ್ ಹೇಮಚಂದ್ರಕುಮಾರ್ ಅವರು ಭಾಗಿಯಾಗಿ ಭಕ್ತರಿಗೆ ಆಶೀರ್ವಚನ ನೀಡಿದರು.

ಇದಕ್ಕೂ ಮುನ್ನ ಶಾಂತಿ ಚರ್ಚ್ನಿಂದ ಹೊರಟ ಮೆರವಣಿಗೆಯು ಜನರಲ್ ತಿಮ್ಮಯ್ಯ ವೃತ್ತದ ಮೂಲಕ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು. ಶಾಂತಿ ಸಂದೇಶ ಹೊತ್ತ ಈ ಮೆರವಣಿಗೆಯಲ್ಲಿ ಸುಮಾರು 500ಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು. ಮಲ್ಪೆಯಿಂದ ಬಂದಿದ್ದ ‘ಸೌಂಡ್ ಆಫ್ ಮ್ಯೂಸಿಕ್’ ತಂಡದ ‘ಬ್ರಾಸ್ ಬ್ಯಾಂಡ್’ ಮೆರವಣಿಗೆಗೆ ಮೆರುಗು ತುಂಬಿತು.

ಬಳಿಕ ಚರ್ಚ್ನಲ್ಲಿ ವಿಶೇಷ ಆರಾಧನೆ ನಡೆಯಿತು. ಬಿಷಪ್ ರೆವರೆಂಡ್ ಹೇಮಚಂದ್ರಕುಮಾರ್ ಮಾತನಾಡಿ, ‘ನೀವೇ ದೇವರ ಆಲಯ. ಎಲ್ಲರೂ ಶುದ್ಧತ್ವವನ್ನು ಕಾಪಾಡಿಕೊಳ್ಳಬೇಕು. ಶಾಂತಿ ಸೌಹಾರ್ದತೆಯಿಂದ ಸಮಾಜದಲ್ಲಿ ಬಾಳಬೇಕು’ ಎಂದು ಸಂದೇಶ ನೀಡಿದರು.

ಚರ್ಚ್ನಲ್ಲಿ ಹಿಂದೆ ತಂಗಿದ್ದ ಹರ್ಮನ್ ಮೋಗ್ಲಿಂಗ್ ಹಾಗೂ ಎಫ್.ಕಿಟ್ಟೆಲ್ರ ಕೊಡುಗೆಗಳನ್ನು ಇದೇ ವೇಳೆ ಅವರು ಸ್ಮರಿಸಿದರು.

ಸ್ಮರಣ ಸಂಚಿಕೆಯ ಕಾರ್ಯದರ್ಶಿ ಜೋಯ್ಸಿ ವಿನಯ ಅವರು ಶಾಂತಿ ಚರ್ಚ್ನ ಇತಿಹಾಸವನ್ನು ಸವಿಸ್ತಾರವಾಗಿ ವಿವರಿಸಿದರು. ಇಲ್ಲಿದ್ದ ಮಿಷನರಿಗಳ ಕೊಡುಗೆಯನ್ನು ಸ್ಮರಿಸಿದರು. ಚರ್ಚ್ ಸ್ಥಾಪನೆಯಾದಾಗಿನಿಂದ ನಡೆದು ಬಂದ ಹಾದಿಯ ಸಿಂಹಾವಲೋಕನ ಮಾಡಿದರು.

80 ವರ್ಷ ಪೂರೈಸಿದ ಚರ್ಚ್ನ ಹಿರಿಯ ಸದಸ್ಯರನ್ನು ಸನ್ಮಾನಿಲಾಯಿತು. ಪ್ರೀತು ರಿಚರ್ಡ್ ವಂದಿಸಿದರು. ಜೈಕುಮಾರ್ ಡೆಫ್ಟನ್ ನಿರೂಪಿಸಿದರು.

ಚರ್ಚ್ನಲ್ಲಿ ಸೇವೆ ಸಲ್ಲಿಸಿದ ಸಭಾಪಾಲಕರು ಹಾಗೂ ಮತ್ತು ಅವರ ಕುಟುಂಬದವರೊಂದಿಗೆ ಆಧ್ಯಾತ್ಮಿಕ ಗೀತೆಗಳ ಸಂಗೀತ ಸಂಜೆ ಕಾರ್ಯಕ್ರಮವೂ ನಡೆಯಿತು.

ಈ ಹಿಂದೆ ಇಲ್ಲಿ ಸೇವೆ ಸಲ್ಲಿಸಿದ ಧರ್ಮಗುರುಗಳು ಭಾಗವಹಿಸಿ ಸಂದೇಶ ನೀಡಿದರು. ಕೊಡಗು ಜಿಲ್ಲೆಯ ಇತರೆ ಸಿಎಸ್ಐ ಚರ್ಚ್ಗಳ ಧರ್ಮಗುರುಗಳು ಹಾಗೂ ಸದಸ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕೆಎಸ್ಡಿ ಉಪಾಧ್ಯಕ್ಷರಾದ ಸಿಸ್ಟರ್ ಸುಜಾತಾ, ಕಾರ್ಯದರ್ಶಿ ವಿಲಿಯಂ ಕೇರಿ, ಖಜಾಂಚಿ ವಿನ್ಸೆಂಟ್ ವಾಲನ್, ಚರ್ಚ್ನ ಧರ್ಮಗುರು ಅಮೃತರಾಜ್ ಖೋಡೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.