ಸಿದ್ದಾಪುರ: ಪಾಲಿಬೆಟ್ಟದ ಟಾಟಾ ಕಾಫಿ ಸಂಸ್ಥೆಯ ಕೋಟೆಬೆಟ್ಟ ಎಸ್ಟೇಟ್ನಲ್ಲಿ ಅವಕಾಡೋ ಕಳ್ಳತನ ಮಾಡಿರುವ ಬಗ್ಗೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೋಟೆಬೆಟ್ಟ ಎಸ್ಟೇಟ್ನಲ್ಲಿ ಅವಕಾಡೋ ಬೆಳೆಯಲಾಗಿದ್ದು, ಬುಧವಾರ ರಾತ್ರಿ ತೋಟದ ಸಿಬ್ಬಂದಿ ಗಸ್ತು ತಿರುಗುವ ವೇಳೆ ಯಾರೋ ಕಳ್ಳರು ತೋಟದಿಂದ ಅವಕಾಡೋ ಕದಿಯುತ್ತಿರುವುದು ತಿಳಿದುಬಂದಿದೆ. ಈ ವೇಳೆ ಕಳ್ಳರು ಸ್ಥಳದಿಂದ ಓಡಿದ್ದಾರೆ. ಬೆಳಿಗ್ಗೆ ನೋಡುವ ವೇಳೆ ಸುಮಾರು ₹28 ಸಾವಿರ ಮೌಲ್ಯದ 80 ಕೆ.ಜಿ ಅವಕಾಡೋ ಕದ್ದಿರುವುದಾಗಿ ತೋಟದ ವ್ಯವಸ್ಥಾಪಕ ಸಂಪತ್ ಸಿದ್ದಾಪುರ ಠಾಣೆಗೆ ದೂರು ಸಲ್ಲಿಸಿದ್ದು, ಪ್ರಕರಣ ದಾಖಲಿಸಲಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260530-51-1458542898

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.