ಸಿದ್ದಾಪುರ: ಅತ್ತಿಮಂಗಲ-ಹೊಸ್ಕೇರಿ ರಸ್ತೆಯಲ್ಲಿ ಕಾರು ಚಾಲಕನ ಮೇಲೆ ಕಾಡಾನೆ ದಾಳಿಗೆ ಯತ್ನಿಸಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಹಾಕತ್ತೂರು ಗ್ರಾಮದ ನಿವಾಸಿ ಸಮದ್ ಎಂಬವರು ಗುರುವಾರ ರಾತ್ರಿ ಸಿದ್ದಾಪುರದಿಂದ ಮರಗೋಡು ಮಾರ್ಗವಾಗಿ ತೆರಳುತ್ತಿದ್ದರು. ಅತ್ತಿಮಂಗಲ ರಬ್ಬರ್ ತೋಟದ ಬಳಿಯಲ್ಲಿ ಎರಡು ಸಲಗ ರಸ್ತೆಯ ಬದಿಯಲ್ಲಿ ನಿಂತಿದ್ದನ್ನು ಗಮನಿಸಿದ ಸಮದ್ ಕಾಡಾನೆಗಳು ರಸ್ತೆಯಿಂದ ತೋಟಕ್ಕೆ ಹೋದ ಬಳಿಕ ತೆರಳಲು ನಿರ್ಧರಿಸಿದ್ದರು. ಕೆಲ ಕಾಲ ಕಾದರೂ ಆನೆಗಳು ರಸ್ತೆಯಿಂದ ಕದಲದೇ ನಿಂತಿದ್ದವು. ಸ್ವಲ್ಪ ಸಮಯದ ಬಳಿಕ ಕಾರನ್ನು ಚಲಾಯಿಸಿದ್ದಾರೆ. ಆನೆಗಳ ಬಳಿ ತಲುಪುವ ವೇಳೆ ಸಲಗವೊಂದು ಕಾರಿನ ಮೇಲೆ ದಾಳಿಗೆ ಮುಂದಾಗಿದೆ. ಸಮದ್ ವೇಗವಾಗಿ ಕಾರು ಚಲಾಯಿಸಿದ್ದು, ಅಪಾಯದಿಂದ ಪಾರಾಗಿದ್ದಾರೆ.

ಅತ್ತಿಮಂಗಲ, ಹೊಸ್ಕೇರಿ ಭಾಗದಲ್ಲಿ ಕಾಡಾನೆ ಹಾವಳಿ ಮಿತಿಮೀರಿದ್ದು, ರಾತ್ರಿ ವೇಳೆ ಸಂಚರಿಸಲು ಭಯಪಡುವಂತಾಗಿದೆ. ರಸ್ತೆ ಬದಿಯಲ್ಲೇ ಕಾಡಾನೆಗಳು ನಿಲ್ಲುತ್ತಿದ್ದು, ಬೈಕ್ ಸವಾರರು ಸಂಚರಿಸುವುದು ಅಸಾಧ್ಯವಾಗಿದೆ. ಮತ್ತೊಂದೆಡೆ ಸಮೀಪದ ಕಾಟಿಬಾಣೆ, ಸಂಪಿಗೆಕೊಲ್ಲಿ ಸೇರಿದಂತೆ ಸುತ್ತಮುತ್ತಲ ಕಾಫಿ ತೋಟಗಳಲ್ಲಿ ಕಾಡಾನೆ ಹಿಂಡು ದಾಂದಲೆ ನಡೆಸುತ್ತಿದ್ದು, ಕಾಫಿ, ಅಡಿಕೆ ಗಿಡಗಳನ್ನು ನಾಶ ಮಾಡುತ್ತಿದೆ. ತೋಟಗಳಲ್ಲಿ ಕಾಡಾನೆಗಳು ಬೀಡು ಬಿಡುತ್ತಿದ್ದು, ಕಾರ್ಮಿಕರು ಕೂಡ ಭಯದಿಂದ ಕೆಲಸ ನಿವಱಹಿಸುವಂತಾಗಿದೆ. ಅರಣ್ಯ ಇಲಾಖೆ ಕಾಡಾನೆಗಳನ್ನು ಕಾರ್ಯಾಚರಣೆ ನಡೆಸಿ, ಬರಡಿ, ವಾಲ್ನೂರು ಮೂಲಕ ದುಬಾರೆ ಅರಣ್ಯಕ್ಕೆ ಅಟ್ಟಿದರೂ, ಕೆಲವೇ ದಿನಗಳಲ್ಲಿ ಕಾಡಾನೆಗಳು ಮರಳಿ ತೋಟಗಳಿಗೆ ಲಗ್ಗೆ ಇಡುತ್ತಿದೆ. ಕಾಡಾನೆ ಹಾವಳಿಯಿಂದ ಗ್ರಾಮಸ್ಥರು ಕಂಗಾಲಾಗಿದ್ದು, ಶಾಶ್ವತವಾಗಿ ಕಾಡಾನೆಗಳನ್ನು ಕಾಡಿಗೆ ಅಟ್ಟಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260530-51-1680647570

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.