ಸಿದ್ದಾಪುರ: ಇಂಜಿಲಗೆರೆ ಗ್ರಾಮದ ಅಯ್ಯಪ್ಪ ದೇವಾಲಯದ ಸಭಾಂಗಣದಲ್ಲಿ ಈಚೆಗೆ ಉಚಿತ ಆರೋಗ್ಯ ಶಿಬಿರ ನಡೆಯಿತು.

ಎಸ್.ಎನ್.ಡಿ.ಪಿ. ಜಿಲ್ಲಾ ವನಿತಾ ಸಂಘಟನೆ, ಎಸ್ ಎನ್.ಡಿ.ಪಿ ಇಂಜಿಲಗೆರೆ ಗೌರಿ ಶಾಖೆ ಹಾಗೂ ಮೂರ್ನಾಡುವಿನ ಕೊಡಗು ಆಯುರ್ವೇದಿಕ್ ಕೇರ್ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಶಿಬಿರವನ್ನು ಎಸ್ ಎನ್.ಡಿ.ಪಿ ಕೊಡಗು ಯೂನಿಯನ್ ಅಧ್ಯಕ್ಷ ವಿ .ಕೆ ಲೋಕೇಶ್ ಉದ್ಘಾಟಿಸಿದರು.

ಆಯುರ್ವೇದ ಚಿಕಿತ್ಸೆಯಿಂದ ನೈಸರ್ಗಿಕ ಗಿಡಮೂಲಿಕೆಗಳಿಂದ ಉತ್ತಮ ಆರೋಗ್ಯವನ್ನು ಕಂಡುಕೊಳ್ಳಬಹುದಾಗಿದೆ. ಇದೀಗ ವಿದೇಶದಲ್ಲೂ ಆಯುರ್ವೇದ ಚಿಕಿತ್ಸೆ ಹೆಸರುವಾಸಿಯಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಎಸ್. ಎನ್ .ಡಿ .ಪಿ ವನಿತಾ ಸಂಘದ ಜಿಲ್ಲಾ ಅಧ್ಯಕ್ಷೆ ರೀಶಾ ಸುರೇಂದ್ರನ್ ಮಾತನಾಡಿ, ಎಲ್ಲರ ಆರೋಗ್ಯ ಕ್ಕಾಗಿ ಸಂಘಟನೆಯಿಂದ ಉಚಿತ ಶಿಬಿರ ಹಮ್ಮಿಕೊಳ್ಳಲಾಗಿದೆ. ಎಲ್ಲರೂ ತಪಾಸಣೆ ಮಾಡಿಸಲು ಸಲಹೆ ನೀಡಿದರು.

ಮೂರ್ನಾಡು ಆಯುರ್ವೇದ ಆಸ್ಪತ್ರೆಯ ಮುಖ್ಯಸ್ಥ ಜೈಸನ್, ವೈದ್ಯರಾದ ಡಾ. ಅನೂಪ್, ಡಾ.ದೀಪಿತ,ಇಂಜಿಲಗೆರೆ ಶಾಲೆಯ ಅಧ್ಯಕ್ಷ ಹರಿದಾಸ್ ಪಿ. ಜಿ., ಉಪಾಧ್ಯಕ್ಷ ಮಣಿಲಾಲ್, ಕಾರ್ಯದರ್ಶಿ ಎಂ.ಜಿ. ರಾಜು, ಅನಿತಾ ಮಣಿಲಾಲ್ , ಖಜಾಂಚಿ ಧರ್ಮಜ, ಗ್ರಾಮದ ಪ್ರಮುಖರಾದ ಕೋಡಿರ ಕುಶೀ ಭೀಮಯ್ಯ, ಸುಗದನ್, ಸುರೇಶ್ ಪಿ .ಎಸ್ ಹಾಜರಿದ್ದರು. ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260322-51-1652267794

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.